MTB Nagaraj: ಎಂ ಟಿ ಬಿ ನಾಗರಾಜ್ ಆದಾಯ ಪ್ರತಿ ತಿಂಗಳಿಗೆ 10 ಕೋಟಿ ರೂಪಾಯಿಗಳು!

MTB Nagaraj's income is Rs 10 Crores per month

ಎಂ ಟಿ ಬಿ ನಾಗರಾಜ್ ಅವರ ಇವತ್ತಿನ ಆಸ್ತಿಯ ಮೌಲ್ಯ 1195 ಕೋಟಿ ರೂಪಾಯಿಗಳು. ಕಳೆದ ಸಲ, ಮೇ 2018 ರಲ್ಲಿನ ವಿಧಾನಸಭಾ ಚುನಾವಣಾ ಸಂಧರ್ಭ ಎಂ ಟಿ ಬಿ ಯವರು 1015 ಕೋಟಿ ರೂಪಾಯಿಗಳ ಅಸ್ತಿಯನ್ನು ತಮ್ಮ ಮತ್ತು ಪತ್ನಿಯ ಹೆಸರಿನಲ್ಲಿ ಘೋಷಿಸಿಕೊಂಡಿದ್ದರು. ಒಟ್ಟಾರೆಯಾಗಿ ಆಸ್ತಿಯಲ್ಲಿ 180 ಕೋಟಿಗಳಷ್ಟು ಏರಿಕೆಯಾಗಿದೆ. ಪ್ರತಿಶತ ದೃಷ್ಟಿಯಲ್ಲಿ 12% !
ನಾವು ನೀವೆಲ್ಲ 180 ಕೋಟಿ ಗಳಿಸಬೇಕಾದರೆ ಎಷ್ಟು ವರ್ಷ ಬೇಕಾಗಬಹುದು, ಇವತ್ತಿನಿಂದ ಶುರುಮಾಡಿದರೆ? ಆದರೆ, ಎಂ ಟಿ ಬಿ ಸಲೀಸಾಗಿ ಒಂದೂವರೆ ವರ್ಷದಲ್ಲಿ 180 ಕೋಟಿ ಅಸ್ತಿ ಹೆಚ್ಚಿಸಿಕೊಂಡಿದ್ದಾದರೂ ಹೇಗೆ?
ಥಟ್ ಐಸ್ ದಿ ಪವರ್ ಆಫ್ ಮನಿ !

”ಅರ್ನಿಂಗ್ ಫಸ್ಟ್ ಮಿಲಿಯನ್ ಐಸ್ ದಿ ಹಾರ್ಡೆಸ್ಟ್ ” ಎಂಬ ಒಂದು ಆಂಗ್ಲ ಮಾತಿದೆ. ಒಂದು ಮಿಲಿಯನ್ ಅಂದರೆ ಭಾರತದ 10 ಲಕ್ಷ ರೂಪಾಯಿಗಳು. ಆದರೆ 1800 ಮಿಲಿಯನ್ ನ ಎಂ ಟಿ ಬಿ ನಾಗರಾಜ್ ಕಳೆದ 18 ತಿಂಗಳಿನಲ್ಲಿ ದುಡಿದಿದ್ದಾರೆ. ಅಂದರೆ ತಿಂಗಳ ಲೆಕ್ಕದಲ್ಲಿ ಪ್ರತಿ ತಿಂಗಳಿಗೆ 10 ಕೋಟಿ ರೂಪಾಯಿಗಳು !
ಅಷ್ಟೊಂದು ದುಡ್ಡು ಅವರು ದುಡಿದಿಲ್ಲ. ಅವರ ದುಡ್ಡು ಅವರ ಪರವಾಗಿ ದುಡಿದಿದೆ. ನಾಗರಾಜ್ ಅವರು ಅವತ್ತು ಮುಂಬೈನ ರೆಸಾರ್ಟ್ ನಲ್ಲಿ ಮಲಗಿದ್ದಾಗಲೂ, ಇತ್ತ ಅವರು ಹಾಕಿದ್ದ ( ಅಥವಾ ಹಿರೀಕರು) ಆಸ್ತಿಯ ಬೀಜ, ಮೊಟ್ಟೆಯ ಮೇಲೆ ಮೊಟ್ಟೆಯನಿಟ್ಟು ಮರಿ ಮಾಡುತ್ತಲೇ ಇದೆ. ಅದರ ಫಲವನ್ನು ಅವರು ಉಣ್ಣುತ್ತಲೇ ಇರುತ್ತಾರೆ, ಮುಂದೆಯೂ. ” ಹೇ, ಎಲ್ಲ ರಾಜಕೀಯಕ್ಕೆ ಬಂದು, ಜನರನ್ನು ಮುಂಡಾಯಿಸಿ ರಾಜಕಾರಣಿಗಳು ದುಡ್ಡು ಮಾಡಿಬಿಟ್ಟರು, ಎಲ್ರು ಕೂಡ ಕಳ್ಳರು ” ಮುಂತಾಗಿ ಇವತ್ತು ಜನ ಮಾತಾಡಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಎಲ್ಲ ಸಂದರ್ಭಗಳಲ್ಲೂ ಅದು ನಿಜವಲ್ಲ.

ಇವತ್ತು ನಾವು ಅವರ ಸಹಸ್ರ ಕೋಟಿಯಿಂದ ಕಲಿಯಬೇಕಾದ್ದು ಒಂದೇ. ಆ ಸಾವಿರ ಕೋಟಿ, ಸುಮ್ಮನೆ ಆಗಿಲ್ಲ. ಒಂದಾನೊಂದು ಕಾಲದಲ್ಲಿ, ಅವರಾಗಲೀ ಅವರ ಹಿರೀಕರಾಗಲಿ, ಹೊಟ್ಟೆ ಬಟ್ಟೆ ಕಟ್ಟಿ, ಇದ್ದ ಆಸ್ತಿ ಪಾಸ್ತಿ ಮಾರದೆ, ಪಿತ್ರಾರ್ಜಿತವಾದ ಜಾಗವನ್ನು ಕಾಪಾಡಿಕೊಂಡು ಬಂದರು. ಮತ್ತಷ್ಟು ಅದಕ್ಕೆ ಸೇರಿಸಿದರು. ಹರಿದು ತಿಂದು ಮುಕ್ಕಿಬಿಟ್ಟಿದ್ದಾರೆ ಇವತ್ತಿಗೆ ಲಂಗೋಟಿಯಲ್ಲಿರಬೇಕಾಗುತ್ತಿತ್ತು. ಅಂದಿನ ಶ್ರಮ, ಎಷ್ಟೋ ಪೀಳಿಗೆಯ ನಂತರ ಈಗ ಎಂ ಟಿ ಬಿ ನಾಗರಾಜರಿಗೆ ದೊರಕಿದೆ. ಎಷ್ಟೋ ಸಲ ನಮ್ಮ ಶ್ರಮದ ಫಲವನ್ನು ನಾವೇ ಉಣ್ಣುತ್ತೇವೆಂಬ ಗ್ಯಾರಂಟಿಯಿಲ್ಲ. ನೀವು ಬೇಕಾದರೆ ಗಮನಿಸಿ, ಮುಪ್ಪಾನ ಮುದುಕರು ಕೂಡ, ಗಿಡ ನೆಡುವ, ಹಣ್ಣಿನ ಗಿಡ ನೆಟ್ಟು ಬದುಕಿಸಲು ಪ್ರಯತ್ನಿಸುತ್ತಿರುತ್ತಾರೆ. ತಾವೇ ಅದರ ಹಣ್ಣು ತಿನ್ನುವ ದುರಾಸೆ ಅವರಿಗಿರುವುದಿಲ್ಲ. ಊರುವ ಬೀಜ, ನೆಡುವ ಶ್ರಮ ಒಂದು ಕರ್ತವ್ಯ ಅಷ್ಟೇ. ಸಮಷ್ಟಿ ಅದರ ಲಾಭ ಪಡೆದುಕೊಳ್ಳಬಹುದು. ಹಾಗೇ, ಸಮಯವಿದ್ದರೆ ಒಮ್ಮೆ ಎಂ ಟಿ ಬಿ ನಾಗರಾಜರ ಈಗಿನ ಮತ್ತು ಹದಿನೆಂಟು ತಿಂಗಳ ಆಸ್ತಿಯ ಮೌಲ್ಯವನ್ನು ತುಲನೆ ಮಾಡಿ ನೋಡಿ. Have some takeaway.

ವಾರ್ಷಿಕ ಆದಾಯ (ನವೆಂಬರ್, 2019 ಕ್ಕೆ)

ಒಟ್ಟು ತಮ್ಮಮತ್ತು ಪತ್ನಿಯ ಒಟ್ಟು ಆಸ್ತಿಯ ಮೌಲ್ಯ 1195 ಕೋಟಿ ರೂ ಗಳು.
ವಿವಿಧ ಬ್ಯಾಂಕುಗಳಲ್ಲಿ ಇರುವ ಸಾಲ : 27.70 ಕೋಟಿ ರೂ ಗಳು.
ಉಳಿತಾಯ ಖಾತೆಯಲ್ಲಿರುವ ಹಣ : 4.8 ಕೋಟಿ ರೂ ಗಳು.
ಫಿಕ್ಸೆಡ್ ಡಿಪಾಸಿಟ್ : 166.96 ಕೋಟಿ ರೂ ಗಳು.
ರಿಯಲ್ ಎಸ್ಟೇಟ್ ಪಾಲುದಾರಿಕೆಯಲ್ಲಿ : 100.54
ಖಾಸಗಿ ಸಂಸ್ಥೆಗಳಿಗೆ ಕೊಟ್ಟ ಸಾಲ : 303.07 ಕೋಟಿ ರೂ ಗಳು.
ಪತ್ನಿ ಮತ್ತು ತಮ್ಮ ಹೆಸರಿನಲ್ಲಿರುವ ಸ್ಥಿರಾಸ್ತಿ : 609.17 ಕೋಟಿ ರೂ ಗಳು.
ಚರಾಸ್ತಿ : 3.71 ಕೋಟಿ ರೂ ಗಳು.

ವಾರ್ಷಿಕ ಆದಾಯ (ಮೇ, 2018 ಕ್ಕೆ)

ಸ್ವಯಂ: 1,04,41,26,570 ರೂ
ಪತ್ನಿ: 52,63,02,640 ರೂ
ಚರ ಸ್ವತ್ತುಗಳು
ಕೈಯಲ್ಲಿ ನಗದು
ಸ್ವಯಂ: 6,67,532 ರೂ
ಪತ್ನಿ: 4,89,999 ರೂ
ಚರ ಒಟ್ಟು ಮೌಲ್ಯ:
ಸ್ವಯಂ: 3,14,75,54,785 ರೂ
ಪತ್ನಿ: 1,22,40,09,258 ರೂ
ಸ್ಥಿರ ಆಸ್ತಿಗಳು:
ಕೃಷಿ ಭೂಮಿ
30,86,75,504 ಮೌಲ್ಯದ 42 ಕೃಷಿ ಭೂಮಿಯನ್ನು ಅವರು ಹೊಂದಿದ್ದಾರೆ
ಅವರ ಪತ್ನಿ 24,00,000 ರೂ.ಗಳ 1 ಕೃಷಿ ಭೂಮಿಯನ್ನು ಮತ್ತು 85,25,000 ರೂ
ಕೃಷಿಯೇತರ ಭೂಮಿ
ಸ್ವಯಂ: 2,81,26,45,728 ಮೌಲ್ಯದ 91 ಆಸ್ತಿಗಳು
ವಾಣಿಜ್ಯ ಕಟ್ಟಡಗಳು
ಸ್ವಯಂ: ರೂ 39,65,30,432 ಮೌಲ್ಯದ 6 ಆಸ್ತಿಗಳು
ಹೆಂಡತಿ: 28,10,00,000 ರೂ
ವಸತಿ ಕಟ್ಟಡಗಳು / ಅಪಾರ್ಟ್ಮೆಂಟ್
ಸ್ವಯಂ: 42,85,01,616 ಮೌಲ್ಯದ 16 ಆಸ್ತಿಗಳು
ಪತ್ನಿ: 46 ಆಸ್ತಿಗಳು 46,02,87,000 ರೂ
ವಾಹನಗಳು
ಸ್ವಯಂ:
ಟೊಯೋಟಾ ಪ್ರಡೊ: 65,18,761 ರೂ
ಮಹೀಂದ್ರಾ ಬೊಲೆರೊ: 7,83,680 ರೂ
ಹ್ಯುಂಡೈ I 10: 6,50,800 ರೂ
ಟೊಯೋಟಾ ಫಾರ್ಚೂನರ್: 29,00,666 ರೂ
ಮರ್ಸಿಡಿಸ್ ಬೆಂಜ್: 96,12,980 ರೂ
ಮಹೀಂದ್ರಾ ಥಾರ್ ಜೀಪ್: 4,00,000 ರೂ
ಮಹೀಂದ್ರಾ ಬೊಲೆರೊ: 5,80,000 ರೂ
ಹೆಂಡತಿ:
ಪೋರ್ಷೆ ಪ್ರೈಮ್ ಟರ್ಬೊ- 1,72,82 ರೂ, 434 ರೂ
ವ್ಯಕ್ತಿಗಳು ಮತ್ತು ಇತರ ಘಟಕಗಳಿಗೆ ಸಾಲ
ಸ್ವಯಂ: 2,33,79,47,741 ರೂ
ಪತ್ನಿ: 26,00,000 ರೂ
ಸಾಲಗಳು
ಬ್ಯಾಂಕುಗಳು / ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳು
ಸ್ವಯಂ: 27,43,44,992 ರೂ
ಹೆಂಡತಿ: 25,00,000 ರೂ

Leave A Reply

Your email address will not be published.