ಬಿಗ್ ಬಾಸ್ ರವಿ ಬೆಳಗೆರೆ ಕುರಿ ಪ್ರತಾಪ್ ಗೆ ಮಾಡಿದ ತಮಾಷೆ

0 139

ಆ ದಿನ ರವಿ ಬೆಳಗೆರೆ ಬಿಗ್ ಬಾಸ್ ಮನೆಗೆ ಮೂರನೆಯವರಾಗಿ ಕೋಟು ಹಾಕ್ಕೊಂಡು, ಅರ್ಧ ವಾಲ್ಕೊಂಡು ಒಳಕ್ಕೆ ಹೊರಟಿದ್ದರು. ಜಾರು ಬಾಗಿಲ ಒಳಗೆ ಅಡಿಯಿಟ್ಟಾಗ ಅವರಿಗೆ ಸಿಕ್ಕಿದ್ದು ಕುರಿ. ಅಲಿಯಾಸ್ ಕುರಿ ಪ್ರತಾಪ್. ಉದಯ ಟಿವಿ ಯ ಕುರಿಗಳು ಸಾರ್ ಕುರಿಗಳು ಕಾರ್ಯಕ್ರಮದ ಮೂಲಕ ಫೇಮಸ್ ಆದವರು ಕುರಿ ಪ್ರತಾಪ್. ತಮ್ಮ ವಿಶಿಷ್ಟ ಮ್ಯಾನರಿಸಂನ ಮೂಲಕ ಮತ್ತು ಆ ದಿನ ಉದಯ ಟಿವಿಯ ಕುರಿಗಳು ಸಾರ್ ಕುರಿಗಳು ಪ್ರೊಫ್ರಾಮ್ನಲ್ಲಿ ಗಿಫ್ಟ್ ಹ್ಯಾ೦ಪರ್ ಅನ್ನು ‘ತಿರುಗಿಸಿ’ ಕೊಡುವ ಸ್ಟೈಲ್ ಲ್ಲಿ ಮುನ್ನೆಲೆಗೆ ಬಂ ದವರು.
ಅವತ್ತು ರವಿ ಬೆಳಗೆರೆ ದೊಡ್ಮನೆಗೆ ಎಂಟ್ರಿ ಕೊಟ್ಟಾಗ ಬೆಳಗೆರೆಗೆ ಆಸರೆ ಆದವರು ಕುರಿಪ್ರತಾಪ್. ರವಿ ಬೆಳಗೆರೆಯವರು ಇದ್ದ ಒಂದು ವಾರವೂ ಕುರಿಯ ಬೆನ್ನಿಗೆ ಜೋತು ಹಾಕ್ಕೊಂಡೆ ಇದ್ದುದನ್ನು ಬಿಗ್ ಬಾಸ್ ಪ್ರೇಕ್ಷಕರೆಲ್ಲರೂ ನೋಡಿದ್ದಾರೆ. ಬೆಳಗೆರೆ ಅವರು ದೊಡ್ಮನೆಗೆ ಒಳಗಡಿ ಇಟ್ಟ ಕೂಡಲೇ ಅಲ್ಲಿ ಜಾಸ್ತಿ ಜನರಿರಲಿಲ್ಲ. ಸಿಕ್ಕ ಸ್ವಲ್ಪ ಸಮಯದಲ್ಲಿ ಕುರಿಗೆ ಮಾಡಿದ ತಮಾಷೆಯನ್ನು ಬಹುಷ: ಹೆಚ್ಚಿನ ಜನರು ನೋಡಿರಲಿಕ್ಕಿಲ್ಲ.
ಅವತ್ತು ರವಿ ಮತ್ತು ಕುರಿ ಪ್ರತಾಪ್ ಕುಳಿತಿದ್ದರು. ರವಿ, ಕುರಿ ಪ್ರತಾಪ್ ರನ್ನು ಮಾತಿಗೆ ಎಳೆದರು.
” ಹೇಗಿದ್ದೀಯಾ ಕುರಿ?”
”ಸಾರ್, ನಾನು ಚೆನ್ನಾಗಿದ್ದೀನಿ, ನೀವು”
” ಮತ್ತೆ ಎಷ್ಟು ಫಿಲಂ ಮಾಡಿದ್ದಿ ಕುರಿ?”
” ಸಾರ್ ನಾನು ಒಂದು ಮೂವತ್ತೈದು ಪಿಕ್ಚರ್ ಮಾಡಿದ್ದೇನೆ “
ಆಗ ರವಿಬೆಳಗೆರೆ ಕುರಿ ಪ್ರತಾಪರ ಕೊಬ್ಬಿದ ಹೊಟ್ಟೆಗೆ ತಮ್ಮ ಬೆರಳಿನಿಂದ ಚುಚ್ಚಿ ಹೇಳ್ತಾರೆ, ಹಾಗಾದ್ರೆ ” ಹಾಗಾದ್ರೆ ಕುರಿ ಬಲಿತಿದೆ”
ಇದು ಬೆಳಗೆರೆಗೆಯವರ ಹಾಸ್ಯ ಪ್ರಜ್ಞೆ.
ಹಿಂದೊಮ್ಮೆರವಿ ಬೆಳಗೆರೆಯವರಿಗೆ 60 ವರ್ಷ ತುಂಬಿದ ಸಂದರ್ಭದಲ್ಲಿ ಸಂದರ್ಶಕರೊಬ್ಬರು ಅವರನ್ನು ಕೇಳಿದ್ದರು. ” ಸರ್ ನಿಮಗೆ 60 ತುಂಬಿದೆ. ನಿಮ್ಮನ್ನು ಈಗ ಸೀನಿಯರ್ ಸಿಟಿಜನ್ ಅಂತ ನಾವು ಕರಿಯಬಹುದಾ?”
ಅದಕ್ಕೆ ಬೆಳಗೆರೆಯವರು ,” ಸೀನಿಯರ್ ಸಿಟಿಜನ್ ಅಂತ ಕರೆಯೋದ್ರಲ್ಲಿ ನನ್ನ ತಕರಾರೇನೂ ಇಲ್ಲ. ಆದ್ರೆ ಸಿಟಿಜನ್ ಹೌದೋ ಅಲ್ವೋ ಅಂತ ನಂಗೆ ಡೌಟ್ ಆಗ್ತಿದೆ” ಎಂದು ತಮ್ಮನ್ನು ತಾವು ಗೇಲಿ ಮಾಡಿಕೊಂಡಿದ್ದರು.
ದಟ್ಸ್ ಬಿಗ್ ಬಾಸ್ ರವಿ ಬೆಳಗೆರೆ !

Leave A Reply