ಮೋದಿಯ ಚೇಂಜ್ ವಿಥ್ ಇನ್ ಮತ್ತು ಎಸ್ಪಿ ಬಾಲಸುಬ್ರಮಣ್ಯಮ್ & ಜಗ್ಗೇಶ್

ಇದು ನರೇಂದ್ರ ಮೋದಿಯವರು ಕಳೆದ ಅಕ್ಟೋಬರ್ 29 ರಂದು ತಮ್ಮ ಮನೆಯಲ್ಲಿ ಆಯೋಜಿಸಿದ್ದ ‘ಚೇಂಜ್ ವಿಥ್ ಇನ್’ ಕಾರ್ಯಕ್ರಮದ ಕುರಿತಾದದ್ದು. ಆ ಸಭೆಗೆ ಹೆಚ್ಚಿನ ಎಲ್ಲ ಉತ್ತರ ಭಾರತೀಯ ನಟ ನಟಿಯರನ್ನು ಆಹ್ವಾನಿಸಿದ್ದು, ದಕ್ಷಿಣ ಭಾರತೀಯರನ್ನು ಕಡೆಗಣಿಸಲಾಗಿದೆ ಎಂದು ನಮ್ಮ ಕನ್ನಡ ನಟ ಮತ್ತು ಬಿಜೆಪಿಯದೇ ವಿಧಾನ ಪರಿಷತ್ ಸದಸ್ಯ ಜಗ್ಗೇಶ್ ರವರು ಮೋದಿಯವರ ಮೇಲೆ ಮುನಿಸಿಕೊಂಡದ್ದು ನಮಗೆಲ್ಲ ಗೊತ್ತೇ ಇದೆ.
ಈಗ, ಎಸ್ ಪಿ ಬಾಲಸುಬ್ರಮಣ್ಯಂ ಅವರ ಸರದಿ. ಎಸ ಪಿ ಬಿ ಯವರು ತಮ್ಮ ಅತ್ಯಾಪ್ತ ರಾಮೋಜಿ ಫಿಲಂ ಸಿಟಿ ಯಾ ಮಾಲೀಕ ರಾಮೋಜಿ ರಾವ್ ಅವರ ಒತ್ತಾಯದ ಮೇರೆಗೆ ಪ್ರಧಾನಿಯವರು ತಮ್ಮ ಮನೆಯಲ್ಲಿ ಆಯೋಜಿಸಿದ್ದ, ಮಹಾತ್ಮಾ ಗಾಂಧಿಯವರ 150 ನೇ ಜನ್ಮಶತಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ಧ ‘ಚೇಂಜ್ ವಿಥ್ ಇನ್ ‘ ಸಂಮಾರಂಭಕ್ಕೆ ಹೋಗಿದ್ದರು. ಸಹಜವಾಗಿ, ಅಲ್ಲಿದ್ದ ಭದ್ರತಾ ಸಿಬ್ಬಂದಿಯವರು ಇವರ ಮೊಬೈಲ್ ಫೋನ್ ಅನ್ನು ಲಾಕರಿನಲ್ಲಿತ್ತು ಟೋಕನ್ ಪಡೆದು ಒಳ ಹೋಗುವಂತೆ ಹೇಳಿದ್ದರು. ಆದರೆ ಆ ನಂತರ ಒಳಗಡೆ ಬಾಲಿವುಡ್ ನ ಇತರ ನಟನಟಿಯರು ಪ್ರಧಾನಿ ನರೇಂದ್ರ ಮೋದಿಯವರ ಜತೆ ಸೆಲ್ಫಿ ತೆಗೆಯುತ್ತಿರುವುದನ್ನು ನೋಡಿದ ದೃಶ್ಯ ಏಸ್ ಪಿ ಬಾಲಸುಬ್ರಮಣ್ಯಂ ಅವರನ್ನು ಸಹಜವಾಗಿ ಕೆರಳಿಸಿದೆ. ನೋವನ್ನು ಅವರು ತಮ್ಮ ಫೇಸ್ ಬುಕ್ ಪೇಜ್ ನ ಮೂಲಕ ತೋರ್ಪಡಿಸಿಕೊಂಡಿದ್ದಾರೆ.
ಇದು ಸಹಜ ಕೂಡ, ಈ ಸೋಶಿಯಲ್ ಮೀಡಿಯಾಗಲಿರುವುದೇ ನಮ್ಮ ಸಂತೋಷ್, ನಗು, ದುಃಖ, ಕೋಪ – ಮುಂತಾದುವುಗಳನ್ನು ಹೊರಗೆ ಬಿಡಲು.ಇನ್ನೊಬ್ಬರ ಮುಂದೆ ಹೇಳಿಕೊಂಡು ಹಗುರವಾಗಲು. ಒಂದು ವೇಳೆ ಅವನ್ನೆಲ್ಲ ವೆಂಟ್ ಔಟ್ ಮಾಡದೆ ಇದ್ದರೆ ಅದು ಒಳಗೆ ಬೆಳೆದು ಬಾಯಿಲರ್ ಆಗುವುದಂತೂ ಗ್ಯಾರಂಟಿ !
ಆದರೆ, ಈಗ ಈ ವಿಷಯಕ್ಕೆ ಸಂಬಧಿಸಿದಂತೆ ಪ್ರಧಾನಿ ಮೋದಿಯವರನ್ನು ದೂರುವುದು ಎಷ್ಟು ಸರಿ?
ನಮಗೆ ನಮ್ಮ ಭಾರತೀಯ ಮನಸ್ಥಿತಿ ಸರಿಯಾಗಿ ಗೊತ್ತಿದೆ. ನಾವು ಆರಂಭ ಶೂರರು. ನಮ್ಮ ಭದ್ರತಾ ಸಿಬ್ಬಂದಿಗಳು ಕೂಡಾ ಅಷ್ಟೇ ! ಪ್ರಾರಂಭದಲ್ಲಿ ಅನಗತ್ಯ ಸ್ಟ್ರಿಕ್ಟ್ ಮಾಡುತ್ತಾರೆ, ಕೊನೆ ಕೊನೆಗೆ ಯಾರು ಹೇಗೆ ಬೇಕಾದರೂ ಹೋಗಬಹುದು, ಏನನ್ನು ಬೇಕಾದರೂ ತೆಗೆದುಕೊಂಡು ಹೋಗಬಹುದು. ನಾವು ನೀವು ಇದನ್ನು ಎಷ್ಟು ಸಭೆ ಸಮಾರಂಭದಲ್ಲಿ ನೋಡಿಲ್ಲ ? ಬಹುಶ: ಮೊನ್ನೆ ಪ್ರಧಾನಿ ನಿವಾಸದಲ್ಲಿ ಕೂಡ ಇಂತದ್ದೇ ನಡೆದಿರಬಹುದು. ಅಥವಾ, ಬಾಲಿವುಡ್ ಮಂದಿ, ” ಇಲ್ಲ, ನಮಗೆ ಫೋನ್ ಬೇಕೇ ಬೇಕು, ಸೆಲ್ಫಿ ತೆಗೆದುಕೊಳ್ಳಲಿಕ್ಕಿದೆ. ಬೇಕಾದರೆ ಫೋನ್ ನ ಸ್ಕ್ಯಾನ್ ಮಾಡಿ ಸರಿಯಾಗಿ ಚೆಕ್ ಮಾಡಿಯೇ ಕೊಡಿ ”ಎಂದು ವಾದಿಸಿ ಪರ್ಮಿಷನ್ ಗ್ರಾಂಟ್ ಮಾಡಿಕೊಂಡು ಹೋಗಿರಬಹುದು. ಎಷ್ಟಾದರೂ ವಾದಿಸುವುದರಲ್ಲಿ ಅವರದು ಎತ್ತಿದ ಕೈ ಅಲ್ಲವಾ ? ಅಥವಾ, ಕೊನೆಯ ಕ್ಷಣದಲ್ಲಿ ಸೆಲ್ಫಿ ತೆಗೆದುಕೊಳ್ಳಲೊಸ್ಕರ ಮೊಬೈಲು ಒಳಗೆ ತರಿಸಿಕೊಂಡರಾ ?
ಗೊತ್ತಿಲ್ಲ. ಅಥವಾ, ವರ್ಸ್ಟ್ ಕೇಸ್ ನಲ್ಲಿ, ಭದ್ರತಾ ಸಿಬ್ಬಂದಿಯವರು ಬಹುತೇಕರು ಉತ್ತರ ಭಾರತೀಯರು. ಆದ್ದರಿಂದ ಅವರುಗಳು ಉತ್ತರಭಾರತದ ನಟನಟಿಯರು ಫೇವರ್ ಮಾಡಿರಬಹುದಾ? ಈ ಎಲ್ಲ ಸಂಭಾವ್ಯತೆಗಳಲ್ಲಿ ಯಾವುದೊ ಒಂದು ಸರಿ ಇರಬಹುದು, ಅಥವಾ ಇನ್ನ್ಯಾವುದೋ ಕಾರಣ ಇರಬಹುದು.
ಆದರೆ ಅದಕ್ಕೆ ಪ್ರಧಾನಿಯವರನ್ನು ಕಾರಣ ಮಾಡಲು ಆಗುತ್ತದೆಯಾ? ಇಂತಹ ಚಿಕ್ಕ ಸಂಗತಿಗಳನ್ನು ಕೂಡ 125 ಕೋಟಿ ಜನಸಂಖ್ಯೆಯಿರುವ ದೇಶದ ಪ್ರಧಾನಿಗೆ ಗಮನಿಸಲಿಕ್ಕಾಗುತ್ತದೆಯಾ ?
ನಮ್ಮ ಹಿರಿಯ ಸಂಗೀತಕಾರ, ಸ್ವರ ಮಾಂತ್ರಿಕ ಬಾಲುರವರು ಫೇಸ್ಬುಕ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದರ ಜತೆಗೆ, ಒಂದಷ್ಟು ಹೆಚ್ಚಿಗೆ ಪ್ರಾಜ್ಞರಾಗಿ ನಡೆದುಕೊಳ್ಳಬೇಕಿತ್ತು. ‘ ಮೋದಿ ತಾರತಮ್ಯ ಮಾಡಿದ್ದಾರೆ ಅನ್ನುವುದು ನನ್ನ ಆಪಾದನೆಯಲ್ಲ. ಆದರೆ ನಮಗೆ ಫೋನ್ ಬಳಸಲು ಬಿಟ್ಟಿಲ್ಲ, ಬೇರೆಯ ಬಾಲಿವುಡ್ ನಟ ನಟಿಯರಿಗೆ ಬಿಟ್ಟಿದ್ದಾರೆ, ನನಗೆ ಇದರಿಂದ ಬೇಜಾರಾಗಿದೆ. ಮೋದಿಯವರ ಗಮನಕ್ಕೆ ಬಾರದಂತೆ ನಡೆದಿರಬಹುದು “ ಹೀಗೆ ಹೇಳಿದ್ದರೆ ಮಾತಿಗೆ ಅವರ ಇನ್ನಷ್ಟು ತೂಕವಿರುತ್ತಿತ್ತು.
ಆದರೆ, ಜಗ್ಗೇಶ್ ರವರು ಎತ್ತಿದ ಪ್ರಶ್ನೆಗೆ ನಾವು ಪ್ರಧಾನಿ ಮೋದಿಯವರನ್ನು ಉತ್ತರದಾಯಿಯಾಗಿ ಮಾಡಬಹುದು. ಉತ್ತರ ಭಾರತ-ದಕ್ಷಿಣ ಭಾರತ ; ಆರ್ಯ-ದ್ರಾವಿಡ ; ಹಿಂದಿ- ದ್ರಾವಿಡ ಭಾಷೆಗಳು -ಇವೆಲ್ಲವೂ ಸ್ವತಂತ್ರಪೂರ್ವದಿಂದಲೇ ಇದ್ದದ್ದೇ. ನಿನ್ನೆ ಮೊನ್ನೆಯೂ ಏಕ ಭಾಷೆ – ಹಿಂದಿ ಭಾಷೆಗೆ ವಿರುದ್ಧ ದಕ್ಷಿಣದ ಕನ್ಯಾಕುಮಾರಿಯಲ್ಲಿ ಹಾಕಿದ ಕೂಗು ಉತ್ತರದ ದೆಹಲಿಯಲ್ಲಿ ಮಾರ್ದನಿಯಾಗಿತ್ತು. ಇಂತಹ ಸಂದರ್ಭದಲ್ಲಿ, ಪ್ರಧಾನಿ ಕಚೇರಿಯವರು ಹಿರಿಯರಾದ, ಭಾಷೆಗಳನ್ನು ಮೀರಿದ ಸಾಧಕರ ಮತ್ತಷ್ಟು ಬ್ಯಾಲೆನ್ಸ್ಡ್ಆದ ಪಟ್ಟಿ ತಯಾರಿಸಿ ‘ಚೇಂಜ್ ವಿಥ್ ಇನ್’ ಮಾಡಬಹುದಿತ್ತು.
‘ ಚೇಂಜ್ ವಿಥ್ ಇನ್ ‘ ಅನ್ನುವುದು ಅಂದರೆ ಇದೇ !
ಅದು ಒಟ್ಟಾರೆ ಮಹಾತ್ಮಾ ಗಾ೦ಧಿಯ ಬದುಕಿನ ಸಿದ್ಧಾಂತದ ಕುರಿತಾದದ್ದು. ಇದು ನಾವು ಯೋಚಿಸುವ ರೀತಿ, ಬದುಕುವ ಪರಿ, ಅಭಿವ್ಯಕ್ತಿಸುವ ಮಾಧ್ಯಮ ಮತ್ತು ತೆರೆದುಕೊಳ್ಳುವ ವಿಧಾನ. ಇವೆಲ್ಲದರಲ್ಲೂ ಬದಲಾವಣೆ ಅಗತ್ಯ. ವ್ಯಕ್ತಿ ಆಂತರಿಕವಾಗಿ ಬದಲಾದರೆ, ಆತನು ಯೋಚಿಸುವ ಮತ್ತು ಸುತ್ತಲಿನ ಪರಿಸ್ಥಿತಿಗೆ ರಿಯಾಕ್ಟ್ ಮಾಡುವ ವಿಧಾನ ಕೂಡಾ ಬದಲಾಗುತ್ತದೆ. ‘ ಚೇಂಜ್ ವಿಥ್ ಇನ್ ‘ ಮೊದಲಿಗೆ ನಮ್ಮ ಸೆಲೆಬ್ರಿಟಿ ವರ್ಗದಲ್ಲಿ ಆಗಬೇಕಾಗಿದೆ !
” ದಿ ಬೆಸ್ಟ್ ವೆ ಟು ಫೈಂಡ್ ಯುವರ್ ಸೆಲ್ಫ್ ಐಸ್ ಟು ಲೂಸ್ ಯುವರ್ ಸೆಲ್ಫ್ ಇನ್ ದಿ ಸರ್ವಿಸ್ ಆಫ್ ಅದರ್ಸ್ ” ಮಹಾತ್ಮಾ ಗಾಂಧಿಯವರ ಈ ಮಾತು ‘ ಚೇಂಜ್ ವಿಥ್ ಇನ್ ‘ ನ ಒಟ್ಟಾರೆ ಆಶಯ. ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.