ರಾಮ ಮಂದಿರ ವಿವಾದಿತ ಜಾಗ ಹಿಂದೂಗಳ ಪಾಲಾಗಲಿದೆ ಗೊತ್ತೇ?

0 155

ಬಾಬರಿ ರಾಮ ಮಂದಿರ ವಿವಾದಕ್ಕೆ ಸರಿ ಸುಮಾರು 500 ವರ್ಷಗಳಿಗೂ ಮೇಲ್ಪಟ್ಟ ಇತಿಹಾಸವಿದೆ. ಆ ದಿನ ದೊರೆ ಬಾಬರನ ಸೇನಾಧಿಪತಿಯಾಗಿದ್ದ ಮೀರ್ ಬಖಿ ಎಂಬಾತ 1528-29 ರಲ್ಲಿ ಬಾಬರಿ ಮಸೀದಿಯನ್ನು ಕಟ್ಟಿಸಿದನು. ಆದರೆ ಮಸೀದಿಯನ್ನು ರಾಮನ ಜನ್ಮಭೂಮಿಯಿದ್ದ ಸ್ಥಳದಲ್ಲಿ ಮತ್ತು ಅಲ್ಲಿದ್ದ ದೇವಾಲಯವನ್ನು ಕೆಡವಿ ಕಟ್ಟಿಸಿದನಾ ಇಲ್ಲವಾ ಎಂಬುದು ಒಟ್ಟಾರೆ ರಾಮ ಮಂದಿರ-ಬಾಬರಿ ಮಸೀದಿ ವಿವಾದದ ಮೂಲ ವಸ್ತು.
ಮೂಲತಃ ಆಸ್ತಿಯ ವ್ಯಾಜ್ಯವಾಗಿರುವ ಈ ಕೇಸು, ಈಗ ಕೇವಲ ಸಿವಿಲ್ ವ್ಯಾಜ್ಯವಾಗಿ ಉಳಿದಿಲ್ಲ. ಇವತ್ತಿಗೆ ಇದೊಂದು ಧಾರ್ಮಿಕ, ಸಾಮಾಜಿಕ, ಚಾರಿತ್ರಿಕ, ರಾಜಕೀಯ ಜತೆಗೆ ಸಿವಿಲ್ ವ್ಯಾಜ್ಯವೂ ಆಗಿ ಒಂದು ದೊಡ್ಡ ಸ್ವತಂತ್ರ ಭಾರತದ ದೊಡ್ಡ ಮಗ್ಗುಲ ಗುಣವಾಗದ ವೃಣವಾಗಿ ಕೂತಿದೆ.

ಹಾಗೆ ಬಾಬರನ ಕಾಲದಲ್ಲಿ ಅಂದರೆ 1528-29 ಮಸೀದಿಯು ಕಟ್ಟಲ್ಪಟ್ಟರೂ ಅದು ವಿವಾದಿತ ಸ್ಥಳವಾಗಿ ರೂಪುಗೊಂಡದ್ದು ಇತ್ತೀಚಿಗೆ ಅಂದರೆ 1853 ರಲ್ಲಿ ಯಾವಾಗ, ನಿರ್ಮೋಹಿ ಅಖಾಡ ಎಂಬ ಹಿಂದೂ ಸಂಸ್ಥೆಯೊಂದು ಮುಂದೆ ಬಂದು, ಮಸೀದಿಯಿರುವ ಜಾಗ ನಮ್ಮದೆಂದು ಕ್ಲೇಮ್ ಗೆ ಬಂದಾಗ. ಆದರೆ, ವಿವಾದವನ್ನರಿತ ಸ್ಥಳೀಯ ಆಡಳಿತವು, ವಿವಾದಿತ ಜಾಗವನ್ನು ಇಬ್ಬಾಗ ಮಾಡಿ ಮುಸ್ಲಿಂ ಮತ್ತು ಹಿಂದೂ ಸಂಸ್ಥೆಗಳ ಅಧೀನಕ್ಕೆ ವಹಿಸಿತು. ಆನಂತರ 1883 ನಿರ್ಮೋಹಿ ಅಖಾಡ ಆ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಶುರು ಮಾಡಿತು. ಅದನ್ನು ಮುಸ್ಲಿಂರು ಮತ್ತು ಸ್ಥಳೀಯ ಆಡಳಿತದವರು ಬಂದು ತಡೆದರು. ಹಿಂದೂ ಸಂಸ್ಥೆ ಕೋರ್ಟಿನ ಮೆಟ್ಟಲೇರಿತು. ಆದರೆ ಕೇಸ್ ಅನ್ನು 1855 ನಲ್ಲಿ ಡಿಸ್ಮಿಸ್ ಮಾಡಿದ ಕೋರ್ಟು, ಯಥಾ ಸ್ಥಿತಿಯಲ್ಲಿಡಲು ಸೂಚಿಸಿತು. ಆನಂತರ 1886 ನಲ್ಲಿ ಮೇಲ್ಮನವಿಯನ್ನು ನಿರ್ಮೋಹಿ ಅಖಾಡ ಸಲ್ಲಿಸಿತು. ಅದು ಕೂಡಾ ತಿರಸ್ಕಾರಗೊಂಡಿತು. ಇದು ಹತ್ತೊಂಬತ್ತನೆಯ ಶತಮಾನದಲ್ಲಾದ ವಿದ್ಯಮಾನ. .
ಆ ನಂತರ ಬಹಳ ದೊಡ್ಡ ಸಮಯದ ನಂತರ ಅಂದರೆ 65 ವರ್ಷಗಳ ನಂತರ, 1949 ರಲ್ಲಿ ಹಿಂದೂ ಸಂಸ್ಥೆಗಳು ವಿವಾದಿತ ಜಾಗದಲ್ಲಿ ರಾಮ ಮತ್ತು ಸೀತೆಯ ವಿಗ್ರಹವಿಟ್ಟರು. ಈ ಅರವತ್ತೈದು ವರ್ಷಗಳು ಭಾರತೀಯ ಸ್ವಾತಂತ್ರ ಸಂಗ್ರಾಮದ ಸಂಕ್ರಮಣ ಕಾಲ. ಬ್ರಿಟಿಷರನ್ನು ಹೊಡೆದಟ್ಟುವುದೇ ನಮ್ಮ ಪ್ರಮುಖ ಅಜೆಂಡಾ ಆಗಿರುವ ಸನ್ನಿವೇಷದಲ್ಲಿ, ಜನರು ಇಂತಹಾ ಚಾರಿತ್ರಿಕ ವಿಚಾರಗಳಿಂದ ಸ್ವಲ್ಪ ಮಟ್ಟಿಗೆ ದೂರ ಇದ್ದರು ಅನ್ನಿಸುತ್ತದೆ.
ಮುಂದೆ 1980 ರಲ್ಲಿ ವಿಶ್ವ ಹಿಂದೂ ಪರಿಷತ್ ರಾಮಮಂದಿರ ನಿರ್ಮಾಣ ಆಂದೋಲನವನ್ನು ಪ್ರಾರಂಭಿಸಿತು.
1986 ರಲ್ಲಿ ರಾಮಲಲ್ಲಾ ದರ್ಶನಕ್ಕೆ ಹಿಂದುಗಳಿಗೆ ಅವಕಾಶ ನೀಡಬೇಕೆಂದು ಸೆಷನ್ಸ್ ಕೋರ್ಟು ಆದೇಶವಿತ್ತಿತು. ಇದನ್ನು ಪ್ರಶ್ನಿಸಿ ಸುನ್ನಿ ವಕ್ಫ್ ಮಂಡಳಿ ಮೇಲ್ಮನವಿ ಸಲ್ಲಿಸಿತು. 1992 ರ ಡಿಸೆಂಬರ್ 6 ರಂದು ಕರಸೇವಕರ ಕೈಯಲ್ಲಿ ಬಾಬರಿ ಮಸೀದಿ ದ್ವ೦ಸವಾಯಿತು. ಕರಸೇವೆಯ ನೇತೃತ್ವ ವಹಿಸಿದ್ದ ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಮತ್ತು ಆಗಿನ ಉತ್ತರಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್ ಸಿಂಗಾರ ಮೇಲೆ ಮೊಕದ್ದಮೆ ದಾಖಲಾಯಿತು. ಆ ವಿವಾದ ಇವತ್ತಿಗೂ ಜೀವಂತವಾಗಿದೆ.
2003 ರಲ್ಲಿ ಕೋರ್ಟಿನ ನಿರ್ದೇಶನದಂತೆ ಪುರಾತತ್ವ ಇಲಾಖೆಯಿಂದ ವಿವಾದಿತ ಸ್ಥಳದಲ್ಲಿ ಉತ್ಖನನ. ಮಹತ್ವದ, ಆ ಜಾಗದಲ್ಲಿ ಮಂದಿರ ಹಿಂದೆ ಇದ್ದ ಬಗೆಗಿನ ಸಾಕ್ಷಾಧಾರ ಲಭ್ಯ. ಆದರೆ ವಿರೋಧಿ ಮುಸ್ಲಿಂ ಗುಂಪು ಅದನ್ನು ಒಪ್ಪದೇ, ಅದು ರಾಜಕೀಯ ಪ್ರೇರಿತ ಚಟುವಟಿಕೆಯೆ೦ಬ ಆಪಾದನೆ.
2009 ರಲ್ಲಿ ಬಿಜೆಪಿಯಿಂದ ರಾಮಮಂದಿರ ನಿರ್ಮಾಣದ ಮ್ಯಾನಿಫೆಸ್ಟೋ ಬಿಡುಗಡೆ.
2010 ರಲ್ಲಿ ವಿವಾದಿತ 2.77ಎಕರೆ ಜಾಗವನ್ನು 1/3 ನೇ ಮೂರು ಭಾಗವಾಗಿ ಮಾಡಿದ ಅಲಹಾಬಾದ್ ಹೈಕೋರ್ಟು ಮತ್ತದನ್ನು ರಾಮ್ ಲಲ್ಲಾ, ಹಿಂದೂ ಮಹಾ ಸಭಾ ಮತ್ತು ಸುನ್ನಿ ವಕ್ಫ್ ಮಂಡಳಿಯ ಮಧ್ಯೆ ಸಮಾನವಾಗಿ ಹಂಚಿಕೆ.
ಈ ನಡುವು ಕಾಂಗ್ರೆಸ್, ಜನತಾ ದಳ, ಬಿಜೆಪಿ, ಜನತಾ ಪಕ್ಷ- ಬೇರೆ ಬೇರೆ ಸರಕಾರಗಳು ಬಂದರೂ ಒಂದು ಹುಲ್ಲು ಕಡ್ಡಿ ಕೂಡಾ ಅಲುಗಿಲ್ಲ. ಆದರೆ, ನರೇಂದ್ರ ಮೋದಿಯವರು ಬಂಡ ನಂತರ, ಈ ಬಾರಿ ಇಂತಹಾ ಐತಿಹಾಸಿಕ ವಿವಾದ ಒನ್ಸ್ ಫಾರ್ ಆಲ್ ಸೆಟ್ಲ್ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಮುಂದೆ ಇದರ ಮದ್ಯೆ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮೂವರು ಧಾರ್ಮಿಕ ಮುಖಂಡರನ್ನು ಸರಕಾರ-ಕೋರ್ಟುಗಳು ಸೇರಿ ನೇಮಿಸಿದವು. ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಅವರಿದ್ದ ಮೂವರು ಮಧ್ಯಸ್ಥಿಕೆ ತಂಡಕ್ಕೂ ಯಾವುದೇ ನಿರ್ಧಾರಕ್ಕೆ ಬರಲು ಆಗದೆ ಹೋದುದರಿಂದ ಮತ್ತೊಂದು ಬಾರಿ ವಿವಾದ ಕೋರ್ಟಿನ ಒಳಕ್ಕೆ ಬಂದಿದೆ. ಮತ್ತದು ಈಗ ಅಂತಿಮವಾಗಿ ಹೊರಕ್ಕೆ ಬರುವ ಹಂತದಲ್ಲಿದೆ.
ಯಾರ ಪರವಾಗಲಿದೆ ಕೋರ್ಟು ತೀರ್ಪು?
ಅಷ್ಟಕ್ಕೂ ಈಗ ವಿವಾದವಿರುವುದು 2.77 ರ ಮೂರನೆಯ ಒಂದು ಭಾಗ ಎಕರೆ ಆಸ್ತಿಯ ವಿವಾದ.
ವಿವಾದಿತ ಜಾಗದಲ್ಲಿ ಮಂದಿರವಿರಲಿಲ್ಲ. ಮಂದಿರ ಕೆಡವಿ ಮಸೀದಿ ಕಟ್ಟಿಲ್ಲ. ಅಲ್ಲಿ ಮಂದಿರವಿದ್ದದಕ್ಕೆ ಯಾವುದೇ ಪುರಾವೆಗಳಿಲ್ಲ. ದಾಖಲಿತ ಚರಿತ್ರೆಯ ಕಾಲದಿಂದಲೂ ಅದು ಮುಸ್ಲಿಂ ಆಡಳಿತದಲ್ಲಿತ್ತು ಅನ್ನುವುದು ಮುಸ್ಲಿಮರ ವಾದ.
ಶ್ರೀ ರಾಮ ವಿಷ್ಣುವಿನ 7 ನೆಯ ಅವತಾರ. ಪುರಾಣಕಾಲದಿಂದಲೂ ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿದೆ ಎಂದು ಎಲ್ಲರಿಗೂ ಗೊತ್ತು. ಅದು ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅಲ್ಲದೆ 1611 ರ ಬ್ರಿಟಿಷ್ ಪ್ರವಾಸಿ ವಿಲಿಯಂ ಫಿಂಚ್ ಇಲ್ಲಿ ” pretty old castle of Ranichand [Ramachand]” ಎಂದೂ , ಆಮೇಲೆ 1634 ರಲ್ಲಿ ಥಾಮಸ್ ಹರ್ಬರ್ಟ್ ”pretty old castle of Ranichand [Ramachand]” ನಮೂದಿಸಿದ್ದಾರೆ. ಅದರ ಅರ್ಥ ವಿವಾದಿತ ಜಾಗದಲ್ಲಿ ಮಂದಿರವಿದ್ದ ಗುರುತು ಮತ್ತು ಆ ಜಾಗದಲ್ಲಿ ರಾಮಚಂದ್ರನು ಜನಿಸಿದ್ದ ಎಂಬ ನಂಬಿಕೆ 1611 ಸಂದರ್ಭದಲ್ಲೂ ಇತ್ತು ಅಂದರೆ ಏನರ್ಥ? 1528 ರಲ್ಲಿ ಮಸೀದಿ ನಿರ್ಮಿಸಿದ್ದು, ಮುಂದಿನ ನೂರು ವರ್ಷಗಳ ನಂತರ, 1611ರಲ್ಲಿ ಬರೆದ ಪ್ರವಾಸಿ ನೋಟೀಸುಗಳು ಅಲ್ಲಿ ಹಳೆಯ ಮನೆ, ರಾಮಚಂದ್ರನದ್ದು ಇತ್ತು ಅಂತ ಖಚಿತವಾಗಿ ಬರೆದಿದ್ದಾರೆ. ಅಂದರೆ 1611 ರಿಂದ 1634 ವರೆಗಂತೂ ಎಲ್ಲರೂ ಅಲ್ಲಿ ಮಂದಿರವಿರುವುದನ್ನು ಒಪ್ಪಿದ್ದರು ಅಂತಾಯ್ತು. ಮುಂದಿನ ತಲೆಮಾರಿಗೆ, ಮುಸ್ಲಿಂ ರಾಜವಂಶಸ್ಥರ ಪ್ರಭಾವದ ಕಾರಣದಿಂದ ಹಿಂದೂಗಳಿಗೆ ಆ ಜಾಗದ ಮೇಲಿನ ಹಿಡಿತ ಮತ್ತು ಸಾಕ್ಷಿಯಾಗಿರಬಲ್ಲ ಸಂಗತಿಗಳು ನಾಶವಾದವು. ಅಷ್ಟೇ ಅಲ್ಲದೆ, ಕೋರ್ಟಿನ ನಿರ್ದೇಶನದಂತೆ ನಡೆದ 2003 ರ ಪುರಾತತ್ವ ಇಲಾಖೆ ಮಹತ್ವದ ದಾಖಲೆಗಳನ್ನು ವಿವಾದಿತ ಭೂಮಿಯಲ್ಲಿ ವಶಪಡಿಸಿಕೊಂಡಿದೆ. ಮುಸ್ಲಿಮರ ನಂಬಿಕೆಯ ಪ್ರಕಾರ ಮಸೀದಿ ಎಲ್ಲಿ ಬೇಕಾದರೂ ಮಾಡಬಹುದು. ಆದರೆ, ರಾಮ ಹುಟ್ಟಿದ ಜಾಗವನ್ನು ಇನ್ನೊಂದು ಹುಡುಕಲಾಗುವುದಿಲ್ಲ. ಜನ್ಮಭೂಮಿಯೆನ್ನುವುದು ನಮಗಾಗಲೀ, ರಾಮನಿಗಾಗಲೀ, ಅದು ಒಂದೇ ಇರುವುದು ! ಇದು ರಾಮಮಂದಿರ ಪರ ಹಿಂದೂ ವಾದ.
ಇವೆಲ್ಲದರ ಅಡಿಯಲ್ಲಿ , ಈ ಸಲ ಎಲ್ಲ ಹಿಂದೂ ಸಂಘಟನೆಗಳೂ, ತೀರ್ಪು ತಮ್ಮಪರವಾಗಿ ಆಗುವ ಎಲ್ಲ ಭರವಸೆಯನ್ನು ಹೊಂದಿವೆ. ನವೆಂಬರ್ 15 ತಾರೀಕಿನೊಳಗೆ ಒಂದಲ್ಲ ಒಂದು ರೀತಿಯಲ್ಲಿ ಕೇಸು ಫೈಸಲ್ ಆಗಲಿದೆ. ತೀರ್ಪಿನ ಪ್ರಯುಕ್ತ ಅರ್ ಎಸ್ ಎಸ್ ತನ್ನ ಎಲ್ಲ ಸಮಾರಂಭಗಳನ್ನು ರದ್ದು ಮಾಡಿ,ನ್ಯಾಯಾಲಯದ ಮಾತಿಗೆ ಕಾದು ಕೂತಿದೆ. ಹಿಂದೂ ಸಂಘಟನೆಗಳ ಈ ಸಲದ ಕಾಂಫಿಡೆನ್ಸು ಹಿಂದಿನ ಎಲ್ಲ ಸಂಧರ್ಭಗಳಂತಿಲ್ಲ. ಕೇಸನ್ನು ವಾದಿಸುವ ವಕೀಲರಿಂದ ಹಿಡಿದು, ಸಂಬಂಧಪಟ್ಟ ಸಾಕ್ಷ ಸಂಗ್ರಹ ಮತ್ತು ಅಫಿಡವಿಟ್
ತಯಾರು ಮಾಡಿ ಕೋರ್ಟಿಗೆ ಸಲ್ಲಿಸುವವರೆಗೂ ಗರಿಷ್ಟ ಮುನ್ನೆಚ್ಚರಿಕೆಯನ್ನು ಹಿಂದೂ ಸಂಘಟನೆಗಳು ತೆಗೆದುಕೊಂಡಿವೆ. ಸಹಜವಾಗಿ ಬಿಜೆಪಿಯ ಥಿಂಕ್ ಟ್ಯಾಂಕ್ ಈ ಹಿನ್ನೆಲೆಯಲ್ಲಿ ಕೆಲಸ ಮಾಡಿದೆ.
ಇವೆಲ್ಲದರ ಆಧಾರದಲ್ಲಿ ಹೇಳುವುದಾದರೆ, ಹಿಂದೂಗಳು ಐದು ಶತಮಾನಗಳಿಂದ ಕಾಯುತ್ತಿರುವ ಕ್ಷಣ ಹತ್ತಿರವಾಗಿದೆ. ತೀರ್ಪು ಹೇಗೇ ಬಂದರೂ ಜನರು ಸಂಯಮ ಕಾಯ್ದುಕೊಳ್ಳುವುದು ತೀರಾ ಅಗತ್ಯ. ಸುದರ್ಶನ್ ಬಿ. ಪ್ರವೀಣ್ , ಬೆಳಾಲು

Leave A Reply