Big boss-7 ಸಂಭಾವನೆ ನಿರಾಕರಿಸಿದ ರವಿ ಬೆಳಗೆರೆ

ಪತ್ರಕರ್ತ,ಲೇಖಕ, ನಿರೂಪಕ, ನಟ ಮತ್ತು ನಿರ್ಮಾಪಕ ರವಿ ಬೆಳಗೆರೆಯವರು ಮತ್ತೆ ಸುದ್ದಿಯಲ್ಲಿದ್ದಾರೆ. ಕಲರ್ ಫುಲ್ ವ್ಯಕ್ತಿತ್ವದ ರವಿ ಬೆಳಗೆರೆಯವರು ಕನ್ನಡದ ಬಿಗ್ ಬಾಸ್ ಸೀಸನ್ -7 ಗೆ ಹೋಗಿ ಕನ್ನಡದ ಕೋಟ್ಯಂತರ ಜನರಿಗೆ ಮೋಡಿ ಮಾಡಿದ್ದು ನಾವು ನೋಡೇ ನೋಡಿದ್ದೇವೆ. ನಿರರ್ಗಳ ವಾಗ್ಮಿ, ಪ್ರಖರ ಮತ್ತು ಎಂಗೇಜಿಂಗ್ ಲೇಖಕರಾಗಿರುವ ರವಿ ಬೆಳಗೆರೆಯವರು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ.
ಆದರೆ, ಈ ಸಲ ಬಿಗ್ ಬಾಸ್ ಗೆ ನೀಡಲ್ಪಡುವ ಸಂಭಾವನೆಯನ್ನು ನಿರಾಕರಿಸಿದ ಸುದ್ದಿ ಬಂದಿದೆ.
ಹೌದು, ಬಿಗ್ ಬಾಸ್ ಗೆ ಹೋಗಲ್ಪಡುವ ಪ್ರತಿ ಸ್ಪರ್ದಿಗೂ ಇಂತಿಷ್ಟು ಅಂತ ಸಂಭಾವನೆಯನ್ನು ನಿರ್ಧರಿಸುತ್ತದೆ ಕಲರ್ಸ್ ವಾಹಿನಿ. ಅದು, ಜನಸಾಮಾನ್ಯನೇ ಇರಬಹುದು ಅಥವಾ ಸೆಲೆಬ್ರಿಟಿಯೇ ಇರಬಹುದು, ಅವರವರ ಪ್ರತಿಭೆಯ ಮೇಲೆ ಮತ್ತು ಸ್ಪರ್ಧಿಗಳ ಮಾರ್ಕೆಟ್ ವ್ಯಾಲ್ಯೂ ನ ಮೇಲೆ ಆ ಮೊತ್ತವು ನಿರ್ಧರಿತವಾಗಿರುತ್ತದೆ. ಅದೇ ರೀತಿ ರವಿಬೆಳಗೆರೆಯವರ ಸಂಭಾವನೆಯೂ ನಿರ್ಧರಿತವಾಗಿತ್ತು. ರವಿ ಬೆಳಗೆರೆಯವರು ತಮ್ಮ ಅನಾರೋಗ್ಯದ ಕಾರಣದಿಂದ ಮತ್ತು ತಮ್ಮ ಪತ್ರಿಕೋದ್ಯಮದ ಬಿಡುವಿಲ್ಲದ ಕೆಲಸಗಳಿಂದಾಗಿ ಬಿಗ್ ಬಾಸ್ ಪ್ರಾರಂಭಕ್ಕೆ ಮೊದಲೇ, ಭೂತ ಬಂಗಲೆಯೊಳಗೆ ಒಂದೇ ವಾರವಿರುವುದಾಗಿ ನಿರ್ಧರಿಸಿದ್ದರು. ಚಾನಲ್ ಕೂಡಾ ಅದನ್ನು ಒಪ್ಪಿತ್ತು. ಅಂತೆಯೇ ಇದ್ದ ಒಂದು ವಾರದಲ್ಲಿ ಎಲ್ಲರ ಸೆಂಟರ್ ಆಫ್ ಅಟ್ರಾಕ್ಷನ್ ಆದ ರವಿ ಬೆಳಗೆರೆಯವರು ಮತ್ತಷ್ಟು ಜನರನ್ನು ಈ ಬಾರಿ ತಲುಪಿದ್ದಾರೆ. ಅವರು ತಮ್ಮಮ್ಮನ ಬಗ್ಗೆ ಹೇಳಿದ ವಿಷಯಗಳು ಎಲ್ಲ ಸ್ಪರ್ಧಿಗಳ ಕಣ್ಣು ತೋಯಿಸುತ್ತು. ಅಲ್ಲದೆ, ಹೊರಗಡೆ ಅವರು ಮಹಿಳೆಯರ ಫೇವರೈಟ್ ಕಂಟೆಸ್ಟಂಟ್ ಆಗಿದ್ದರು.
ರವಿ ಬೆಳಗೆರೆ ಕೂಡ ಮೂಲತಃ ತುಂಬಾ ಭಾವನಾತ್ಮಕ ಮನುಷ್ಯ. ಬಿಗ್ ಬಾಸ್ ನ ಸ್ಪರ್ಧಿಗಳ ಜತೆ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದರು. ಒಂದು ಒಳ್ಳೆಯ ಅನುಭವಕ್ಕಾಗಿ ಬಿಗ್ ಬಾಸ್ ಒಳಗೆ ಬಂದೆ ಅನ್ನುವ ಅವರು ನನಗೆ ಸಂಭಾವನೆ ಮುಖ್ಯ ಅಲ್ಲ, ನನ್ನ ಬಳಿ ಸಾಕಷ್ಟು ದುಡಿದ ದುಡ್ಡಿದೆ ಅಂದಿದ್ದರು.
ಈಗ ತಮಗೆ ಬರಬೇಕಾದ 7 ಲಕ್ಷ ರೂಪಾಯಿಗಳನ್ನು ಚಾನಲ್ ಗೆ ಬಿಟ್ಟುಬಿಟ್ಟ ಮಾಹಿತಿ ಲಭ್ಯವಾಗಿದೆ. ಆದರೆ ಕಲರ್ಸ್ ಈ ಬಗ್ಗೆ ಇನ್ನೂ ಅಧಿಕೃತವಾಗಿ ಸ್ಪಷ್ಟಪಡಿಸಬೇಕಾಗಿದೆ.

Leave a Reply

error: Content is protected !!
Scroll to Top
%d bloggers like this: