ಹವ್ಯಾಸಿ ಪತ್ರಕರ್ತರಾಗಲು ಒಂದು ಉಚಿತ ಅವಕಾಶ

0 142

ಪತ್ರಕರ್ತರಾಗಬೇಕೆಂದು, ಬರಹಗಾರರಾಗಬೇಕೆ೦ಬುದು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ಆದರೆ ತಮ್ಮ ದೈನಂದಿನ ಜ೦ಜಡಗಳ ಮಧ್ಯೆ ಅದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳಲು ಸಮಯವಿರುವುದಿಲ್ಲ. ಆಸಕ್ತರು ಪತ್ರಿಕೋದ್ಯಮವನ್ನು ತಮ್ಮ ವೃತ್ತಿಯ ಜತೆಗೇನೇ ಅರೆಕಾಲಿಕವಾಗಿಯೂ ನಡೆಸುವಂತಾಗಲು ಈಗ ‘ ಬದುಕು ಕಮ್ಯುನಿಟಿ ಕಾಲೇಜು ಸಹಾಯ ಮಾಡುತ್ತಿದೆ. ‘ ಆನ್ವೇಷಣೆ ‘ ಎಂಬ ಆನ್ ಲೈನ್ ಕೋರ್ಸಿನ ಮೂಲಕ ತರಬೇತಿಯನ್ನು ನೀಡುತ್ತಿದೆ. ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸಮಾಡಲು ಅಗತ್ಯವಿರುವ ಎಲ್ಲಾ ರೀತಿಯ ತಯಾರಿ, ಕಲಿಕೆ ಮತ್ತು ಕೌಶಲಗಳನ್ನು ಹೇಳಿಕೊಡುತ್ತಿದೆ. ಅಲ್ಲದೆ, ಬರವಣಿಗೆಯ ವಿವಿಧ ಆಯಾಮಗಳನ್ನು ಮತ್ತು ಅವಕಾಶಗಳ ಬಗ್ಗೆ ಕೋರ್ಸ್ ನಲ್ಲಿ ಹೇಳಿಕೊಡಲಾಗುವುದು.
ವಿಶೇಷವೆಂದರೆ, ಇದು ಉಚಿತ ಕೋರ್ಸು. ಅಲ್ಲದೆ, ಆನ್ ಲೈನ್ ಆಗಿರುವುದರಿಂದ ಸಮಯದ ಅಭಾವ ಅಂತ ಕಾರಣಗಳನ್ನು ಹೇಳಿಕೊಂಡು ನಿಮ್ಮಅವಕಾಶದಿಂದ ಆಸಕ್ತರು ವಂಚಿತರಾಗದಿರಿ.
ಯಾರಿಗೆ ಗೊತ್ತು, ಮುಂದೊಂದು ದಿನ ನೀವು ವೃತ್ತಿಪರ ಪತ್ರಕರ್ತರಾದರೂ ಅದೀರಿ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 2 ನೇ ಕ್ರಾಸ್, ನಗರ ಕೇಂದ್ರ ಗ್ರಂಥಾಲಯ ಹಿಂಬಾಗ, 3 ನೆಯ ಬ್ಲಾಕು, ಜಯನಗರ ಇವರನ್ನು ಸಂಪರ್ಕಿಸಬಹುದು. ಕರೆ ಮಾಡಿ: 080 41674949

Leave A Reply