Big boss-7 ಸಂಭಾವನೆ ನಿರಾಕರಿಸಿದ ರವಿ ಬೆಳಗೆರೆ
ಪತ್ರಕರ್ತ,ಲೇಖಕ, ನಿರೂಪಕ, ನಟ ಮತ್ತು ನಿರ್ಮಾಪಕ ರವಿ ಬೆಳಗೆರೆಯವರು ಮತ್ತೆ ಸುದ್ದಿಯಲ್ಲಿದ್ದಾರೆ. ಕಲರ್ ಫುಲ್ ವ್ಯಕ್ತಿತ್ವದ ರವಿ ಬೆಳಗೆರೆಯವರು ಕನ್ನಡದ ಬಿಗ್ ಬಾಸ್ ಸೀಸನ್ -7 ಗೆ ಹೋಗಿ ಕನ್ನಡದ ಕೋಟ್ಯಂತರ ಜನರಿಗೆ ಮೋಡಿ ಮಾಡಿದ್ದು ನಾವು ನೋಡೇ ನೋಡಿದ್ದೇವೆ. ನಿರರ್ಗಳ ವಾಗ್ಮಿ, ಪ್ರಖರ ಮತ್ತು ಎಂಗೇಜಿಂಗ್ ಲೇಖಕರಾಗಿರುವ ರವಿ ಬೆಳಗೆರೆಯವರು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ. ಆದರೆ, ಈ ಸಲ ಬಿಗ್ ಬಾಸ್ ಗೆ ನೀಡಲ್ಪಡುವ ಸಂಭಾವನೆಯನ್ನು ನಿರಾಕರಿಸಿದ ಸುದ್ದಿ ಬಂದಿದೆ. ಹೌದು, ಬಿಗ್ ಬಾಸ್ ಗೆ ಹೋಗಲ್ಪಡುವ …