ಡಿಕೆಶಿಗೆ ಶೇಕಡ 10 ಕಮಿಷನ್‌ ಕೊಟ್ರೆ ಮಾತ್ರ ಆಗುತ್ತೆ ಕೆಲಸ

ಡಿಕೆಶಿ ಯಾವುದೇ ತಪ್ಪು ಮಾಡಿಲ್ಲವೇ?
“ತಪ್ಪು ಮಾಡದೆ ಇಷ್ಟೆಲ್ಲ ಆಗಲು ಸಾಧ್ಯ ಇದೆಯಾ? ನೀವು ಜೈಲಿಂದ ಬಂದ ಮೇಲೆ ಬದಲಾದ ಡಿಕೆಶಿಯನ್ನು ನಿರೀಕ್ಷಿಸುತ್ತಿದ್ದೆ. ಆದರೆ ಈ ಯಾಕೆ ಬರಮಾಡಿಕೊಳ್ಳುವ,ಅಗತ್ಯ ಇತ್ತ? ನಾನು ಲಂಚ ಹೊಡೆದಿಲ್ಲ, ಕೊಲೆ ಮಾಡಿಲ್ಲ,ಮಾಡಿಲ್ಲ ಹೇಳಿದ್ದೀರಿ. ಕೊಲೆ ಮಾಡಿದ್ದೀರಿ, ಅತ್ಯಾಚಾರ ಮಾಡಿದ್ದೀರಿ ಎಂದು ಯಾರೂ ಕೂಡಾ ಹೇಳಿಲ್ಲ. ಆದರೆ ನಾನು ಲಂಚ ಹೊಡೆದಿಲ್ಲ ಅಂತ ಯಾರೂ ಅದನ್ನು ರೆಡಿ ಇಲ್ಲ. ನಿಮ್ಮ ಬ೦ಧನ ಆಗ್ಲೇ ಬೇಕಿತ್ತು. ಈಗ ಬಂದ ನಂತರ ನಿಮ್ಮ ನಡೆ ಸರಿ ಇಲ್ಲ. ಈ ಜೀವನ ಶಾಶ್ವತ ಅಲ್ಲ. ನಿಮ್ಮ ಮುದ್ದು ಮಗ ಸಾತ್ವಿಕ ಜೀವನ ನಡೆಸ್ತಿದ್ದಾನೆ. ಅವನ ಮುಗ್ಧತೆಯನ್ನು ನೋಡಿ. ಆತ್ಮ ವಿಮರ್ಶೆ ಮಾಡಿಕೊಳ್ಳಿ ಶಿವಕುಮಾರ್. ಇದೆಲ್ಲ ಸಾಕು.”


Ad Widget

Ad Widget

Ad Widget

Ad Widget
Ad Widget

Ad Widget

Ad Widget

“ನೀವು ಜೈಲು ಹೋಗಿ ಬಂದದ್ದು ನನಗೆ ಸಾಕಷ್ಟು ಬೇಸರ ಆಗಿದೆ. ಯಾಕೆಂದರೆ ಜೈಲುಗಳು ಮನುಷ್ಯರಿರುವ ಸ್ಥಳ ಅಲ್ಲ. ನಾನು ಜೈಲಲ್ಲಿ ಇದ್ದು ಬಂದವನಾದ್ದರಿಂದ ಹೇಳ್ತಿದ್ದೇನೆ, ಈ ಜೈಲು ಬೇಡ. ಇದೆಲ್ಲಾ ಬೇಡ. ಏನೋ, ಕೆಟ್ಟ ಗಳಿಗೆ, ಆಗೋಯ್ತು. ದೇವ್ರು ಏನೋ ಮಾಡಿಬಿಟ್ಟ ಅಂತ ಅಂದ್ಕೊಂಡು ಸುಮ್ನಿರಿ. ಮತ್ತೆ ಮಾತನ್ನ ಸಮರ್ಥಿಸಲು ಹೋಗಬೇಡಿ. ನೀವು ದೇವರ ಬಗ್ಗೆ ನಂಬಿಕೆ ಇರೋರು ಅಂತ ಪದೇ ಪದೇ ಹೇಳ್ತಾ ಇರ್ತೀರ. ಆ ದೇವ್ರು ನೋಡಲು ಆಗಾಗ ನೀವೆಲ್ಲ ದೇವಸ್ಥಾನಗಳಿಗೆ ಹೋಗ್ತಾ ಇರ್ತೀರ. ಲಂಚ ಹೊಡೆದೆ ಅಂತ ನೀವು ಎಲ್ಲ ಕಡೆ ಹೇಳ್ಕೊಂಡು ಬರಲಿಕ್ಕಾಗುವುದಿಲ್ಲ. ನಮಗೆ ಅರ್ಥ ಆಗತ್ತೆ. ಹಾಗೆ ಹೇಳಿದ ದಿನ ನೀವು ಅಪ್ರಸ್ತುತರಾಗ್ತಿರ ಈ ಸಮಾಜದಲ್ಲಿ. ನಂಗೂ ಗೊತ್ತು. ಅದ್ಕೆ ನೀವು ಸುಮ್ನಿರಿ. ಸುಮ್ಮಇದ್ದು ಬಿಡಿ. ಏನೂ ಮಾತಾಡಕೆ ಹೋಗ್ಬೇಡಿ.”


Ad Widget

“ಇವತ್ತು ಜೈಲಿಗೆ ಹೋದ್ರಲ್ಲ ನೀವು, ಯಾರು ಮಾಡಿದ್ದು ಈ ಕಾನೂನು? ಜನಸಾಮಾನ್ಯ ಮಾಡಿದ್ದ, ಅಲ್ವಾ? ನೀವೇ ತಾನೇ ಈ ಎಲ್ಲಾ ಕಾನುಮಾಡಿದ್ದು. ಬೇರೆ ಜನರನ್ನು ಭಂದಿಸಿ ಒಳಗೆ ಹಾಕಿದ್ರೆ ಅದು ಸರಿ, ನಿಮ್ಮನ್ನು ಹಾಕಿದ್ರೆ ಅದು ತಪ್ಪಾ? ಈಗ ಇದು ವಿರೋಧಪಕ್ಷಗಳ ಪಿತೂರಿ ಅಲ್ವಲ್ಲಾ ? ಇಟ್ಸ್ ಪೊಲಿಟಿಕಲ್ ವೆಂಡೆಟ್ಟ. ಚೆನ್ನಾಗಿದೆ ನಿಮ್ಮಮಾತು.ಲಂಚ ಇಲ್ಲದೆ ಏನಾದ್ರು ಆಗತ್ತಾ? ಇನ್ಸ್ಪೆಕ್ಟರ್ ಗಳು, ಎಸಿಪಿ ೫೦ ಲಕ್ಷ, ಒಂದು ಕೋಟಿ ಕೊಟ್ಟು ಸ್ಟೇಷನ್ ಗೆ ಬರ್ತಾ ಇಲ್ವಾ? ಡಿಸಿಪಿಗಳು 3 ಕೋಟಿ ಕೊಟ್ಟು ಬರ್ತಾ ಇಲ್ವಾ? ಡಿಸಿಗಳು ಹತ್ತು ಕೋಟಿ ಕೊಟ್ಟು ಬರ್ತಿಲ್ವಾ? ನಿಮಗೆ ಇದು ಗೊತ್ತಿಲ್ವಾ?”

ನೀವು ಪವರ್ ಮಿನಿಸ್ಟ್ರಿಯೇ ಬೇಕೆಂದು ಯಾಕೆ ಹಠಕ್ಕೆ ಬಿದ್ದು ತಗೊಂಡ್ರಿ. ನೀವು ನಿಮ್ಮ ಹಣದ ಪವರ್ ಬೆಳೆಸ್ಕೊಳ್ಳಾಕೆ ಅಲ್ವಾ? ಒಳ್ಳೆಯದಕ್ಕೆ ಬಳಸ್ಕೊಬೋದಿತ್ತು ನೀವು. ಬಳಸ್ಕೊಳಲಿಲ್ಲ ನೀವು. ನೀವು ಜಲಮಂಡಳಿಗೆ ಬಂದಾಗ ಇದ್ದ ರಾಜಕಾರಣಿಗಳ ಕಮಿಷನ್ 6-7 %. ನೀವದನ್ನು 10 % ಗೆ ಏರಿಸಿದಿರಿ. ನಾನು ಹೇಳಿದ್ದು ಸುಳ್ಳಾ? ಸುಳ್ಳಾದ್ರೆ ಕೇಸ್ ಹಾಕಿ.ನನ್ನತ್ರ ದಾಖಲೆಗಳಿವೆ…. ” ಅಗ್ನಿ ಶ್ರೀಧರ್ ತಮ್ಮ ಅಗ್ನಿ ಶ್ರೀಧರ್ ಯು ಟ್ಯೂಬ್ ನಲ್ಲಿ ನೇರ ಆರೋಪ ಮಾಡಿದ್ದಾರೆ.

error: Content is protected !!
Scroll to Top
%d bloggers like this: