ನಿರ್ದೇಶಕ ಕೋಡ್ಲು ರಾಮಕೃಷ್ಣ ‘ಮತ್ತೆ ಉದ್ಭವ’

ಸದರುಭಿಚಿಯ ಚಿತ್ರ ನಿರ್ದೇಶಕ ಎಂದೇ ಖ್ಯಾತಿಯ ‘ಕೋಡ್ಲು’ ಕೋಡಿನಿಂದಲೇ ಕರೆಯಲ್ಪಡುವ ಕೋಡ್ಲು ರಾಮಕೃಷ್ಣ ಮತ್ತೆ 2 ವರ್ಷಗಳ ನಂತರ ಫೀಲ್ಡ್ ಗೆ ಇಳಿದಿದ್ದಾರೆ. ಅವರ ಹಿಂದಿನ ಚಿತ್ರ ಮಾರ್ಚ್ 22 ಹೇಳಿಕೊಳ್ಳುವ ಹಾಗೆ ಇರಲಿಲ್ಲ. ಒಟ್ಟು 26 ನೆಯ ಚಿತ್ರ ಮುಗಿಸಿ, 27 ಚಿತ್ರಕ್ಕೆ ತಯಾರಿ ನಡೆದಿದೆ. ಚಿತ್ರದ ಹೆಸರು ‘ ಮತ್ತೆ ಉದ್ಭವ ‘. ಹಿಂದೊಂದು ಸಲ 1990 ರಲ್ಲಿ ಅನಂತನಾಗ್ ರನ್ನು ಹಾಕಿಕೊಂಡು ‘ಉದ್ಭವ’ ಮಾಡಿದ್ದರು. ಈಗ 29 ವರ್ಷಗಳ ನಂತರ ‘ಮತ್ತೆ ಉದ್ಭವ’ ಬರ್ತಿದೆ. ಆ ದಿನ ಉದ್ಭವವನ್ನು ಎಲ್ಲಿಂದ ನಿಲ್ಲಿಸಿದ್ದರೋ, ಅದೇ ಎಳೆಯಿಂದ ಕಥೆ ಮುಂದುವರೆಯಲಿದೆ.

ಆದರೆ ತಾರಾಗಣದಲ್ಲಿ ಮೇಜರ್ ಬದಲಾವಣೆಯಾಗಿದೆ. ಕಾಲ ಬದಲಾಗಿಲ್ವೇ? ಹಾಗೆ. ‘ಮತ್ತೆ ಉದ್ಭವ’ ದಲ್ಲಿ ‘ಪ್ರೀಮಿಯಂ ಪದ್ಮಿನಿ ‘ ಕಾರು ಓಡಿಸಿದ್ದ ಪ್ರಮೋದ್ ಮತ್ತು ನಾಯಕಿಯಾಗಿ ಮಿಲನ ನಾಗರಾಜ್ ಜೋಡಿಯಾಗಿದ್ದಾರೆ. ಅಂದಿನ ಅನಂತ ನಾಗ್ ಬದಲು, ಈಗ ಬಿಳಿ ವೇಷ್ಟಿ ಶಾಲು ಉಟ್ಕೊಂಡು ರಂಗಾಯಣ ರಘು ಬಂದಿದ್ದಾರೆ.
ಕಥೆಯ ಎಳೆ ಕಾಲಕ್ಕೆ ತಕ್ಕಂತೆ ಮೋಡಿಫೈ ಆಗಿ, ‘ಕ್ಲಾಸ್’ ನಿಂದ ‘ಮಾಸ್’ ಸೆಳೆಯಲು ಎಲ್ಲ ರೀತಿಯಿಂದಲೂ ಕೋಡ್ಲು ತಯಾರಾಗಿದ್ದಾರೆ. ಅವಿನಾಶ್, ಸುಧಾ ಬೆಳವಾಡಿ ಮತ್ತು ಹಾಸ್ಯ ನಟ, ನಿರ್ದೇಶಕ ಮೋಹನ್ ಎಸ್ ನಟಿಸುವ ಈ ಚಿತ್ರಕ್ಕೆ ನಿತ್ಯಾನಂದ ಭಟ್, ಸತ್ಯ, ಮಹೇಶ್ ಮುದ್ಗಲ್ ಮತ್ತು ರಾಜೇಶ್ ಹೀಗೆ ನಾಲ್ಕು ಜನ ಪ್ರೊಡ್ಯೂಸರುಗಳು ! ನಾಲ್ಕು ಜನ ಪ್ರೊಡ್ಯೂಸರುಗಳು ಇರೋದ್ರಿಂದ ದುಡ್ಡಿಗೆ ಪ್ರಾಬ್ಲಮ್ ಆಗಿ ಬರಲಿಕ್ಕಿಲ್ಲ. ಪರಸ್ಪರ ಹೊಂದಾಣಿಕೆಗೆ ಕುತ್ತು ಬರದಿದ್ದರೆ ಸಾಕು !

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: