ಕತ್ತಿ ಮಸೆದ ಕೂಡಲೇ ಆಗುವುದಿಲ್ಲ ಕಟಾವು

ಉಮೇಶ್ ಕತ್ತಿ ಆಗ್ತಾರಂತೆ ಮುಖ್ಯಮಂತ್ರಿ.
”ಡಿಸಿಎಂ ಹುದ್ದೆ ಸಾಂವಿಧಾನಿಕವಲ್ಲ. ಯಾವುದೇ ಹುದ್ದೆಯೂ ಶಾಶ್ವತವಲ್ಲ. ಯಡಿಯೂರಪ್ಪನವರು ನನ್ನ ಗುರುಗಳು. ಅವರ ನಂತರ ನಾನೇ ಮುಖ್ಯ ಮಂತ್ರಿಯಾಗುತ್ತೇನೆ. ಎಂಟು ಬಾರಿ ಶಾಶಕನಾಗಿ,ಮಂತ್ರಿಯಾದ ಅನುಭವವಿದೆ. ನನ್ನೊಂದಿಗೂ ಬಹಳಷ್ಟು ಜನ ಇದ್ದಾರೆ.” ಹೀಗೆಂದು ಹೇಳಿದವರು ಶಾಶಕ ಉಮೇಶ ಕತ್ತಿ . ಕತ್ತಿ ಮತ್ತೆ ಮತ್ತೆ ಪಬ್ಲಿಕ್ ಆಗಿ ಮಸೆಯಲ್ಪಡುತ್ತಿದೆ. ಕತ್ತಿಯನ್ನು ನೀವೆಷ್ಟು ಮಸೆದರೂ ಅದರಿಂದ ಉಪಯೋಗವಿಲ್ಲ. ಕತ್ತಿ ಹರಿತವಿಲ್ಲದೆ ಹೋದರೂ ಸರಿ, ಅದರಿಂದ ಒಂದಷ್ಟು ಕಟಾವು ಆದರೆ ಸಾಕು. ಆದರೆ ಉಮೇಶ ಕತ್ತಿಯವರ ಕೈಯಲ್ಲಿ ಯಾವುದೇ ಕಟಾವು ಆಗುತ್ತಿರುವುದೇ ಕಾಣಿಸುವುದಿಲ್ಲ. ಉಮೇಶ ಕತ್ತಿ ಹಮೇಶ ಹರಿತ ಮಾತನ್ನು ಮಾತಾಡಿ ಜನರ ಮತ್ತು ನಾಯಕರನ್ನು ಕನ್ವಿನ್ಸ್ ಮಾಡ್ಬೋದು ಅಂದ್ಕೊಂಡಿದ್ದಾರಾ?
ಆತನ ಸ್ಟ್ರಾಟೆಜಿ ಏನು? ಅರ್ಥವಾಗುತ್ತಿಲ್ಲ. ತನ್ನ 8 ಬಾರಿಯ ವಿಧಾನ ಸಭೆಯ ಅನುಭವವನ್ನು ಈ ರೀತಿಯಾಗಿ ವೇಸ್ಟ್ ಮಾಡುವುದು ಅವರಿಗೆ ಒಳ್ಳೆಯದಲ್ಲ.ಬಹುಶ: ಅವರು ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುತ್ತಿದ್ದಾರೆ.
ಕತ್ತಿಯವರು ಒಂದನ್ನಂತೂ ನೆನಪಲ್ಲಿಟ್ಟುಕೊಳ್ಳಬೇಕು,’ಮುಖ್ಯಮಂತ್ರಿಯಾಗಬೇಕಾದವನು ಕಡಿಮೆ ಮಾತಾಡ್ತಾನೆ, ಜಾಸ್ತಿ ಕೆಲಸ ಮಾಡ್ತಾನೆ’

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.