ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ !

ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ !
ನಿಜ ಜೀವನದಲ್ಲಲ್ಲ, ಸಿನಿಮಾದಲ್ಲಿ. ಈಗಾಗಲೇ ದಂಡು ಪಾಳ್ಯ ದ ಬ್ರಾಂಡಿನಿಂದ 3 ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟಿದೆ. ಕಾಂಟ್ರೊವರ್ಸಿಯ ಜತೆಗೇನೇ ಸಾಕಷ್ಟು ಯಶಸ್ಸು ಪಡೆದಿವೆ ಈ ಚಿತ್ರಗಳು. ಈಗ ದಂಡುಪಾಳ್ಯ-4 ಬರುತ್ತಿದೆ.
ಆದರೆ ಈಗ ದಂಡುಪಾಳ್ಯ-4 ರ ಕಥೆಗೂ ಹಳೆಯ ದಂಡುಪಾಳ್ಯ ಸೀರೀಸ್ ಗು ಸಂಬಂಧ ಇಲ್ಲವಂತೆ. ಇದು ಬೇರೆಯೇ ಎಳೆಯನ್ನು ಇಟ್ಟುಕೊಂಡು ಮಾಡಿದ ಸಿನಿಮಾ ಅಂತೆ. ಆದ್ರೆ ಟೈಟಲ್ ಮತ್ತು ಅದರಲ್ಲಿ ಹಿಂಸೆ ಮಾತ್ರ ಕಂಟಿನ್ಯೂ ಆಗ್ತಿದೆ. ‘ The crime to be continued ‘ ಅಂತ ಲೇಬಲ್ ಹಾಕ್ಕೊಂಡ ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳ೦- ಹೀಗೆ ಪಂಚ ಭಾಷೆಗಳಲ್ಲಿ ಬರ್ತಿದೆ.
2012 ರಲ್ಲಿ ಬಂದ ದಂಡುಪಾಳ್ಯದಲ್ಲಿ ನಟಿ ಪೂಜಾ ಗಾಂಧಿ ಇದ್ದರು, ಜತೆಗೆ ನಟಿ ಸಂಜನಾ ಕೂಡ. ನಂತರದ 2 ಮತ್ತು 3 ವರ್ಷನ್ ನಲ್ಲೂ ಪೂಜಾ ಗಾಂಧಿ ಲೀಡ್ ರೋಲ್ ನಲ್ಲಿದ್ದರು. ಹಾಗಾಗಿ ಆ ದಿನ ದ ದಂಡುಪಾಳ್ಯವನ್ನು ಜನರು ‘ದುಂಡು’ಪಾಳ್ಯ ಎಂದುಕೊಂಡು ಪಿಕ್ಚರ್ ನೋಡಿದ್ದರು. ಕಾರಣ, ತಮ್ಮ ಪ್ರೀತಿಯ ನಟಿಯ ದುಂಡನೆಯ ತುಂಬಿದ ವ್ಯಕ್ತಿತ್ವ.
ಆದರೆ ಈ ಸಲ ಪಾತ್ರಪೋಷಣೆಯಲ್ಲಿ ಸಿಕ್ಕಾಪಟ್ಟೆ ಸೊರಗಿದೆ !! ಕಾರಣ ದಂಡುಪಾಳ್ಯ-4 ರ ನಾಯಕಿಯಾಗಿ ಬಂದವಳು ಎವರ್ ಗ್ರೀನ್ ಗ್ರೀನ್ ಹೀರೋಯಿನ್,’ಸುಂದ್ರಿ’ ಸ್ಲಿಮ್ ಸುಮನ್ ರಂಗನಾಥ್ ! ಆಕೆಗೆ ದಂಡುಪಾಳ್ಯ ಚಿತ್ರದಲ್ಲಿ ಬಜಾರಿ ಸುಂದ್ರಿಯ ಪಾತ್ರ. ಆಕೆಗೆ, ಬೀಡಿ ಸೇದುತ್ತ, ಒರಟು ಮಾತಾಡುತ್ತ ಕ್ರೌರ್ಯ ತುಂಬಿದ ಹೆಣ್ಣಿನ ಪಾತ್ರ.
ಆಕೆಗೆ ಈಗ 46 ವರ್ಷ ವಯಸ್ಸು.ಇನ್ನೂ 24 ರ ಥರ ಬಾಡಿ ಮೇಂಟೈನ್ ಮಾಡಿದ್ದಾಳೆ. ಆಕೆ ಚಿತ್ರರಂಗಕ್ಕೆ ಬಂದು ಈಗ ಸರಿಯಾಗಿ 30 ವರ್ಷಗಳಾದವು. ಆಕೆಯ ಜತೆ ಯವ್ವನವನ್ನು ಪ್ರಾರಂಭಿಸಿದವರು ಈಗ ಮುದುಕ, ಮುದುಕಿಯರ ಥರ ಇದ್ದಾರೆ. ಆದರೆ ಆಕೆಗೆ ವಯಸ್ಸಾಗಲ್ಲ.
ಆಕೆಯ ಯವ್ವನದ ಗುಟ್ಟು ಕೇಳಿದರೆ, ಆಕೆ ಹೇಳುವ ಉತ್ತರ ಒಂದೇ ‘ಶಿಸ್ತು’.
A ಸರ್ಟಿಫಿಕೇಟ್ ಪಡೆದುಕೊಂಡು ಚಿತ್ರ ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗಲಿದೆ.

ಸುದರ್ಶನ್ ಬಿ.ಪ್ರವೀಣ್, ಬೆಳಾಲು


Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: