Tree census: ಮರಗಣತಿಗೆ ಯಾಕೆ ಬೇಕು ಆಪ್ಸ್?

Tree census App: ರಾಜ್ಯ ಹೈಕೋಟಿನ ಆದೇಶದಂತೆ ಬಿಬಿಎಂಪಿ ಮರಗಣತಿಗೆ ಸಿದ್ದವಾದ ಸುದ್ದಿ ನೀವೆಲ್ಲ ಅಲ್ಲಿಲ್ಲಿ ಓದಿದ್ದೀರಿ. ಒಂದು ತಿಂಗಳೊಳಗೆ ಮರಗಣತಿ ಮಾಡುತ್ತೇವೆಂದು ಬಿಬಿಎಂಪಿ ಹೈಕೋರ್ಟ್ ಗೆ ನಿರ್ದೇಶನ ನೀಡಿದೆ. ವಿಷಯ ಮರಗಣತಿಯದಲ್ಲ(Tree census App) . ಸರ್ಕಾರಗಳು, ಮತ್ತು ನಮ್ಮ ಇತರ ಆಡಳಿತ ಸಂಸ್ಥೆಗಳು ಎಲ್ಲವು ಹೇಗೆಲ್ಲ ಸರ್ಕಾರದ ಹಣ ಪೋಲು ಮಾಡಬಲ್ಲವು ಎಂಬುದರ ಬಗ್ಗೆನಮ್ಮ ಬಿಬಿಎಂಪಿ, ಬೆಂಗಳೂರಿನ ವ್ಯಾಪ್ತಿಯಲ್ಲಿನ ಮರಗಣತಿಗೆ 4.5 ಕೋಟಿ ವ್ಯಯಿಸುತ್ತಿದೆ. ಮರ ಗಣತಿ ಮಾಡಲು ಬೇಕಾದ ಅಗತ್ಯಗಳಾದರು ಏನು? ಒಂದು ವೈಜ್ಞಾನಿಕ ಸಪೋರ್ಟ್, ಪ್ರಾಂತ್ಯವಾರು ಲೆಕ್ಕ ಮಾಡಲು ತಂಡಗಳು, ಅವನ್ನು ಮ್ಯಾನೇಜ್ ಮಾಡಲು ಆಡಳಿತಾತ್ಮಕ ವ್ಯವಸ್ಥೆ ಮತ್ತು ಇತರ allied ಪರಿಕರಗಳು!

ಆದರೆ ನಮ್ಮ ಬಿಬಿಎಂಪಿ ಎಡಕ್ಕೊಂದು app ಮಾಡಲು ಹೊರಟಿದೆ. ಒಂದು app, ಒಂದು ವೆಬ್ ಸೈಟ್, ಹಿಡಿದುಕೊಳ್ಳಲು ಬ್ಯಾನರ್, ಎದೆಗೆ ಚುಚ್ಚಿಕೊಳ್ಳಲು ಬ್ಯಾಡ್ಜು, ತಲೆಗೆ ಕ್ಯಾಪು. ಯಾರು ಕೇಳದೆ ಹೋದರೆ ಗಣಿಸುವ ಮಂದಿಗೆ ಯುನಿಫಾರ್ಮ್ ಬೇರೆ ಮಾಡಿಬಿಟ್ಟಾರು. ಅ೦ತಹ ಜನರಿರುವುದು ನಮ್ಮಲ್ಲಿ. ಇಂತಹ ಇಂತಹ ವೃಥಾ ಖರ್ಚು ಯಾಕೆ? ಅಗತ್ಯದ ಸರಂಜಾಮು ಹೊಂದಿಸಿಕೊಳ್ಳುವುದರಲ್ಲಿ ಮತ್ತು ಒಳ್ಳೆಯ ಟೀಮ್ ಸೆಲೆಕ್ಷನ್ ಮತ್ತು ಅದರ ತರಬೇತಿಗೆ ಹಣ ಖರ್ಚುಮಾಡಲಿ. ಅಲ್ಲಿ ನೇಮಿಸುವ ಉದ್ಯೋಗಿಗಳಿಗೆ ಒಳ್ಳೆಯ ಸಂಬಳ ಸವಲತ್ತು ನೀಡಲಿ. ಅದು ಬಿಟ್ಟು ವಿನಾಕಾರಣದಹೈಫೈಖರ್ಚುಗಳ ಅಗತ್ಯವಾದರೂ ಏನು? ಸರ್ಕಾರದ ಮತ್ತು ಜನರ ದುಡ್ಡು ಕಳೆಯಲು ಇದೊಂದು ಮಾದರಿ ಅಷ್ಟೇ! ಹಾಗೊಂದು ವೇಳೆ ಇವರ ಬಳಿ ಜಾಸ್ತಿ ದುಡ್ಡಿದ್ದರೆ, ಖಾಲಿ ಬಂಜರು ಭೂಮಿ ಇರುವ BBMP ವ್ಯಾಪ್ತಿಯ ಪ್ರದೇಶದಲ್ಲಿ ಗಿಡ ನೆಟ್ಟು ಮರ ಮಾಡಲಿ. ಬರಿಯ ಗಿಡ ನೆಟ್ಟುಒಣ ಮಹೋತ್ಸವಆಚರಿಸಿದರೆ ಆಗುವುದಿಲ್ಲ. ನೆಟ್ಟ ಗಿಡ ಮರವಾಗಿ ಬೆಳೆದು ನಿಲ್ಲುವತನಕ ತಾಳ್ಮೆಯಿಂದ ಶ್ರದ್ದೆಯಿಂದ ಪಾಲನೆ ಮಾಡಬೇಕು. ಹೇಗೆ ಮಕ್ಕಳನ್ನು ಹುಟ್ಟಿದಂದಿನಿಂದ ನಾವು ಸಾಕುತ್ತೇವೆಯೋ ಹಾಗೆ!

ಇದು ನಮ್ಮಂತಹ ಜನಸಾಮಾನ್ಯರ ಅರಣ್ಯ ರೋದನ!!

 

1 Comment
  1. https://vortexara.top/ says

    Wow, marvelous weblog structure! How long have you been running a blog for?
    you make running a blog look easy. The whole look of your web
    site is fantastic, let alone the content! You can see
    similar here sklep internetowy

Leave A Reply

Your email address will not be published.