ಮನೀಶ್ ಪಾಂಡೆ ಈಗ ಮಂಗ್ಳೂರ್ ಮರ್ಮಯೆ !

ಚಿತ್ರರಂಗಕ್ಕೂ ಸಿನಿಮಾ ರಂಗಕ್ಕೂ ಇರುವ ನಂಟು ಇಂದು ನಿನ್ನೆಯದಲ್ಲ.1969 ರಲ್ಲಿ ಶರ್ಮಿಳಾ-ಪಟೌಡಿ ಮದುವೆ, 1980 ರಲ್ಲಿ ನೀನಾ ಗುಪ್ತಾ ಮತ್ತು ವಿವಿಯನ್ ರಿಚರ್ಡ್ಸ್ ಜೊತೆಗಾರಿಕೆ (ಅವರು ಮದುವೆಯಾಗಲಿಲ್ಲ, ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿದ್ದರು.

ಅದರಲ್ಲಿ ಅವರಿಗೊಂದು ಹೆಣ್ಣು ಮಗುವಾಯಿತು), ಇತ್ತೀಚಿನ ಕೊಹ್ಲಿ ಮುಂತಾದ ಘಟಾನುಘಟಿಗಳು ಈ ನಂಟನ್ನು ಪದೇ ಪದೇ ಪ್ರೂವ್ ಮಾಡುತ್ತಾ, ಗಟ್ಟಿಗೊಳಿಸುತ್ತಾ ಬಂದವರು. ಇವರ ಸಾಲಿಗೆ ರಾಷ್ಟ್ರೀಯ ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ ಈಗ ಸೇರ್ಪಡೆ.


Ad Widget

Ad Widget

Ad Widget

ಮನೀಶ್ ಪಾಂಡೆಯನ್ನು ನಮ್ಮ ಮಂಗಳೂರಿನ ಮನೆಮಗಳು,ಆದರೆ ಈಗ ಮುಂಬೈಯಲ್ಲಿ ನೆಲೆಸಿರುವ ಆಶಿತಾ ಶೆಟ್ಟಿ ಮದುವೆಯಾಗುವ ಸುದ್ದಿ ಬಂದಿದೆ. ತೆಲಿಕೆದ ಬೊಳ್ಳಿ ಸಿನಿಮಾದ ಮೂಲಕ ತುಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಆಶಿತಾ ಆನಂತರ ನಾಲ್ಕು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಳು.ಮದುವೆ ಡಿಸೆಂಬರ್ ಮೊದಲ ವಾರದಲ್ಲಿ, ಮುಂಬೈನಲ್ಲಿ ನಡೆಯಲಿದೆ.

 

 

Leave a Reply

error: Content is protected !!
Scroll to Top
%d bloggers like this: