ಪರಂ ಐಟಿ ರೇಡ್ ಅಪ್ಡೇಟ್: 8 ನೌಕರರ ಖಾತೆಯಲ್ಲಿ ‘ಖೊಟ್ಟಿ’ಯಂತರ ವ್ಯವಹಾರ

ಪರಮೇಶ್ವರ್ ಮತ್ತವರ ಅಣ್ಣನ ಮಗನಿಗೆ ಸೇರಿದ ಶೈಕ್ಷಣಿಕ ಸಂಸ್ಥೆ ಮತ್ತಿತರ ಆರ್ಥಿಕ ಅಡ್ಡೆಗಳ ಮೇಲೆ ದಾಳಿಯಿಟ್ಟ ಐಟಿ ದಾಳಿಮಾಡಿದ ನಂತರ ಕ್ಷಣಕ್ಕೊಂದು ವಿದ್ಯಮಾನಗಳು ನಡೆಯುತ್ತಿವೆ. ಮೊನ್ನೆ ಮೊದಲ ದಿನ 4.22 ಕೋಟಿ ಕ್ಯಾಶ್ ವಶಪಡಿಸಿಕೊಂಡ ನಂತರ ಮತ್ತೆ ಎರಡನೆಯ ದಿನಕ್ಕೆ, ಪರಮೇಶ್ವರರ ಆಪ್ತ ಪಿಎ ರಮೇಶ್ ಅವರ ಆತ್ಮಹತ್ಯೆ (?) ಆಯಿತು.ಮೂರನೆಯ ದಿನಕ್ಕೆ ಸಿದ್ಧ್ಹರ್ತ ಕಾಲೇಜಿನ ೮ ಬ್ಯಾಂಕ್ ಖಾತೆಗಳಲ್ಲಿ ಕೊಟ್ಯಾನ್ತ ರೂಪಾಯಿ ವ್ಯವಹಾಯ ನಡೆದ ದಾಖಲೆ ಬಹಿರಂಗವಾಗಿದೆ. ಅಚ್ಚರಿಯ ವಿಷಯವೆಂದರೆ ತಮ್ಮ ಹೆಸರಿನಲ್ಲಿ ಇರುವ ಖಾತೆಯ ಬಗ್ಗೆಯಾಗಲೀ, ಅದರಲ್ಲಿ ಇಷ್ಟೆಲ್ಲ ವ್ಯವಹಾರ ನಡೆಯುತ್ತಿರುವುದಾಗಲೀ ಅವರಿಗೆ ಯಾರಿಗೂ ಗೊತ್ತಿಲ್ಲ.ಇಂದಿನ ರಾಜಕೀಯ ಸಂಧರ್ಭಗಳಲ್ಲಿ ಯಾವುದೇ ಸಾಂವಿಧಾನಿಕ ಸಂಸ್ಥೆ ದಾಳಿ ಮಾಡಿದರೂ ಅದಕ್ಕೊಂದು ರಾಜಕೀಯದ ಬಣ್ಣ ನೀಡುವುದು ನಮ್ಮ ಈ ದಿನದ ಸಂಸ್ಕೃತಿ. ಇವತ್ತು ಕೂಡ ಹಾಗೆಯೆ ಆಗಿದೆ.ಮಾಜಿ ಡಿಸಿಎಂ ಪರಮೇಶ್ವರ್ ಅವರ ಮೇಲೆ ದಾಳಿ ಆದಾಗಲೂ, ಅದನ್ನು ಡಿಕೆ ಶಿವಕುಮಾರ್ ರ ಮೇಲೆ ನಡೆದ ದಾಳಿಗೆ ಮತ್ತು ಕಾಂಗ್ರೆಸ್ ಹೋಲಿಸಿಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ದೊರೆಗಳ ಸ್ಟೇಟ್ ಮೆಂಟ್ ಮೇಲೆ ಸ್ಟೇಟ್ ಮೆಂಟ್ ಬಂತು ನೋಡಿ. ಆದರೆ ದಿನಕಳೆದಂತೆ ಹೊಸ ಹೊಸ ವಿದ್ಯಮಾನಗಳು ನಡೆಯುತ್ತಿದ್ದು ದಾಳಿಗೆ ಪೂರಕವಾದ ಸಾಕ್ಷಿಗಳನ್ನೇ ನೀಡುತ್ತಿವೆ. ಅಲ್ಲ, ಒಬ್ಬ ಮಾಜಿ ಡಿಸಿಎಂ ನ ಪಿ ಎ ,ಸುಮಾರು ಐದು ವರ್ಷ ಪರಂ ಕೈಲಿ ಕೆಲಸ ಮಾಡಿದ್ದಾನೆ. ಇವತ್ತು ಆತ” ನಂಗೆ ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ಆಗುವುದಿಲ್ಲ. ನಾನು ಮರ್ಯಾದೆಗೆ ಅಂಜುತ್ತೇನೆ. ಅವರ ಪ್ರಶ್ನೆಗಳಿಗೆ ಉತ್ತರಿಸಲು ನಂಗೆ ಆಗುತ್ತಿಲ್ಲ ಅಂದರೆ ಏನರ್ಥ?” ನೀನಾಗಲಿ, ನಿನ್ನ ಸಂಸ್ಥೆಯಾಗಲಿ ತಪ್ಪು ಮಾಡದೆ ಹೋದರೆ ಯಾಕಪ್ಪ ನೀನು ಅಂಜಬೇಕು.ಒಳಗೆ ಏನೋ ಇದೆ ಅನ್ನುವುದು, ಪಿ ಎ ರಮೇಶ್ ಆತ್ಮಹತ್ಯೆ ಮಾಡಿಕೊಂಡ ತಕ್ಷಣದಿಂದ ಗೋಚರವಾಗುವ ಅಂಶಗಳು.ಒಂದೋ ಪರಂ ಪರವಾಗಿ ಸುಳ್ಳು ಹೇಳಿದರೆ ಸಿಕ್ಕಿ ಕೊಳ್ಳುವ ಭಯ, ಸತ್ಯ ಹೇಳಿದರೆ ತನ್ನ ಒಡೆಯನ ಎದುರೇ ಸಾಕ್ಷಿ ಸೃಷ್ಟಿಸುವ ಭಯ.ಏನು ಕೂಡಾ ಮಾಡಲಾಗದೆ ಅತಂತ್ರ ಸ್ಟಿಯಲ್ಲಿ ಬಹುಷಃ ಇಂತಹ ನಿರ್ಧಾರಕ್ಕೆ ಬಂದಿರಬೇಕು ಪರಂ ಅವರ ಪಿ ಎ ರಮೇಶ್. ಅಥವಾ ರಮೇಶನ ಹೆಸರಿನಲ್ಲಿ ಬೇನಾಮಿ ದುಡ್ಡು,ಆತನಿಗೆ ಅರಿವೆಯೇ ಇಲ್ಲದೆ ಅಕೌಂಟು ತೆರೆದು ಆತನನ್ನು ಈ ಬಾಳೆಯ ಒಳಗೆ ಮ್ಯಾನೇಜ್ಮೆಂಟ್ ಎಳೆದುಕೊಳ್ತಾ. ಅಥವಾ ಪರಂ ಅವರ ಅರಿವಿಗೆ ಬರದಂತೆ ಯಾವುದಾರೂ ಡೀಲಿಂಗ್ಸ್ ಆತ ಮಾಡಿದ್ದಾನಾ?. ಪ್ಟನ್ನ ಮ್ಯಾನೇಜ್ಮೆಂಟ್ ನ ಕಡೆಯಿಂದ ವಿಪರೀತ ಒತ್ತಡ ಕೊಟ್ಟರಾ, ಅದೇ ಆತ್ಮಹತ್ಯೆಗೆ ಎಳಸುವಂತೆ ಮಾಡಿತಾ? ಎಲ್ಲವೂ ತನಿಖೆಯಿಂದ ಹೊರಬರಲಿದೆ. ಆದರೆ ಮೂರನೆಯ ದಿನ ಪರಂ ಅವರ ಅಣ್ಣನ ಮಗ-ಬಹುತೇಕ ಪರಂ ಅವರ ಸಾಮ್ರಾಜ್ಯವನ್ನು ನೋಡುಕೊಳ್ಳುತ್ತಿರುವ ಆನಂದ ಐಟಿ ಇಲಾಖೆಗೆ ಪತ್ರ ಬರೆದಿದ್ದಾನೆ ‘ಮೆಡಿಕಲ್ ಕಾಲೇಜಿನ ಪ್ರತಿಯೊಂದು ವ್ಯವಹಾರವೂ ತನ್ನಅಧೀನದಲ್ಲೇ ನಡೆಯುತ್ತಿದ್ದವು. ಪ್ರವೇಶಾತಿ,ಡೊನೇಷನ್, ಸೀಟುಹಂಚಿಕೆ, ಲಾಭ ನಷ್ಟ-ಹೀಗೆ ಕಂಪ್ಲೇಟಕಾಂಪ್ಲೆಟ್ ವ್ಯವಹಾರವನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ.ಪರಮೇಶ್ವರರದ್ದು ಯಾವುದೇ ರೋಲ್ ಇರಲಿಲ್ಲ ಅಂತ ಆನಂದ್ ಡಿಕ್ಲೇರ್ ಮಾಡಿದ್ದಾನೆ.
ಸ್ವಭಾವತಃ ಸಜ್ಜನ ಮತ್ತು ದುಷ್ಟರಲ್ಲದ,ವಿಪರೀತ ದುಡ್ಡಿನ ಅಸೆ ಇಲ್ಲದ ವ್ಯಕ್ತಿ ಪರಮೇಶ್ವರರವರು. ಮೇಲ್ನೋಟಕ್ಕೆ ಇದೆಲ್ಲ ಒಳ ವ್ಯವಹಾರಗಳು ಪರಂ ಅವರ ಅರಿವಿಗೆ ಬಾರದಂತೆ ನಡೆದಿದೆಎಂಬತೆನಡೆದ ಹಾಗೆ ಅನ್ನಿಸುತ್ತಿದೆ. ಪರಂ ಅವರು ಎಷ್ಟೇ ಒಳ್ಳೆಯವರಿದ್ದರು,ಬೀಯಿಂಗ್ ಎ ಲೀಡರ್,ಬೀಯಿಂಗ್ ಎ ಓನರ್, ಜವಾಬ್ಧಾರಿಯನ್ನು ownership ಆಧಾರದಮೇಲೆ ಪರಂ ಅಮ್ತ್ತು ಅವರ ಅಣ್ಣನ ಮಗ ಆನಂದ ತೆಗೆದುಕೊಳ್ಳಲೇ ಬೇಕಾಗುತ್ತದೆ.
ಆದರೆ ಕಾನೂನು ಅದನ್ನು ಯಾವ ರೀತಿ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾಡು ನೋಡಬೇಕು.Ignorance ಅನ್ನುವುದು ಆದ ತಪ್ಪಿಗೆ ಜಸ್ಟಿಫಿಕೇಷನ್ ಆಗುವುದಿಲ್ಲ; ಅದು ಘಟಿಸಿದ ತಪ್ಪಿಗೆ ಪರಿಹಾರ ಕೂಡಾ ಆಗುವುದಿಲ್ಲ.
ಸಜ್ಜನ ಪರಂ ಈ ಚಕ್ರವ್ಯೂಹದಿಂದ ಹೊರಬರಲೆನ್ನುವುದೇ ನಮ್ಮ ಹಾರೈಕೆ.

 

Leave A Reply