ಪ್ರೊ ಕಬಡ್ಡಿ: ಕದನ ಕಣ- ಕಾವೇರಿದೆ ಕುತೂಹಲ

ಪ್ರೊ ಕಬಡ್ಡಿಯಲ್ಲಿ ಲೀಗ್ ಮಾದರಿಯ ಆಟ ಮಗಿದು ಈಗ ಪ್ಲೇ ಆಫ್ ಆಟ ಶುರುವಾಗಿದೆ. ಕಬಡ್ಡಿ ಅಂಕಣ ಒಮ್ಮಿಂದೊಮ್ಮೆಲೆ ಬಿಸಿಯಾಗಿ ಹಬೆಯಾಡುತ್ತಿದೆ. ಲೀಗ್ ಮಾದರಿಯ ಆಟ ಮುಗಿದಾಗ ದಬಾಂಗ್ ದೆಹಲಿಯು ಮೊದಲ ಸ್ಥಾನದಲ್ಲಿ ನಿಂತು ಬೀಗುತ್ತಿದೆ. ದೆಹಲಿಯು ಆಡಿದ ಎಲ್ಲ 6 ಸೀಸನ್ ಗಳಲ್ಲೂ ಹೀನಾಯ ಪ್ರದರ್ಶನ ಕಂಡಿತ್ತು. ಆದರೆ ಈ ಬಾರಿ ಏಕಾಏಕಿ ಪ್ಲೇ ಆಫ್ ವರೆಗೆ ಎಳೆದುಕೊಂಡು ಹೋದವನು ದಬಾಂಗ್ ದೆಹಲಿಯ ನವೀನ ಕುಮಾರ್!
ನಂತರದ ಸ್ಥಾನದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ನಮ್ಮ ಬೆಂಗಳೂರ್ ಹೋಂಟೀಮ್ ವು ಪ್ಲೇ ಆಫ್ ನ 6 ನೇ ಸ್ಥಾನದಲ್ಲಿದೆ.
ಮೊದಲ ನಾಕ್ ಔಟ್ ಮಾದರಿಯ ಪಂದ್ಯದಲ್ಲಿ ಬೆಂಗಳೂರು ತಂಡವು ಯು ಪಿ ಯೋಧ ತಂಡವನ್ನು ಎದುರಿಸಲಿದೆ. ಕಳೆದ ಎರಡು ಲೀಗ್ ಪಂದ್ಯಗಳಾವವು ಯು ಪಿ ಯೋಧ ತಂಡವು ಬೆಂಗಳೂರಿನ ಮೇಲೆ ಗೆಲುವು ಸಾಧಿಸಿತ್ತು.
ಯು ಪಿ ಯೋಧದ ಸ್ಟಾರ್ ರೈಡರ್ ಶ್ರೀಕಾಂತ್ ಜಾಧವ್ ಒಳ್ಳೆಯ ಫಾರ್ಮ್ನಲ್ಲಿದ್ದು ಕಳೆದ 12 ಮ್ಯಾಚುಗಳಲ್ಲಿ ಒಟ್ಟು 10 ಮ್ಯಾಚುಗಳನ್ನು ಅದು ಗೆಲುವು ಸಾಧಿಸಿದೆ. ಶ್ರೀಕಾಂತ್ ಜಾಧವಗೆ ಸಪೋರ್ಟ್ ಆಗಿ ರಿಶಾಂಕ್ ದೇವಾಡಿಗ ಮತ್ತು ಸುರೇಂದ್ರ ಗಿಲ್ ಅವರು ಸರಿಯಾಗಿ ಸಪೋರ್ಟ್ ನೀಡುತ್ತಾ ಬರುತ್ತಿದ್ದಾರೆ.ಯು ಪಿ ಯ ಡಿಫೆನ್ಸ್ ಅಂತೂ ಅತ್ಯಂತ ಬಲಿಷ್ಠವಾಗಿದೆ.ಅಷ್ಟೇ ಅಲ್ಲ, ತುಂಬಾ ಕನ್ಸಿಸ್ಟನ್ಟ್ ಅಂಡ್ ಬ್ಯಾಲೆನ್ಸ್ಡ್ಆಗಿದೆ.
ಆದರೆ ಬೆಂಗಳೂರು ಟೀಮ್ ನ್ನು ಯಾವುದೇ ಕಾರಣಕ್ಕೂ ನೆಗ್ಲೆಕ್ಟ್ ಮಾಡುವಂತೆಯೇ ಇಲ್ಲ.ಈ ಕ್ಷಣಕ್ಕೂ ಬೆಂಗಳೂರೇ ಬೆಂಗಳೂರಿಗರಲ್ಲಿ ಹಾಟ್ ಫ್ಯಾವರಿಟ್.ಕಾರಣ ಅದರ ಮೆಸ್ಮರೈಸಿಂಗ್ ಸ್ಟಾರ್ ರೈಡರ್ ಪವನ್ ಕುಮಾರ್ ಶೆರಾವತ್.ಕ್ರಿಟಿಕಲ್ ಪಂದ್ಯಗಳಲ್ಲಿ ಪವನ್ ಖುದ್ದು ಜವಾಬಾರಿಯನ್ನು ತನ್ನ ಬಲಿಷ್ಠ ಭುಜದ ಮೇಲೆ, ಎದುರು ಪಾಳಯದ ಆಟಗಾರರನ್ನು ಹೊತ್ತು ತರುವಂತೆ ಹೊತ್ತುಕೊಳ್ಳಬಲ್ಲ.ಎಂತಹ ಒತ್ತಡದ ಸನ್ನಿವೇಶದಲ್ಲಿ ಕೂಡ ಆರಾಮವಾಗಿ, ಏನು ನಡೆದೇ ಇಲ್ಲವೆಂಬಂತೆ, ಮೊದಲ ಲೀಗ್ ಪಂದ್ಯದ ರೈಡ್ ಎಂಬಂತೆ ಆಡಬಲ್ಲ. ಕೂಲ್ ಆಗಿದ್ದುಕೊಂಡು ಹಾಟ್ ಆಟ ಆಡಬಲ್ಲ ಆಟಗಾರ. ಇಲ್ಲಾಂದ್ರೆ ಮಲ್ಲಿಕಾ ಶೆರಾವತ್ ನ ಸರನೇಮ್ ಅನ್ನು ಇಟ್ಟುಕೊಳ್ತಿದ್ದಾನಾ ಆತ ?!
ಬೆಂಗಳೂರಿನ ಮತ್ತೊಂದು ಪ್ಲಸ್ ಪಾಯಿಂಟು ಅಂದರೆ ಅದರ ಕೋಚ್. ಆತನನ್ನು, ಆತನ ನಗುವನ್ನು ನೋಡುವುದೇ ಒಂದು ಚೆಂದ. ಎಂತಹ ಪ್ರತಿಕೂಲ ಪರಿಸ್ಥಿಯಿಯಲ್ಲೂ ಅತ್ಯಂತ ಸ್ಟ್ರಾಟೆಜಿಕ್ ಆಗಿ, ಆಟಗಾರನಿಗೆ ಒಬ್ಬ ಗೆಳೆಯನ ಥರ ಕರೆದು ಹೇಳಬಲ್ಲ ವ್ಯಕ್ತಿತ್ವ ರಣದೀಪ್ ಸಿಂಗ್ ನದು!

 

Leave A Reply