5000 ಕೋಟಿಯ ಒಡೆಯ ಪರಂ ಮೇಲೆ ಮುಗಿಬಿದ್ದಿದೆ ಐಟಿ

ಅಕ್ಟೋಬರ್ 10,2019:ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಒಡೆಯ ೫೦೦೦ ಕೋಟಿ ಆಸ್ತಿಯ ಅಧಿಪತಿ ಎಂದು ಹೇಳಲಾಗುತ್ತಿರುವ ಮಾಜಿ ಡೆಪ್ಯುಟಿ ಸಿಎಂ ಡಾ.ಪರಮೇಶ್ವರ್ ರ ಮನೆ ಕಚೇರಿ ಮತ್ತು ಬ್ಯಾಂಕು ಅಕೌಂಟುಗಳ ಮೇಲೆ ಐಟಿ ದಾಳಿ ನಡೆದಿದೆ. ಅಲ್ಲದೆ, ಅವರ ಆಪ್ತರಾದ ರಂಗನಾಥ್, ಶಿವಕುಮಾರ್, ಮುನಿರಾಮಯ್ಯ,,ಮಾಜಿ ಮಂತ್ರಿ ಆರ್ ಎಲ್ ಜಾಲಪ್ಪ ಮತ್ತವರ ಮಗಳು ಜೆ. ರಾಜೇಂದ್ರ ಅವರ ಅಳಿಯ ಜಿ.ಹ್ ನಾಗರಾಜು ಅವರ ಮೇಲೆ ಐಟಿ ಕಣ್ಣು ಹಾಕಿದೆ.
ಪರಮೇಶ್ವರ್ ರವರಿಗೆ ಸೇರಿದ ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ವಾಸನೆಯ ಬೆನ್ನು ಹತ್ತಿದೆ ಐಟಿ. ಹಾಗೆಂದು ಬಲವಾದ ಶಂಕೆಗಳು ಮೂಡುತ್ತಿದೆ.ಅಷ್ಟೇ ಅಲ್ಲದೆ, ವೈದ್ಯ ಸೀಟು ಬ್ಲಾಕಿಂಗ್-ಡಿ ಬ್ಲಾಕಿಂಗ್ ಮಾಡುವಲ್ಲಿ ನಡೆದ ವ್ಯವಹಾರದಲ್ಲಿ ರಾಜಸ್ಥಾನ ಮೂಲದ ಇಬ್ಬರು ವಿದ್ಯಾರ್ಥಿಗಳು ನೀಡಿದ ಟಿಪ್ ಆಫ್ ವೇಳೆ ದಾಳಿ ಟ್ರಿಗರ್ ಆಗಿದೆ ಎಂಬ ಪ್ರಾಥಮಿಕ ಮಾಹಿತಿ ಮಾಧ್ಯಮ ವಲಯದಲ್ಲಿದೆ.ಸಂಪೂರ್ಣ ಮಾಹಿತಿ ಬರಲು ಇನ್ನಷ್ಟು ಕಾಯಬೇಕಾಗಿದೆ.

 

Leave A Reply