ಯುದ್ಧ ಗೆಲ್ಲಲು ಹೊರಟ ರಫೆಲ್ ಬಗ್ಗೆ ಸೋತು ಸುಣ್ಣವಾದ ಕಾಂಗ್ರೆಸ್ ಟೀಕೆ

0 111

ಕಾಂಗ್ರೆಸ್ ಇತಿಹಾಸದಿಂದ ಪಾಠ ಕಲಿಯುವುದಿಲ್ಲವೆನ್ನುವುದು ನಾವು ಇತಿಹಾಸದಿಂದ ಕಲಿಯುವ ಪಾಠ. ಕಾಂಗ್ರೆಸ್ ಪದೇ ಪದೇ ಅದನ್ನು ಪ್ರೂವ್ ಮಾಡುತ್ತಿದೆ. ಈಗ ಅದರ ಮುತ್ಸದ್ದಿ ನಾಯಕ, ನಮ್ಮದೇ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯವರ ಸರದಿ.
”ನಾವು ಕೂಡ ಬೊಫೋರ್ಸ್ ಗನ್ ಅನ್ನು ತಗೊಂಡು ಬಂದೆವು. ಆದರೆ ಇಂತಹ ಷೋ ಆಫ್ ಯಾವತ್ತೂ ಮಾಡಿರಲಿಲ್ಲ ” ಎಂದು ಮಲ್ಲಿಕಾರ್ಜುನ ಖರ್ಗೆಯವರು ಮೊನ್ನೆ ವಿಜಯದಶಮಿಯ ದಿನ ಭಾರತ ತಾನು ಖರೀದಿಸಿದ ‘ರಫೇಲ್’ ಯುದ್ಧ ವಿಮಾನಕ್ಕೆ ‘ಶಸ್ತ್ರ ಪೂಜೆ’ ಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಾವು ಒಂದು ಹೊಸ ಕಾರು ಕೊಂಡರೆ, ಅದನ್ನು ತೊಳೆದು, ಹೂವು ,ಕುಕುಮ ಇಟ್ಟು ಪೂಜೆ ಮಾಡುತ್ತೇವೆ. ಆಮೇಲೆ ಲಿಂಬೆ ಹಣ್ಣು ಮೆಣಸು ಅದಕ್ಕೆ ಕಟ್ಟಿ ಒಂದು ದೇವಸ್ಥಾನ ಅಥವಾ ಪಕ್ಕದ ಮಂದಿರದಲ್ಲಿ ಪೂಜೆ ಮಾಡುವುದು ನಮ್ಮಎಲ್ಲರ ನಂಬಿಕೆ. ವಿಪರೀತವಾದ ದೈವಭಕ್ತಿ ಇಲ್ಲದ ವ್ಯಕ್ತಿ ಕೂಡ ಹಾಗೆ ಮಾಡುತ್ತಾನೆ. ಹೊಸ ಮನೆ ಕೊಂಡಾಗ ಹೋಮ, ಸತ್ಯನಾರಾಯಣ್ ಪೂಜೆ ಮಾಡುತ್ತೇವೆ. ಹಾಗೇನೇ, ಮೊನ್ನೆ ವಿಜಯದಶಮಿಯ ದಿನ ಹೆಚ್ಚಿನ ಎಲ್ಲರು ಶಸ್ತ್ರ ಪೂಜೆ/ಆಯುಧ ಪೂಜೆ ಮಾಡುತ್ತಾರೆ. ಅದೇ ಪ್ರಯುಕ್ತ ರಫೆಲ್ ಅನ್ನು ಒಂದು ಶಸ್ತ್ರವಾಗಿ ನೋಡಿ, ರಾಜನಾಥ್ ಸಿಂಗ್ ಅವರು ಫ್ರಾನ್ಸ್ ಗೆ ತೆರಳಿ ಪೂಜೆ ಮಾಡಿದ್ದು. ಅದನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಮತ್ತೆ ಮತ್ತೆ ಎಡವಿದೆ. ಅನಗತ್ಯ ವಿಷ್ಯಕ್ಕೆ ಬಾಯಿ ಹಾಕಿ ಜನಸಾಮಾನ್ಯರಿಂದ ಲೇವಡಿಗೆ ಒಳಪಡುತ್ತಿದೆ ಕಾಂಗ್ರೆಸ್!
ಇದೆಲ್ಲ ಯಾಕಪ್ಪ ಬೇಕು? ತಾನೊಂದು ಸ್ಟೇಟ್ಮೆಂಟ್ ಕೊಟ್ಟರೆ ಕನಿಷ್ಠ ಪಕ್ಷ 40 ಪ್ರತಿಶತ (ಅಂದಾಜು) ಜನರಾದರೂ ಅದನ್ನು ಒಪ್ಪುವಂತಿರಬೇಕು. ಆದರೆ ಕಾಂಗ್ರೆಸ್ ನ ಈ ಸ್ಟೇಟ್ಮೆಂಟ್ ಅನ್ನು ಸ್ವಸ್ಥ ಮನಸ್ಥಿತಿಯವರು ಯಾರು ಕೂಡ ಒಪ್ಪುವಂತಿಲ್ಲ. ಪೂಜೆ ಪುರಸ್ಕಾರ ಅವರವರ ನಂಬಿಕೆ. ಮಾಡಿಕೊಳ್ಳಲಿ. ರಫೆಲ್ ಡೀಲ್ ನಲ್ಲಿ ಮೋಸವಿದೆಯಾ, ರಫೆಲ್ ದುಬಾರಿ ಆಯ್ತಾ,ಅದು ಬೇಕಿರಲಿಲ್ಲವಾ…ಅದರ ಬಗ್ಗೆ ಮಾತಾಡಿ. ಅದು ಬಿಟ್ಟು ಬಾಯಿ ಚಪಲಕ್ಕೆ ಯಾಕೆ ಮತ್ತಷ್ಟು ಹೀನ ಸ್ಥಿತಿಗೆ ಕಾಂಗ್ರೆಸ್ ಅನ್ನು ತಳ್ಳುತ್ತಿದ್ದೀರಿ ನಾಯಕರೇ. ಅಟ್ಯಾಕ್ ಮಾಡಲು ಹೊರಟದ್ದು ಕಾಗ್ರೆಸ್ಸ್. ಆದರೆ ಈಗ ಸೋತು ನೋವು ತಿನ್ನುತ್ತಿರುವುದು ಕೂಡ ಅದೇ. ಬಿಜೆಪಿಯು “ಕಾಂಗ್ರೆಸ್ಗೆ ಭಾರತೀಯ ಪದ್ಧತಿ ಸಂಪ್ರದಾಯದಲ್ಲಿ ನಂಬಿಕೆಯಿಲ್ಲ. ಸೇನೆಯನ್ನು ಬಲಗೊಳಿಸುವುದು ಅದಕ್ಕೆ ಬೇಕಿಲ್ಲ. ಓಮ್ ಬರೆಯದೆ ಬೇರೇನು ಬರೆಯಬೇಕಿತ್ತು” ಎಂದು ಸಮರ್ಥವಾಗಿ ಉತ್ತರಿಸಿದೆ.
ಬಿಜೆಪಿ ಯವರು ನಿಮ್ಮ ಇಂತಹ ಒಂದು ಬಾಲಿಶ ನಿರ್ಧಾರಗಳಿಗೆ ಕಾಡು ಕೂತಿರುತ್ತಾರೆ; ನಿಮ್ಮ ಒಂದೊಂದು ಇಂತಹ ನುಡಿಗಳೆ, ನಿಮ್ಮ ಸುಯಿಸೈಡ್ ನೋಟ್ ನ ಒಂದೊಂದು ವಾಕ್ಯಗಳು!
ಥಿಂಕ್ ಬಿ ಫೋರ್ ಯು ಸ್ಪೀಕ್ !

Leave A Reply