ಪೆರೆಗ್ರೆಯ್ನ್ ಫಾಲ್ಕನ್ ಹಕ್ಕಿ | ಇವುಗಳ ವೇಗಕ್ಕೆ ಡೊಮೆಸ್ಟಿಕ್ ವಿಮಾನಗಳು ಬೆಚ್ಚಿ ಬೀಳುತ್ತವೆ !

ಇವನು ಪ್ರಪಂಚದ ಅತ್ಯಂತ ವೇಗದ ಓಟಗಾರ. ಅಲ್ಲಲ್ಲ, ಹಾರಾಟಗಾರ. ಭೂಮಿಯ ಮೇಲೆ ಆಗಲಿ, ಆಕಾಶದಲ್ಲಾಗಲಿ, ನೀರಲ್ಲಾಗಲಿ-ಯಾವುದೇ ಮಾಧ್ಯಮದ ಮೂಲಕವಾಗಲಿ ಇವುಗಳಿಗಿಂತ ವೇಗವಾಗಿ ಸಾಗಬಲ್ಲ ಜೀವಿ ಇನ್ನೊಂದಿಲ್ಲ. ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ಸಾಗಬಲ್ಲ ಜೀವಿಗಳಲ್ಲಿ ಈ ಪೆರೆಗ್ರೆಯ್ನ್ ಹಕ್ಕಿಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಅವುಗಳ ಹಾರಾಟ ವೇಗ ನೋಡಿದರೆ ನಮ್ಮ ಡೊಮೆಸ್ಟಿಕ್ ವಿಮಾನಗಳು ಬೆಚ್ಚಿ ಬೀಳುತ್ತವೆ !

ಅವುಗಳ ವೇಗ ಗಂಟೆಗೆ ಬರೋಬ್ಬರಿ 242 ಮೈಲಿಗಳು, ಅಂದರೆ 389 ಕಿಲೋಮೀಟರುಗಳು !

ದೊಡ್ಡ, ಕಾಗೆ ಗಾತ್ರದ ಫಾಲ್ಕನ್, ನೀಲಿ-ಬೂದು ಬೆನ್ನು ಹೊಂದಿದ್ದು, ಬಿಳಿ ಕೆಳಭಾಗಗಳು ಮತ್ತು ಕಪ್ಪು ತಲೆಯನ್ನು ಹೊಂದಿದೆ. ಪೆರೆಗ್ರೆಯ್ನ್ ಫಾಲ್ಕನ್ ಹಕ್ಕಿಗಳು ತನ್ನ ವೇಗಕ್ಕೆ ಹೆಸರುವಾಸಿಯಾಗಿದೆ, ಅದರ ವಿಶಿಷ್ಟ ಬೇಟೆಯ ಸಮಯದಲ್ಲಿ ಅವುಗಳು ಹೈಸ್ಪೀಡ್ ಡೈವ್ ಹೊಡೆಯುತ್ತವೆ. ಆ ಸಂದರ್ಭದಲ್ಲಿ ಅವುಗಳ ವೇಗವು ಬರೋಬ್ಬರಿ 242 ಮೈಲಿಗಳು, ಅಂದರೆ 389 ಕಿಲೋಮೀಟರುಗಳುಗಿಂತ ಹೆಚ್ಚು ತಲುಪುತ್ತದೆ. ಇದು ವಿಶ್ವದ ಅತ್ಯಂತ ವೇಗದ ಪಕ್ಷಿಯಾಗಿದೆ, ಜೊತೆಗೆ ಪ್ರಾಣಿ ಸಾಮ್ರಾಜ್ಯದ ಅತ್ಯಂತ ವೇಗದ ಸದಸ್ಯ ಎಂಬ ಹೆಗ್ಗಳಿಕೆ ಈ ಹಕ್ಕಿಗಳದು.

ಆವಾಸಸ್ಥಾನ ಪೆರೆಗ್ರಿನ್ ಫಾಲ್ಕನ್ಗಳು ವಿಶ್ವದ ಅತ್ಯಂತ ಸಾಮಾನ್ಯ ಬೇಟೆಯ ಪಕ್ಷಿಗಳಲ್ಲಿ ಒಂದಾಗಿದೆ. ಅಂಟಾರ್ಕ್ಟಿಕಾವನ್ನು ಹೊರತುಪಡಿಸಿ ಅವುಗಳು ಎಲ್ಲಾ ಖಂಡಗಳಲ್ಲಿ ವಾಸಿಸುತ್ತವೆ. ಅವು ವಿಶಾಲವಾದ ತೆರೆದ ಸ್ಥಳಗಳನ್ನು ಬಯಸುತ್ತವೆ. ಮತ್ತು ಇವು ಕಡಲತೀರವನ್ನು ಇಷ್ಟಪಡುವ ಹಕ್ಕಿಗಳು. ಸಾಮಾನ್ಯವಾಗಿರುವ ಕರಾವಳಿಗಳ ಬಳಿ ಇವು ಹೆಚ್ಚಾಗಿ ಕಾಣ ಸಿಗುತ್ತವೆ. ಆದರೆ ಅವುಗಳನ್ನು ಹುಲ್ಲುಗಾವಲುಗಳಿಂದ ಮರುಭೂಮಿಗಳವರೆಗೆ ಎಲ್ಲೆಡೆ ಕಾಣಬಹುದು.

ಪೆರೆಗ್ರಿನ್ ಫಾಲ್ಕನ್ಸ್ ಜೀವನಕ್ಕಾಗಿ ಸಂಗಾತಿಯಾಗುತ್ತವೆ, ಅಂದರೆ ಅವುಗಳಿಗೆ ಒಂದೇ ಸಂಗಾತಿ. ಮನುಷ್ಯರ ಥರ ಅವುಗಳು ಕೂಡಾ ಏಕ ಪತ್ನಿ ವೃತಸ್ಥರು !! ಆದರೆ ಸಂಗಾತಿಗಳಲ್ಲಿ ಒಬ್ಬರು ಸತ್ತರೆ, ಅದನ್ನು ತಕ್ಷಣವೇ ಬದಲಾಯಿಸಲಾಗುತ್ತದೆ. ಅವು ಒಂದರಿಂದ ಮೂರು ವರ್ಷ ವಯಸ್ಸಿನಿಂದ ಸಂತಾನೋತ್ಪತ್ತಿ ಮಾಡಲು ಸಮರ್ಥರಾಗಿದ್ದಾರೆ. ಗಂಡು ಪೆರೆಗ್ರಿನ್ ಫಾಲ್ಕಾನ್‌ಗಳು ಕೋರ್ಟಿಂಗ್ ಮತ್ತು ಗೂಡುಕಟ್ಟುವ ಸಮಯದಲ್ಲಿ ಹೆಣ್ಣು ಆಹಾರವನ್ನು ತರುತ್ತವೆ. ಮಾರ್ಚ್ ಆರಂಭದ ವೇಳೆಗೆ ವಯಸ್ಕ ಜೋಡಿಯು ಋತುವಿಗಾಗಿ ತನ್ನ ಗೂಡನ್ನು ಆರಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಮೂರರಿಂದ ಐದು ಮೊಟ್ಟೆಗಳನ್ನು ನಡುವೆ ಏಪ್ರಿಲ್ ಆರಂಭದಲ್ಲಿ ಇಡುತ್ತವೆ. ಸುದೀರ್ಘ ಒಂದು ತಿಂಗಳ ಅವಧಿಯ ಕಾವು ಕೊಟ್ಟ ನಂತರ ನಂತರ ಮೇ ತಿಂಗಳ ಆರಂಭದಲ್ಲಿ ಮರಿಗಳು ಚಿಪ್ಪನ್ನು ಕೊಕ್ಕಿನಿಂದ ಕುಟುಕಿ ತೂತು ಮಾಡಿ ಹೊರಬರುತ್ತವೆ.

ಮರಿಗಳು ಹೊರಬಂದ ನಂತರ, ಗಂಡು ಮತ್ತು ಹೆಣ್ಣು ಎರಡೂ ಅವುಗಳ ಲಾಲನೆ ಪಾಲನೆಗೆ ಇಳಿಯುತ್ತವೆ, ಆಹಾರವನ್ನು ನೀಡುತ್ತವೆ. ಈ ವಯಸ್ಕ ಗಿಡುಗ ತನ್ನ ಕೊಕ್ಕನ್ನು ಸಣ್ಣ ಮಾಂಸದ ತುಂಡುಗಳನ್ನು ಕಿತ್ತುಹಾಕಲು ಮತ್ತು ಅವುಗಳನ್ನು ಗೂಡಿನ ಮರಿಗಳಿಗೆ ಸೂಕ್ಷ್ಮವಾಗಿ ರವಾನಿಸಲು ಬಳಸುತ್ತದೆ. ಅವು ಮೊಟ್ಟೆಯೊಡೆದಾಗ, ಮರಿಗಳು ತುಪ್ಪುಳಿನಂತಿರುವ ಬಿಳಿ ಬಣ್ಣದಿಂದ ಇರುತ್ತವೆ ಮತ್ತು ಅವುಗಳ ದೇಹಕ್ಕೆ ಹೋಲಿಸಿದರೆ ಬಹಳ ದೊಡ್ಡ ಪಾದಗಳನ್ನು ಹೊಂದಿರುತ್ತವೆ. ಆದರೆ ಕೇವಲ ಐದಾರು ವಾರಗಳಲ್ಲಿ ಗಿಡುಗಗಳು ಸಂಪೂರ್ಣ ಗರಿಗಳನ್ನು ಪಡೆದು ಹಾರಲು ಸಿದ್ಧವಾಗುತ್ತವೆ. ಮರಿಗಳು ಜೂನ್ ಮಧ್ಯದಲ್ಲಿ ಸುಮಾರು 7 ವಾರಗಳ ವಯಸ್ಸಿನಲ್ಲಿ ಗೂಡುಬಿಡುತ್ತವೆ. ಮತ್ತು ಆಗಸ್ಟ್ ಆರಂಭದ ವೇಳೆಗೆ ತಮ್ಮ ಪೋಷಕರಿಂದ ಸ್ವತಂತ್ರವಾಗುತ್ತವೆ. ಅಲ್ಲಿಂದ ವೇಗವೇ ಅದರ ಜೀವನ ಶೈಲಿ.

ಮೂಲತಃ ಅಮೇರಿಕ ಮೂಲದ ಪೆರೆಗ್ರೆಯ್ನ್ ಫಾಲ್ಕನ್ ಹಕ್ಕಿಗಳು ಈಗೀಗ ಪ್ರಪಂಚದೆಲ್ಲೆಡೆ ಕಂಡು ಬರುತ್ತವೆ. ಸಾಮಾನ್ಯವಾಗಿ ಸಮುದ್ರ ತೀರದ ಅತ್ಯಂತ ಎತ್ತರದ ಕಟ್ಟಡಗಳು ಅಥವಾ ಮರಗಳು ಇದರ ಆವಾಸ ಸ್ಥಾನಗಳು. ಪಾರಿವಾಳಗಳು, ಸಣ್ಣಪುಟ್ಟ ಹಕ್ಕಿಗಳು, ಬಾವಲಿಗಳು ಇವುಗಳ ಆಹಾರ. ವಿಶೇಷವೆಂದರೆ ಗಂಡು ಹಕ್ಕಿಗಳು ಸಣ್ಣ ಸೈಜಿನಲ್ಲಿರುತ್ತವೆ. ಸಾಮಾನ್ಯವಾಗಿ ವಯಸ್ಕ ಹೆಣ್ಣು ಪೆರೆಗ್ರೆಯ್ನ್ ಫಾಲ್ಕನ್ ಹಕ್ಕಿಗಳು ಗಂಡಿಗಿಂತ ಮೂವತ್ತು ಪರ್ಸೆಂಟ್ ನಷ್ಟು ದೇಹ ಗಾತ್ರದಲ್ಲಿ ದೊಡ್ಡದಿರುತ್ತವೆ.

ಹೆಣ್ಣು ಹಕ್ಕಿಗಳು ಮುಕ್ಕಾಲು ಕೆಜಿಯಿಂದ ಒಂದೂವರೆ ಕೆಜಿಯವರೆಗೆ ತೂಗಿದರೆ, ಗಂಡು ಹಕ್ಕಿಗಳು ಒಂದು ಕೆಜಿಯವರೆಗೆ ತೂಕ ಹೊಂದಿರುತ್ತವೆ. ಅವುಗಳು ತಮ್ಮ ದೇಹವನ್ನು ಹಿಡಿಯಾಗಿಸಿ ತಮ್ಮ ಬಲವಾದ ರೆಕ್ಕೆಯನ್ನು ಬೀಸಿದವೆಂದರೆ, ನಮ್ಮ ಡೊಮೆಸ್ಟಿಕ್ ವಿಮಾನಗಳು ಹಿಂದೆ ಬೀಳುವುದು ಖಚಿತ ! ಆ ಪರಿಯಾಗಿಯೋ ರೆಕ್ಕೆ ಬೀಸಿ ಉಸಿರು ಬಿಗಿಹಿಡಿದು ದೇಹವನ್ನು ಮುದ್ದೆಯಾಗಿಸಿ ಅವು ಬಲವಾಗಿ ರೆಕ್ಕೆ ಬೀಸಬಲ್ಲವು.

ಅಷ್ಟೇ ಅಲ್ಲದೆ ‘ ಜೀರೋ ರೆಸಿಸ್ಟಂಟ್ ‘ ಆಗುವಂತೆ ದೋಣಿಯಾಕಾರದಲ್ಲಿ ದೇಹವನ್ನು ಪರಿವರ್ತಿಸಿಕೊಂಡು ಆಕಾಶದಿಂದ ‘ಫ್ರೀ ಫಾಲ್’ ಮಾಡುವುದರಲ್ಲಿಯೂ ಇವು ನಿಸ್ಸೀಮರು ! ಹಾಗೆ ಬೀಳುತ್ತಲೇ, ತನ್ನ prey ಯ ಮೇಲೆ ಸರಕ್ಕನೆ ಎರಗಿ, ಬಲಿಯನ್ನು ಬಿಗಿಯಾಗಿ ಹಿಡಿದು ಮತ್ತೆ ಸಡನ್ ಆಗಿ ವೇಗ ಕಡಿಮೆ ಮಾಡಿಕೊಂಡು ಮತ್ತೆ ಆಕಾಶಕ್ಕೆ ತಾನು ಹಿಡಿದ ಬಲಿಯೊಂದಿಗೆ ಚಿಮ್ಮಬಲ್ಲಂತಹ ಫ್ಲೆಕ್ಸಿಬಿಲಿಟಿ ಅವುಗಳದು. ಅವುಗಳ ವೇಗ, ಮತ್ತು ಬಲಿಬೀಳಿಸಲು ಹೋಗುವ ನಿಖರತೆಗೆ ಅವುಗಳೇ ಸಾಟಿ.

Leave A Reply

Your email address will not be published.