ವಿಸ್ಮಯ ವಿಶ್ವ | ಪೆರೆಗ್ರೆಯ್ನ್ ಫಾಲ್ಕನ್ ಹಕ್ಕಿ | ಇವುಗಳ ವೇಗಕ್ಕೆ ಡೊಮೆಸ್ಟಿಕ್ ವಿಮಾನಗಳು ಬೆಚ್ಚಿ ಬೀಳುತ್ತವೆ !

ಇವನು ಪ್ರಪಂಚದ ಅತ್ಯಂತ ವೇಗದ ಓಟಗಾರ. ಅಲ್ಲಲ್ಲ, ಹಾರಾಟಗಾರ. ಭೂಮಿಯ ಮೇಲೆ ಆಗಲಿ, ಆಕಾಶದಲ್ಲಾಗಲಿ, ನೀರಲ್ಲಾಗಲಿ-ಯಾವುದೇ ಮಾಧ್ಯಮದ ಮೂಲಕ ವೇಗವಾಗಿ ಸಾಗಬಲ್ಲ ಜೀವಿಗಳಲ್ಲಿ ಈ ಪೆರೆಗ್ರೆಯ್ನ್ ಹಕ್ಕಿಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಅವುಗಳ ಹಾರಾಟ ವೇಗ ನೋಡಿದರೆ ನಮ್ಮ ಡೊಮೆಸ್ಟಿಕ್ ವಿಮಾನಗಳು ಬೆಚ್ಚಿ ಬೀಳುತ್ತವೆ. !

ಅವುಗಳ ವೇಗ ಗಂಟೆಗೆ ಬರೋಬ್ಬರಿ 242 ಮೈಲಿಗಳು, ಅಂದರೆ 389 ಕಿಲೋಮೀಟರುಗಳು !

ಅಮೇರಿಕ ಮೂಲದ ಪೆರೆಗ್ರೆಯ್ನ್ ಫಾಲ್ಕನ್ ಹಕ್ಕಿಗಳು ಈಗೀಗ ಪ್ರಪಂಚದೆಲ್ಲೆಡೆ ಕಂಡು ಬರುತ್ತವೆ. ಸಾಮಾನ್ಯವಾಗಿ ಸಮುದ್ರ ತೀರದ ಅತ್ಯಂತ ಎತ್ತರದ ಕಟ್ಟಡಗಳು ಅಥವಾ ಮರಗಳು ಇದರ ಆವಾಸ ಸ್ಥಾನಗಳು. ಪಾರಿವಾಳಗಳು, ಸಣ್ಣಪುಟ್ಟ ಹಕ್ಕಿಗಳು, ಬಾವಲಿಗಳು ಇವುಗಳ ಆಹಾರ. ಸಾಮಾನ್ಯವಾಗಿ ವಯಸ್ಕ ಹೆಣ್ಣು ಪೆರೆಗ್ರೆಯ್ನ್ ಫಾಲ್ಕನ್ ಹಕ್ಕಿಗಳು ದೇಹ ಗಾತ್ರದಲ್ಲಿ ದೊಡ್ಡದಿರುತ್ತವೆ. (ಮನುಷ್ಯರಂತೆಯೇ ??!).

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಹೆಣ್ಣು ಹಕ್ಕಿಗಳು ಮುಕ್ಕಾಲು ಕೆಜಿ ಯಿಂದ ಒಂದೂವರೆ ಕೆಜಿಯವರೆಗೆ ತೂಗಿದರೆ, ಗಂಡು ಹಕ್ಕಿಗಳು ಒಂದು ಕೆಜಿ ಯವರೆಗೆ ತೂಕ ಹೊಂದಿರುತ್ತವೆ. ಅವುಗಳು ತಮ್ಮ ದೇಹವನ್ನು ಹಿಡಿಯಾಗಿಸಿ ತಮ್ಮ ಬಲವಾದ ರೆಕ್ಕೆಯನ್ನು ಬೀಸಿದವೆಂದರೆ, ನಮ್ಮ ಡೊಮೆಸ್ಟಿಕ್ ವಿಮಾನಗಳು ಹಿಂದೆ ಬೀಳುವುದು ಖಚಿತ !

ಅಷ್ಟೇ ಅಲ್ಲದೆ ‘ಜೀರೋ ರೆಸಿಸ್ಟಂಟ್’ ಆಗುವಂತೆ ದೋಣಿಯಾಕಾರದಲ್ಲಿ ದೇಹವನ್ನು ಪರಿವರ್ತಿಸಿಕೊಂಡು ಆಕಾಶದಿಂದ ‘ಫ್ರೀ ಫಾಲ್’ ಮಾಡುವುದರಲ್ಲಿಯೂ ಇವು ನಿಸ್ಸೀಮರು ! ಹಾಗೆ ಬೀಳುತ್ತಲೇ, ತನ್ನ prey ಯ ಮೇಲೆ ಸರಕ್ಕನೆ ಎರಗಿ, ಸಡನ್ ಆಗಿ ವೇಗ ಕಡಿಮೆ ಮಾಡಿಕೊಂಡು ಮತ್ತೆ ಆಕಾಶಕ್ಕೆ ತಾನು ಹಿಡಿದ ಬಲಿಯೊಂದಿಗೆ ಚಿಮ್ಮಬಲ್ಲಂತಹ ಫ್ಲೆಕ್ಸಿಬಿಲಿಟಿ ಅವುಗಳದು.

Leave a Reply

error: Content is protected !!
Scroll to Top
%d bloggers like this: