# ಎಟಿಎಂ ದರೋಡೆ, ದರೋಡೆಕೋರನಿಂದ ಸುತ್ತಿಗೆಯಲ್ಲಿ ಪೆಟ್ಟು ತಿಂದರೂ, ಮಾಸ್ಕ್ ತೆಗೆಯುವಲ್ಲಿ ಸಫಲನಾದ ಸೆಕ್ಯುರಿಟಿ ಗಾರ್ಡ್

- Link: https://hosakannada.com/%e0%b2%b8%e0%b2%be%e0%b2%ae%e0%b2%be%e0%b2%a8%e0%b3%8d%e0%b2%af%e0%b2%b0%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%b8%e0%b2%be%e0%b2%ae%e0%b2%be%e0%b2%a8%e0%b3%8d%e0%b2%af%e0%b2%b0%e0%b3%81/atm-thief-and-fight/
- Published: 2022-01-15T12:59:48+00:00
- Author: ಹೊಸಕನ್ನಡ ನ್ಯೂಸ್

ಪಣಜಿ : ಎಟಿಎಂ ಗೆ ನುಗ್ಗಿ ದರೋಡೆ ನಡೆಸಲು ಮುಂದಾಗಿದ್ದ ಕಳ್ಳನನ್ನು ಹಿಡಿಯಲು ಹೋದ ಭದ್ರತಾ ಸಿಬ್ಬಂದಿ
ತಲೆಗೆ ಸುತ್ತಿಗೆಯಿಂದ ಹೊಡೆದು ಹಲ್ಲೆ ಮಾಡಿ ಪರಾರಿಯಾದ ಘಟನೆ ಪಣಜಿಯಲ್ಲಿ ನಡೆದಿದೆ.

Sponsored

ಈ ದರೋಡೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಎಂಟಿಎಂ ನಲ್ಲಿ ನಡೆದಿದೆ. ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ
ರೆಕಾರ್ಡ್ ಆಗಿದೆ.

Advertisement

Advertisement

ಸುಮಾರು 40 ಸೆಕೆಂಡ್ ‌ನ ಈ ವೀಡಿಯೋದಲ್ಲಿ ದರೋಡೆ ಮಾಡಲೆಂದು ಬಂದ ವ್ಯಕ್ತಿ ಮಾಸ್ಕ್ ಹಾಕಿಕೊಂಡು ಎಟಿಎಂ
ಗೆ ನುಗ್ಗಿದ್ದಾನೆ‌. ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಆತನ ಮೇಲೆ ದಾಳಿ ಮಾಡಿದ್ದಾನೆ. ಪ್ರತಿಯಾಗಿ
ದರೋಡೆಕೋರ ಸುತ್ತಿಗೆಯಿಂದ ಹೊಡೆದಿದ್ದಾನೆ. ಈ ವೇಳೆ ಅವರಿಬ್ಬರ ಮಧ್ಯೆ ಗುದ್ದಾಟ ನಡೆದು, ಸೆಕ್ಯೂರಿಟಿ
ಗಾರ್ಡ್ ಆತನ ಮುಖದ ಮಾಸ್ಕ್ ತೆಗೆಯುವಲ್ಲಿ ಸಫಲನಾಗಿದ್ದಾನೆ.

ಅಲ್ಲದೇ ಆತನ ಕೈಯಲ್ಲಿದ್ದ ಸುತ್ತಿಗೆ ಎಳೆದುಕೊಳ್ಳಲು ಗಾರ್ಡ್ ಯತ್ನಿಸಿದ್ದಾನೆ. ಈ ಸಮಯದಲ್ಲಿ ದರೋಡೆಕೋರ
ಸುತ್ತಿಗೆಯಿಂದ ಸೆಕ್ಯುರಿಟಿ ಗಾರ್ಡ್ ಮೇಲೆ ಹಲವು ಬಾರಿ ಹೊಡೆದಿದ್ದಾನೆ. ಪರಿಣಾಮ ಸೆಕ್ಯುರಿಟಿ ಗಾರ್ಡ್
ಕೆಳಗೆ ಬಿದ್ದಿದ್ದಾನೆ‌. ಆದರೂ ದರೋಡೆಕೋರನ ಮಾಸ್ಕ್ ತೆಗೆದಿದ್ದಾರೆ. ತನ್ನ ಮುಖದಲ್ಲಿರುವ ಮಾಸ್ಕ್
ಕಳಚಿ ಕೆಳಗೆ ಬೀಳುತ್ತಿದ್ದಂತೆ ದರೋಡೆಕೋರ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಘಟನೆಯ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement
