# ಎರಡು ಮದುವೆಯಾದವ ವಿಚ್ಛೇದಿತೆ ಜೊತೆ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್! ಕೊನೆಗೆ ಆಕೆಗೆ ಕೈ ಕೊಟ್ಟು, ಮೂರನೇ ಮದುವೆ! ಅದೇ ಕೊನೆ, ಮುಂದಿತ್ತು ಮಾರಿಹಬ್ಬ!!!

- Link: https://hosakannada.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81-2/living-together/
- Published: 2022-04-25T22:12:18+00:00
- Author: ಹೊಸಕನ್ನಡ ನ್ಯೂಸ್

ಇಲ್ಲೊಬ್ಬ ಭೂಪ ವಿಚ್ಛೇದಿತೆ ಜೊತೆ ನಾಲ್ಕು ವರ್ಷ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದು, ಆಕೆಯನ್ನೇ
ಮದುವೆ ಆಗುತ್ತೇನೆಂದು ಮಾತು ಕೊಟ್ಟು, ಕೈಕೊಟ್ಟಿದ್ದು ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿ 
ಜೈಲುಪಾಲಾಗಿದ್ದಾನೆ.

Sponsored

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಈ ಚಿತ್ರವಿಚಿತ್ರ ಘಟನೆ ನಡೆದಿದೆ.
ಸಿದ್ದೇಶ್ (33) ಎಂಬಾತನೇ ಆರೋಪಿ. ವಿಚ್ಛೇದಿತೆ ನೀಡಿದ ದೂರಿನ ಮೇರೆಗೆ ದಾಬಸ್‌ಪೇಟೆ ಪೊಲೀಸರ ಆರೋಪಿಯನ್ನು
ಬಂಧಿಸಿದ್ದಾರೆ.

Advertisement

Advertisement

ಆರೋಪಿ ಸಿದ್ದೇಶ್ ಈ ಮೊದಲು ಎರಡು ಮದುವೆಯಾಗಿದ್ದ. ನಂತರ 4 ವರ್ಷಗಳಿಂದ ವಿಚ್ಛೇದನಕ್ಕೊಳಗಾಗಿದ್ದ 
ಮಹಿಳೆ ಜತೆ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದು ಆಕೆಯನ್ನೇ ಮದುವೆಯಾಗುವುದಾಗಿ ಭರವಸೆ ನೀಡಿದ್ದ.
ಆದರೆ ಆ ಬಳಿಕ ವಿಚ್ಛೇಧಿತೆಗೂ ಕೈ ಕೊಟ್ಟು, ಮೂರನೇ ಮದುವೆ ಕೂಡ ಮಾಡಿಕೊಂಡಿದ್ದ.

ಎಲ್ಲಾ ಆಯಿತು ಅಂದರೆ, ನಂತರ ಮೂರನೇ ಹೆಂಡತಿಗೆ ಕೈಕೊಟ್ಟು ಪುನಃ ವಿಚ್ಛೇದಿತೆಯ ಸಂಗಕ್ಕೆ ಹಾತೊರೆದಿದ್ದ.
ವಿಚ್ಛೇದಿತೆ ಈತನ ವಿರುದ್ಧ ವಂಚನೆ ಹಾಗೂ ದೈಹಿಕ ಹಿಂಸೆ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದು,
ಆ ಪ್ರಕಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Advertisement
