# Bengaluru Serial Blasts: 2008ರ ಬೆಂಗಳೂರು ಸರಣಿ ಸ್ಪೋಟ ಪ್ರಕರಣ ;   ತನಿಖೆಯಿಂದ ಶಾಕಿಂಗ್ ಮಾಹಿತಿ ಬಹಿರಂಗ – ನಾಸೀರ್’ನ ಮತ್ತೊಂದು ಸಂಚು ಬಯಲು !

- Link: https://hosakannada.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81-2/latest-news-crime-news-bangalore-serial-blast-case-investigation-reveals-information/
- Published: 2023-07-20T16:59:37+00:00
- Author: ವಿದ್ಯಾ ಗೌಡ

Bengaluru Serial Blasts: ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ 2008ರ ವಿದ್ವಂಸಕ ಕೃತ್ಯದ (Bengaluru
Serial Blasts) ರುವಾರಿ ನಾಸೀರ್’ನ ಮತ್ತೊಂದು ಸಂಚು ಬಯಲಾಗಿದೆ. ಕೇರಳ ಮೂಲದ ನಾಸೀರ್ ಎಲ್​ಇಟಿ 
ಸಂಘಟನೆಯ ಅಬ್ದುಲ್ ಮದನಿಯನ ಆತ್ಮೀಯನೂ ಹೌದು. ಆತನ ಜೊತೆಗೂಡಿ 1998 ರಲ್ಲಿ ಕೊಯಂಬತ್ತೂರಿನಲ್ಲಿ ಸ್ಪೋಟ
ನಡೆಸಿದ್ದ ಈತ ಬಳಿಕ ಬೆಂಗಳೂರಿನಲ್ಲಿ 2008 ರಲ್ಲಿ ಸರಣಿ ಸ್ಪೋಟದ ಪ್ರಮುಖ ರುವಾರಿಯಾಗಿದ್ದ. ಸದ್ಯ
ಜೈಲು ಕಂಬಿ ಹಿಂದೆ ಕುಳಿತಿದ್ದಾನೆ.

Sponsored

ನಾಸಿರ್ ಬೆಂಗಳೂರಿನಲ್ಲಿ ಸ್ಪೋಟ ನಡೆಸಿ ಬಾಂಗ್ಲಾದೇಶಕ್ಕೆ ಪರಾರಿಯಾಗುವ ಯತ್ನದ ವೇಳೆ ಬಿಎಸ್​ಎಫ್​
ಸಿಬ್ಬಂದಿ ಕೈಗೆ ಸಿಕ್ಕಿಬಿದಿದ್ದ. ಆತನನ್ನು ಬಂಧಿಸಿ, ಪರಪ್ಪನ ಅಗ್ರಹಾರಕ್ಕೆ ನೂಕಲಾಗಿತ್ತು. ಆಗ 
ಈತನ ಹಿಸ್ಟರಿ ಹುಡುಕುತ್ತಿದ್ದಾಗ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಸದ್ಯ ಜೈಲಿನಲ್ಲಿದ್ದುಕೊಂಡೇ 
ಈತ ಮತ್ತಷ್ಟು ಪ್ಲ್ಯಾನ್ ನಡೆಸಿದ್ದಾನೆ. ಈ ಬಗ್ಗೆ ಶಾಕಿಂಗ್ ಮಾಹಿತಿ ಬಹಿರಂಗವಾಗಿದೆ.

Advertisement

Advertisement

ಎಲ್​ಇಟಿನ ದಕ್ಷಿಣ ಭಾರತದ ಕಮಾಂಡರ್ ಆದ ಈತ ಪಾಕಿಸ್ತಾನದಲ್ಲಿ ತರಬೇತಿ, ಬಾಂಬ್ ತಯಾರಿ, ಸ್ಪೋಟಕ ವಸ್ತುಗಳ
ಸಂಗ್ರಹಣೆ, ಬಾಂಬ್ ಸ್ಪೋಟ ತಯಾರಿ, ಅದಕ್ಕೆ ಬೇಕಾದ ಫಂಡಿಗ್, ಟ್ರೇನಿಂಗ್ ನೀಡುವುದರಲ್ಲಿ ಪರಿಣಿತಿ
ಹೊಂದಿದ್ದನು. ಜೊತೆಗೆ ಜನರ ಬ್ರೇನ್ ವಾಶ್ ಮಾಡಿ ತನಗೆ ಬೇಕಾದಂತೆ ಇನ್ನೊಬ್ಬರ ತಲೆ ಕಡಿಸುತ್ತಿದ್ದನು.
ಅಲ್ಲದೆ, ನಾಸಿರ್ ಜೈಲಿನಲ್ಲೇ ತನ್ನ ಬ್ರೇನ್ ವಾಶ್ ಕೆಲಸ ಆರಂಭಸಿದ್ದ. ಕೆಲವು ವ್ಯಕ್ತಿಗಳನ್ನು ತನ್ನ
ಬ್ಯಾರೆಕ್​ಗೆ ಕರೆಸಿಕೊಳ್ಳುತಿದ್ದ. ಅವರನ್ನು ಕೃತ್ಯಕ್ಕೆ ಬೇಕಾದ ರೀತಿ ರೆಡಿ ಮಾಡುತ್ತಿದ್ದ.

2017ರ ಆರ್ ಟಿ ನಗರ ಮರ್ಡರ್ ಕೇಸ್​ನ ಆರೋಪಿ ಜುನೈದ್​ ಇದೇ ನಾಸಿರ್ ನ ಉಗ್ರ ಸಂಘಟನೆಗೆ ಎಂಟ್ರಿ ಕೊಟ್ಟು,
ನಾಸೀರ್ ಜೊತೆ ಸಂಪರ್ಕದಲ್ಲಿರುತ್ತಾನೆ. ಇವರು ಜೊತೆಗೂಡಿ ಬೇಕಾದ ಸಿದ್ಧತೆ ನಡೆಸಿ ಜುನೈದ್ ನನ್ನು 
ತಯಾರು ಮಾಡಿದ ನಾಸೀರ್ ಆತನನ್ನು ವಿದೇಶಕ್ಕೆ ಕಳುಹಿಸಿದ್ದ. ಅಲ್ಲದೆ, ಜುನೈದ್ ಜೊತೆ ಮಾತ್ರ ನಾಸೀರ್
ಚರ್ಚೆ ನಡೆಸುತಿದ್ದ. ಬೇಕಾದ ಫಂಡಿಗ್, ಶಸ್ತ್ರಾಸ್ತ್ರ ಹಾಗೂ ತರಬೇತಿಗಳನ್ನು ಆತನ ಮುಖಾಂತರವೇ ಕೊಡಿಸಿದ್ದಾನೆ
ಎನ್ನಲಾಗಿದೆ. ಬಳಿಕ ಜುನೈದ್ ಮೂಲಕವೇ ಒಂದು ತಂಡವನ್ನು ರಚಿಸಿ ಆತನ ಮುಖಾಂತರವೇ ಬೆಂಗಳೂರಿನಲ್ಲೊಂದು
ದೊಡ್ಡ ವಿದ್ವಂಸಕ ಸಂಚಿಗೆ ಸ್ಕೆಚ್ ಹಾಕಿದ್ದ.

ಈ ಎಲ್ಲಾ ಮಾಹಿತಿ ಸಿಸಿಬಿ ವಿಚಾರಣೆ ವೇಳೆ ಬಯಲಾಗಿದ್ದು, ಜುನೈದ್ ಒಗ್ಗೂಡಿಸಿದ್ದ ಶಂಕಿತ ಉಗ್ರರು 
ಸಿಸಿಬಿ ಬಲೆಗೆ ಬಿದಿದ್ದಾರೆ.
 ಆದರೆ, ಸಿಕ್ಕ ಶಂಕಿತ ಉಗ್ರರಿಗೂ ಹಾಗೂ ನಾಸಿರ್​ಗೂ ಯಾವುದೇ ಸಂಪರ್ಕ
ಇರಲಿಲ್ಲ. ಸದ್ಯ ಕೇರಳ ಜೈಲಿನಲ್ಲಿರುವ ನಾಸಿರ್​ನನ್ನು ಬಾಡಿ ವಾರೆಂಟ್ ಮುಖಾಂತರ ಕರೆತರಲು ಸಿದ್ಧತೆ
ನಡೆಸಲಾಗಿದೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: [Viral News: ಮದುವೆ ಮನೆಗೆ ಏಕಾಏಕಿ ನುಗ್ಗಿದ ಆನೆಗಳ ಹಿಂಡು, ಬೈಕ್‌’ನಲ್ಲಿ ವಧು ಕೂರಿಸಿಕೊಂಡು ಮದುಮಗ ಎಸ್ಕೇಪ್ ! ](https://hosakannada.com/2023/07/20/latest-news-viral-news-group-of-elephants-burst-into-the-wedding-house/)

Advertisement
