# ಸರ್ಕಾರದಿಂದ ಎಲ್ಲಾ ನೇರ ನೇಮಕಾತಿ, ಮುಂಬಡ್ತಿಗೆ ತಡೆ

- Link: https://hosakannada.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81-2/direct-recruitment-and-promotion-job-karnataka/
- Published: 2022-11-19T07:58:05+00:00
- Author: ಕೆ. ಎಸ್. ರೂಪಾ

ರಾಜ್ಯ ಸರ್ಕಾರದಿಂದ (Karnataka Government) ಕೆಲ ದಿನಗಳ ಹಿಂದೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ
ಮೀಸಲಾತಿಯನ್ನು ಹೆಚ್ಚಿಸಲಾಗಿತ್ತು. ಈ ಮೀಸಲಾತಿ ಹೆಚ್ಚಳದ ಅನ್ವಯ ನೇರನೇಮಕಾತಿ, ಮುಂಬಡ್ತಿಯಲ್ಲಿ 
ಅವಕಾಶ ನೀಡೋ ಸಲುವಾಗಿ, ಈಗ ಎಲ್ಲಾ ನೇರ ನೇಮಕಾತಿ, ಮುಂಬಡ್ತಿಗೆ ( Direct Recruitment, Promotion)
ತಡೆ ನೀಡಲಾಗಿದೆ.

Sponsored

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ (Karnataka Chief Secretory Vandita Sharma)
ಅವರು ಹೊರಡಿಸಿರುವಂತ ಟಿಪ್ಪಣಿಯಲ್ಲಿ ದಿನಾಂಕ 23-10- 2022ರಂದು ಕರ್ನಾಟಕ ಅನುಸೂಚಿತ ಜಾತಿ, ಪಂಗಡಗಳಿಗೆ
ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ(
Jobs ) ಮೀಸಲಾತಿ ಸಂಬಂಧ ಆಧ್ಯಾದೇಶವನ್ನು ದಿನಾಂಕ 01-11-2022ರಿಂದ ಜಾರಿಗೆ ಬರುವಂತೆ ಹೊರಡಿಸಲಾಗಿದೆ
ಎಂದಿದ್ದಾರೆ.

Advertisement

Advertisement

ಈ ಆದೇಶದಂತೆ ನೇರ ನೇಮಕಾತಿ ಅಥವಾ ಪದೋನ್ನತಿಯಲ್ಲಿ ಅನುಸೂಚಿತ ಜಾತಿ, ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ
ಹೆಚ್ಚಿಸಲಾಗಿರುವ ಮೀಸಲಾತಿಯನ್ನು ಜಾರಿಗೊಳಿಸಲು ರೋಸ್ಟರ್ ಬಿಂದುಗಳನ್ನು ಗುರುತಿಸುವ ಪ್ರಕ್ರಿಯೆ 
ಚಾಲ್ತಿಯಲ್ಲಿದೆ ಎಂದು ತಿಳಿಸಿದ್ದಾರೆ.

Advertisement
