# ವಿಟ್ಲ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ!! ಇಬ್ಬರು ಹೆಂಡಿರ ಗಂಡ, ಸರ್ಕಾರಿ ವೈದ್ಯನ ಮೇಲೆ ದಾಖಲಾಯಿತು ಪೋಕ್ಸೋ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/vitla-news-3/
- Published: 2022-07-11T14:55:19+00:00
- Author: ಹೊಸಕನ್ನಡ ನ್ಯೂಸ್

ವಿಟ್ಲ:ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವೊಂದು ಕೇಳಿ ಬಂದಿದ್ದು, ಬಾಲಕಿಯ
ದೂರಿನ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ವೈದ್ಯನೋರ್ವನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ.

Sponsored

ಆರೋಪಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯ, ಮಾಣಿ ಮೂಲದ ಅನುಷ್ ನಾಯ್ಕ್ ಎಂದು ಗುರುತಿಸಲಾಗಿದ್ದು,
ಈತ 14 ವರ್ಷದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಲಾಗಿದೆ.

Advertisement

Advertisement

ಆರೋಪಿತ ವೈದ್ಯ ಒಟ್ಟು ಎರಡು ವಿವಾಹವಾಗಿದ್ದು, ಮೊದಲ ಪತ್ನಿಯಿಂದ ದೂರವಾಗಿದ್ದಾನೆ ಎನ್ನಲಾಗಿದೆ. 
ಅದಲ್ಲದೇ ಈತನ ವಿರುದ್ಧ ಈ ಮೊದಲೂ ಇಂತಹ ಆರೋಪಗಳು ಕೇಳಿ ಬಂದಿದ್ದು,ವೈದ್ಯೋ ನಾರಾಯಣ ಹರಿ ಎನ್ನುವ 
ಪದಕ್ಕೆ ನಾಲಾಯಕ್ ಆಗಿರುವ ಈತನ ನಿಜಬಣ್ಣ ಬಯಲಾಗುತ್ತಿದ್ದಂತೆ ಪೋಕ್ಸೋ ಪ್ರಕರಣ ದಾಖಲಾಗಿದೆ.

Advertisement
