# ವಿಟ್ಲ : ಜೋಕಾಲಿ ಆಡಲೆಂದು ಹೋದ ಬಾಲಕಿ, ಹಗ್ಗ ಕುತ್ತಿಗೆಗೆ ಸಿಲುಕಿ ದಾರುಣ ಸಾವು

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/vitla-jokali-school-girl-death/
- Published: 2022-08-08T20:59:39+00:00
- Author: ಕೆ. ಎಸ್. ರೂಪಾ

ವಿಟ್ಲ: ಹೆತ್ತವರು ಮಕ್ಕಳು ಆಟ ಆಡುವಾಗ ಎಷ್ಟೇ ಗಮನ ಹರಿಸಿದರೂ ಸಾಕಾಗಲ್ಲ. ಇದಕ್ಕೆ ಈ ಘಟನೆಯೇ ಸಾಕ್ಷಿ
ಎನ್ನಬಹುದು. ಹೌದು ಜೋಕಾಲಿ ಆಡಲು ಹೋದ ಆರನೇ ತರಗತಿಯ ಬಾಲಕಿಯೋರ್ವಳ ಕುತ್ತಿಗೆಗೆ ಹಗ್ಗ ಸಿಲುಕಿ ದಾರುಣವಾಗಿ
ಮೃತಪಟ್ಟ ಘಟನೆಯೊಂದು ನಡೆದಿದೆ.

Sponsored

ಮೃತ ಬಾಲಕಿಯನ್ನು ಬಾಬನಕಟ್ಟೆ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಲಿಖಿತ ( 11ವರ್ಷ) ಎಂದು ಗುರುತಿಸಲಾಗಿದೆ.

Advertisement

Advertisement

ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವನ್ನಪ್ಪಿದ ಘಟನೆ ಅನಂತಾಡಿಯಲ್ಲಿ ನಡೆದಿದೆ.
ಮನೆಯಲ್ಲಿ
ಆಟವಾಡುತ್ತಿದ್ದ ಸಂದರ್ಭದಲ್ಲಿ ಜೋಕಾಲಿಗೆ ಕಟ್ಟಿದ್ದ ಹಗ್ಗ ಸಿಲುಕಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು
ವರದಿಯಾಗಿದೆ.

ಮೃತ ಬಾಲಕಿ ತಂದೆ-ತಾಯಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ತೆರಳಿ
ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
