# ಉಪ್ಪಿನಂಗಡಿ : ಯಾರ ಮಾತೂ ಲೆಕ್ಕಿಸದೆ ಹಿಜಾಬ್ ಧರಿಸಿ ಕ್ಲಾಸ್ ಗೆ ಬಂದ ವಿದ್ಯಾರ್ಥಿನಿ | ಅಮಾನತು ಆದೇಶ ಹೊರಡಿಸಿದ ಪ್ರಾಂಶುಪಾಲರು

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/uppinangady-dismiss-student/
- Published: 2022-06-04T11:50:12+00:00
- Author: ಹೊಸಕನ್ನಡ ನ್ಯೂಸ್

ಉಪ್ಪಿನಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಿಜಾಬ್ ಧರಿಸಿ ತರಗತಿಗೆ ಆಗಮಿಸಿದ್ದ
ವಿದ್ಯಾರ್ಥಿನಿಯೊಬ್ಬಳನ್ನು ಅಮಾನತು ಗೊಳಿಸಲಾಗಿದೆ.

Sponsored

ಶುಕ್ರವಾರ ತರಗತಿಯಲ್ಲಿ ಹಿಜಾಬ್ ಧಾರಣೆಯನ್ನು ಪ್ರತಿಭಟಿಸಿ ತರಗತಿ ಬಹಿಷ್ಕರಿಸಲಾಗಿತ್ತು. ಈ ಮಧ್ಯೆ
ತರಗತಿಯೊಳಗೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯನ್ನು ಪ್ರಾಂಶುಪಾಲರು ವಾರದ ಮಟ್ಟಿಗೆ ಅಮಾನತುಗೊಳಿಸಿದ್ದಾರೆ.

Advertisement

Advertisement

ಈ ಬಗ್ಗೆ ಶುಕ್ರವಾರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಿಡಿಸಿ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಮಾಡಲಾಗಿದೆ.
ಕಾಲೇಜು ಆವರಣದಲ್ಲಿ ಕಾಲೇಜು ಸಮವಸ್ತ್ರಕ್ಕೆ ಹೊರತಾದ ಬಟ್ಟೆ ತೊಡುವಂತಿಲ್ಲ. ಈ ನಿಯಮವನ್ನು ಉಲ್ಲಂಘಿಸುವ
ವಿದ್ಯಾರ್ಥಿಗಳನ್ನು ತತ್‌ಕ್ಷಣ ಅಮಾನತುಗೊಳಿಸಬೇಕು. ಬಳಿಕ ಮುಚ್ಚಳಿಕೆ ಬರೆಸಿಕೊಂಡು ಕಲಿಕೆಗೆ ಅವಕಾಶ
ಕಲ್ಪಿಸಬೇಕು. ಮುಚ್ಚಳಿಕೆಯ ಹೊರತಾಗಿಯೂ ನಿಯಮ ಉಲ್ಲಂಘಿಸುವ ಕೃತ್ಯವೆಸಗಿದರೆ ನಿರ್ದಾಕ್ಷಿಣ್ಯವಾಗಿ
ಕಾಲೇಜಿನಿಂದ ಡಿಬಾರ್ ಮಾಡಬೇಕೆಂದು ನಿರ್ಣಯ ಕೈಗೊಂಡು ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶನ
ನೀಡಲಾಯಿತು.

Advertisement
