# ಉಪ್ಪಿನಂಗಡಿ : ಮನೆಯಿಂದ ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/uppinangady-and-missing-case/
- Published: 2022-06-06T09:33:11+00:00
- Author: Praveen Chennavara

ಉಪ್ಪಿನಂಗಡಿ: ಮನೆಯಿ೦ದ ಕೆಲಸಕ್ಕೆಂದು ತೆರಳಿದ ಯುವಕನೋರ್ವ ನಾಪತ್ತೆಯಾದ ಬಗ್ಗೆ ಉಪ್ಪಿನಂಗಡಿ ಪೊಲೀಸ್
ಠಾಣೆಯಲ್ಲಿ ದೂರು ದಾಖಲಾಗಿದೆ.

Sponsored

ಗೋಳಿತೊಟ್ಟು ಗ್ರಾಮದ ಅಂಬೂಡೇಲು ನಿವಾಸಿ ವರ್ಗೀಸ್ (29) ನಾಪತ್ತೆಯಾದ ವ್ಯಕ್ತಿ. ಈತ ಮಂಗಳೂರಿನ ಖಾಸಗಿ
ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕನಾಗಿದ್ದು, ಕಳೆದ ಮೇ 31ರಂದು ಮನೆಯಿಂದ ಹೊರಟಾತ ಈ ತನಕ ಮನೆಗೆ ಬಾರದೇ
ನಾಪತ್ತೆಯಾಗಿದ್ದಾನೆ ಎಂದು ಈತನ ಸಹೋದರ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ.

Advertisement

Advertisement

ಈತನ ಪತ್ತೆಯಾದಲ್ಲಿ ಉಪ್ಪಿನ೦ಗಡಿ ಠಾಣೆ (08251 251055)ಯನ್ನು ಸಂಪರ್ಕಿಸುವಂತೆ ಪೊಲೀಸ್‌ ಪ್ರಕಟನೆ
ತಿಳಿಸಿದೆ.

Advertisement
