# ಸುರತ್ಕಲ್ : ಎನ್ ಐಟಿಕೆ ಬೀಚ್ ನಲ್ಲಿ ಅಕ್ಕ, ತಂಗಿಯರು ಸಮುದ್ರ ಪಾಲು!

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/surathkal-nitk-death/
- Published: 2022-04-10T14:03:24+00:00
- Author: ಹೊಸಕನ್ನಡ ನ್ಯೂಸ್

ಸುರತ್ಕಲ್ : ಸಮುದ್ರದಲ್ಲಿ ಆಡುತ್ತಿದ್ದಾಗ ಅಲೆಗಳ ಸೆಳೆತಕ್ಕೆ ಅಕ್ಕ ತಂಗಿಯರು ನೀರುಪಾಲಾದ ಘಟನೆಯೊಂದು
ಸುರತ್ಕಲ್ ಬೀಚ್ ನಲ್ಲಿ ನಡೆದಿದೆ.

Sponsored

ಶ್ರಾದ್ಧ ಕಾರ್ಯಕ್ಕೆಂದು ಸಮುದ್ರ ತೀರಕ್ಕೆ ಬಂದಿದ್ದಾಗ ಈ ದುರದೃಷ್ಟಕರ ಘಟನೆ ನಡೆದಿದೆ.

Advertisement

Advertisement

ಮೃತರನ್ನು ಮಂಗಳೂರು ಶಕ್ತಿನಗರ ನಿವಾಸಿಗಳಾದ ವೈಷ್ಣವಿ(21) ಮತ್ತು ತ್ರಿಶಾ(13) ಎಂದು ಗುರುತಿಸಲಾಗಿದೆ.
ಇವರು ಪೊಲೀಸ್ ಸಿಬಂದಿಯ ಪುತ್ರಿಯರು ಎನ್ನುವ ಮಾಹಿತಿ ಲಭಿಸಿದೆ.

![](https://hosakannada.com/wp-content/uploads/2022/04/vijay-karnataka-14.jpg)

ಇವರು ಇತ್ತೀಚೆಗೆ ಮೃತಪಟ್ಟ ತಮ್ಮ ಮಾವನ ತಿಥಿ ಕಾರ್ಯದ ನಿಮಿತ್ತ ಪಿಂಡ ಪ್ರದಾನ ಕಾರ್ಯಕ್ರಮದಲ್ಲಿ 
ಭಾಗವಹಿಸಲು ಕುಟುಂಬಸ್ಥರ ಜೊತೆಗೆ ಎನ್‌ಐಟಿಕೆ ಬೀಚ್ ಗೆ ಆಗಮಿಸಿದ್ದರು. ಇದೇ ಸಂಧರ್ಭ ವೆಂಕಟೇಶ್ ಎಂಬವರು
ವೈಷ್ಣವಿ ಮತ್ತು ತ್ರಿಶಾ ಜೊತೆ ಸಮುದ್ರದಲ್ಲಿ ಆಟವಾಡಲು ಇಳಿದಿದ್ದು ಈ ವೇಳೆ ದುರ್ಘಟನೆ ಸಂಭವಿಸಿದೆ.

ಅಲೆಗಳ ಅಬ್ಬರಕ್ಕೆ ಸಿಲುಕಿದ ಮೂವರನ್ನು ಸ್ಥಳೀಯ ಈಜುಗಾರರು ಮತ್ತು ಸ್ಥಳದಲ್ಲಿದ್ದ ಸುರತ್ಕಲ್ ಪೊಲೀಸ್
ಠಾಣೆಯ ಹೋಂ ಗಾರ್ಡ್ ಪ್ರಶಾಂತ್ ಮೇಲೆತ್ತಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ವೈಷ್ಣವಿ 
ಮತ್ತು ತ್ರಿಶಾ ಕೊನೆಯುಸಿರೆಳೆದಿದ್ದಾರೆ. ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement
