# ಸುಳ್ಯ: ಹಾಸ್ಟೆಲ್ ನಲ್ಲೇ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ!! ಸಾವಿನ ಸುತ್ತ ಅನುಮಾನ-ಪೊಲೀಸರ ತನಿಖೆ!!

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/sullia-student-suicide/
- Published: 2022-12-27T06:23:49+00:00
- Author: ಕೆ. ಎಸ್. ರೂಪಾ

ಸುಳ್ಯ: ಇಲ್ಲಿನ ಕುರುಂಜಿಬಾಗ್ ಬಳಿಯಲ್ಲಿರುವ ಹಾಸ್ಟೆಲ್ ಒಂದರಲ್ಲಿ ತಂಗಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು
ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಬಗ್ಗೆ ವರದಿಯಾಗಿದೆ.

Sponsored

ಮೃತ ವಿದ್ಯಾರ್ಥಿನಿಯನ್ನು ಸುಳ್ಯದ ಶಾರದಾ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ
ಬೆಂಗಳೂರು ರಾಮನಾಥ ಪುರ, ಕಾರಮಂಗಲ ತಾಲೂಕಿನ ಮಾರ್ಲಮಂಗಲ ನಿವಾಸಿ ಪುರುಷೋತ್ತಮ್ ಎಂಬವರ ಪುತ್ರಿ ಸೋನಿಯಾ(
18) ಎಂದು ಗುರುತಿಸಲಾಗಿದೆ.

Advertisement

Advertisement

ಎಂದಿನಂತೆ ಇಂದು ಇತರ ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳಿದ್ದು ಸೋನಿಯಾ ರೂಮಿನಲ್ಲೇ ಉಳಿದುಕೊಂಡಿದ್ದಳು
ಎನ್ನಲಾಗಿದೆ. ಮಧ್ಯಾಹ್ನ ವೇಳೆಗೆ ಇನ್ನೊರ್ವ ವಿದ್ಯಾರ್ಥಿನಿ ಊಟದ ತಟ್ಟೆಗಾಗಿ ಅತ್ತ ಬಂದಿದ್ದು, ರೂಮಿನ
ಬಾಗಿಲು ಹಾಕಿದ್ದ ಹಿನ್ನೆಲೆಯಲ್ಲಿ ಬಾಗಿಲು ಬಡಿದಾಗ ಯಾವುದೇ ಸ್ಪಂದನೆ ಇರದ ಕಾರಣ ವಾಪಾಸ್ಸಾಗಿದ್ದಳು.

ಸಂಜೆ ವೇಳೆಗೆ ತರಗತಿ ಮುಗಿಸಿ ಹಿಂದಿರುಗಿದಾಗಲೂ ಬಾಗಿಲು ತೆರೆಯದ ಕಾರಣ ಸ್ಥಳೀಯರಿಗೆ ವಿಷಯ ತಿಳಿಸಿದ್ದು,
ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,
ಆತ್ಮಹತ್ಯೆ ನಡೆಸಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಹಲವು ಆಯಾಮಗಳಲ್ಲಿ ತನಿಖೆ
ಮುಂದುವರಿದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Advertisement
