# ಮಂಗಳೂರು: ಗುಟ್ಕಾ ಜಗಿದ ಚಾಲಕರಿಗೆ 5,000/- ದಂಡ ಜಡಿದ ಆರ್ ಟಿಒ ಅಧಿಕಾರಿಗಳು!

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/rto-and-fine-at-bijai/
- Published: 2022-04-29T08:41:00+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ಗುಟ್ಕಾ ಜಗಿಯುತ್ತ ಬಸ್ ಚಾಲನೆ ಮಾಡಿದ ಬಸ್ ಚಾಲಕರಿಗೆ ಮಂಗಳೂರು ಆರ್‌ಟಿಒ ಅಧಿಕಾರಿಗಳು
ದಂಡ ವಿಧಿಸಿ ಶಾಕ್ ಕೊಟ್ಟಿದ್ದಾರೆ.

Sponsored

ಈ ಘಟನೆ ರಾತ್ರಿ ಬಿಜೈ ಬಳಿ ನಡೆದಿದೆ. ರಾತ್ರಿ ದಾಖಲೆ ತಪಾಸಣೆ ಸಂದರ್ಭ 2 ಬಸ್‌ಗಳ ಚಾಲಕರು ಗುಟ್ಕಾ
ಜಗಿಯುತ್ತ ಅಧಿಕಾರಿಗಳ ಮುಂದೆ ಬಂದರು. ಇದನ್ನು ಗಮನಿಸಿದ ಆರ್‌ಟಿಒ ಅಧಿಕಾರಿಗಳು ಇಬ್ಬರೂ ಚಾಲಕರಿಗೂ
ತಲಾ 5,000 ರೂ. ದಂಡ ವಿಧಿಸಿದ್ದಾರೆ.

Advertisement

Advertisement

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಟಿಒ ಆರ್.ಎಂ. ವರ್ಣೇಕರ್, “ಮದ್ಯ ಸೇವಿಸಿ ವಾಹನ ಚಲಾಯಿಸುವವರ 
ವಿರುದ್ಧ ಮಾತ್ರವಲ್ಲದೆ ಯಾವುದೇ ರೀತಿಯ ಅಮಲು ಪದಾರ್ಥಗಳನ್ನು ಸೇವಿಸಿ ಚಲಾಯಿಸುವವರ ವಿರುದ್ಧ ಕೂಡ
ಪ್ರಕರಣ ದಾಖಲಿಸಿ, ದಂಡ ವಿಧಿಸಲು ಅವಕಾಶವಿದೆ. ಅದರಂತೆ ದಂಡ ವಿಧಿಸಲಾಗಿದೆ’ ಎಂದು ತಿಳಿಸಿದ್ದಾರೆ.

Advertisement
