# ಬೆಳ್ತಂಗಡಿ : ಗೃಹಿಣಿಯ ಮಾನಭಂಗಕ್ಕೆ ಯತ್ನ | ಕೊಲೆಬೆದರಿಕೆಯೊಡ್ಡಿ ಪರಾರಿಯಾದ ಯುವಕ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/rape-attempt-on-women-belthangady/
- Published: 2022-02-23T07:45:09+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ : ಮನೆ ಸಮೀಪ ಗುಡ್ಡದಲ್ಲಿ ಕಟ್ಟಿಗೆ ಕಡಿಯುವಾಗ ಅಲ್ಲಿಗೆ ಬಂದ ಯುವಕನೊಬ್ಬ ಕತ್ತಿ ಕೇಳುವ
ನೆಪದಲ್ಲಿ ಗೃಹಿಣಿಯೊಬ್ಬರ ಮಾನಭಂಗಕ್ಕೆ ಯತ್ನಿಸಿದ ಘಟನೆಯೊಂದು ನಾವೂರು ಗ್ರಾಮದಲ್ಲಿ ನಡೆದಿದೆ.

Sponsored

ಫೆ.22 ರಂದು ಸಂಜೆ 4 ಗಂಟೆ ವೇಳೆಗೆ ತನ್ನ ಮನೆಯ ಸಮೀಪದ ಗುಡ್ಡಕ್ಕೆ ಕಟ್ಟಿಗೆ ತರಲೆಂದು ಹೋಗಿದ್ದ 
ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಇಂದಬೆಟ್ಟು ಗ್ರಾಮದ ಲಿಂಗತ್ಯಾರ್ ಮನೆ ನಿವಾಸಿ ಸಂತೋಷ್(
25) ಎಂಬಾತನೆಂದು ಗುರುತಿಸಲಾಗಿದೆ.

Advertisement

Advertisement

ಮಹಿಳೆಯನ್ನು ಬಲವಂತವಾಗಿ ಹಿಡಿದು ನೆಲಕ್ಕೆ ಕೆಡವಿ ಮೈಮೇಲೆ ಬೀಳಲು ಯತ್ನಿಸಿ ಆಕೆ ಕಾಲಿನಿಂದ ತುಳಿದಾಗ
ಆತ ದೂರಕ್ಕೆ ಬಿದ್ದದ್ದನ್ನು ನೋಡಿ ಆಕೆಯ ಪತಿ ಸ್ಥಳಕ್ಕೆ ಬಂದಾಗ ಈ ವಿಷಯ ಯಾರಲ್ಲಾದರೂ ಹೇಳಿದರೆ ಕೊಲ್ಲೊದಾಗಿ
ಬೆದರಿಕೆ ಹಾಕಿದ್ದಾನೆ ಎಂದು ಹೇಳಿ ಓಡಿಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Advertisement
