# Puttur : ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ ಆ ಫೋಟೋ : ಠಾಣೆಗೆ ದೂರು

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/puttur-that-photo-viral-on-social-media/
- Published: 2023-04-06T10:37:42+00:00
- Author: ಕೆ. ಎಸ್. ರೂಪಾ

Puttur : ಪುತ್ತೂರು : ಮಹಿಳೆಯೊಬ್ಬರೊಂದಿಗೆ ಜನ ಪ್ರತಿನಿಧಿಯೊಬ್ಬರು ಜತೆಗಿರುವ ಫೋಟೊವೊಂದು ಸಾಮಾಜಿಕ
ಜಾಲತಾಣದಲ್ಲಿ ಹರಿದಾಡುತ್ತಿದೆ.

Sponsored

ಈ ಕುರಿತು ಸಂತ್ರಸ್ತ ಮಹಿಳೆಯು ನ್ಯಾಯ ಯಾಚಿಸಿ ಉಪ್ಪಿನಂಗಡಿ (puttur – Uppinangadi) ಪೊಲೀಸ್ 
ಠಾಣೆಗೆ ದೂರು ನೀಡಿದ್ದಾರೆ.

Advertisement

Advertisement

ನೆಕ್ಕಿಲಾಡಿ ಸಮೀಪದ ಸಂತ್ರಸ್ತ ಮಹಿಳೆ ಎ.5 ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ
ಎಂದು ತಿಳಿದು ಬಂದಿದೆ.

ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಪೋಟೊ ಅಸಲಿ/ ಎಡಿಟೆಡ್ ಸೇರಿದಂತೆ
ವಿವಿಧ ಆಯಾಮಗಳಲ್ಲಿ ಪೊಲೀಸ್ ತನಿಖೆ ನಡೆಯಲಿದೆ.

ವಿಧಾನ ಸಭಾ ಚುನಾವಣೆಯ ಹೊಸ್ತಿಲಲ್ಲಿ ಫೋಟೊಗಳು ಪರಿಣಾಮ ಬೀರುವ ಸಾಧ್ಯತೆಯಿದೆಯೆಂದು ರಾಜಕೀಯ ವಲಯದಲ್ಲಿ
ಚರ್ಚೆಯಾಗುತ್ತಿದೆ.

Advertisement
