# Bantwala :ಮೋದಿ ಕಾರ್ಯಕ್ರಮದಲ್ಲಿ ಗಲಭೆ ಸೃಷ್ಟಿಸಲು ಹುನ್ನಾರ, ನಾಲ್ವರ ಮನೆ ಮೇಲೆ ಎನ್‌ಐಎ ದಿಢೀರ್‌ ದಾಳಿ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/pm-modi-program-nia-team-raids-in-bantwal/
- Published: 2023-03-06T10:01:50+00:00
- Author: ಕೆ. ಎಸ್. ರೂಪಾ

PM Modi Program: ನಿರಂತವಾಗಿ ಹಣ ರವಾನೆ ಮಾಡಿ ಬ್ಯಾಂಕ್ ಖಾತೆಗಳಲ್ಲಿ ವ್ಯವಹಾರ ನಡೆಸುತ್ತಿದ್ದ
ನಾಲ್ವರು ಆರೋಪಿಗಳ ಮೇಲೆ ಅನುಮಾನದ ಮೇರೆಗೆ ಹದ್ದಿನ ಕಣ್ಣಿಟ್ಟಿದ ಎನ್​ಐಎ( NIA) ತಂಡಕ್ಕೆ ಸ್ಫೋಟಕ
ಮಾಹಿತಿ ಲಭ್ಯವಾಗಿದೆ.

Sponsored

ಮಂಗಳೂರನ್ನು ಭಯೋತ್ಪಾದಕರು ತಮ್ಮ ಕಾರ್ಯಾಚರಣೆಯ ಅಡಗುತಾಣ ಮಾಡಿಕೊಳ್ಳುತ್ತಿರುವಂತೆ ತೋರುತ್ತಿದೆ.
ಈಗಾಗಲೇ, ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ನಡೆಸಿ ಉಗ್ರ ಚಟುವಟಿಕೆಗಳಲ್ಲಿ
ತೊಡಗಿರುವುದು ಕಂಡುಬರುತ್ತಿದೆ. ಈ ನಡುವೆ ಬಂಟ್ವಾಳದ (Bantwal, Mangaluru) ನಾಲ್ವರ ಮನೆ ಮೇಲೆ
ಎನ್​ಐಎ ದಾಳಿ (NIA Raid) ನಡೆಸಿದ್ದು, ಬಿಹಾರದಲ್ಲಿ (Bihar) ಪ್ರಧಾನಿ ನರೇಂದ್ರ ಮೋದಿ (PM Narendra
Modi) ಕಾರ್ಯಕ್ರಮದ(PM Modi Program) ವೇಳೆ ಗಲಾಟೆ ಸೃಷ್ಟಿ ಮಾಡಲು ಆರ್ಥಿಕ ಹಣಕಾಸಿನ ನೆರವು (
Finance Help) ನೀಡಿದ ಆರೋಪದ ಅಡಿಯಲ್ಲಿ ರವಿವಾರ ರಾತ್ರಿ ವೇಳೆ ಈ ದಾಳಿ ನಡೆದಿದೆ.

Advertisement

Advertisement

ಆರೋಪಿಗಳನ್ನು ನಂದಾವರ (Nandavara) ನಿವಾಸಿಗಳಾದ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಪಾಜ್ ನವಾಜ್
ಮತ್ತು ನೌಫಲ್ ಎನ್ನಲಾಗಿದ್ದು, ಈ ನಾಲ್ವರು ಆರೋಪಿಗಳ ಮನೆ ಮೇಲೆ ಎನ್​ಐಎ ಅಧಿಕಾರಿಗಳು ರಾತ್ರಿ ದಾಳಿ
ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
 ಸದ್ಯ, ಎನ್​ಐಎ ಅಧಿಕಾರಿಗಳು
ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಿದ್ದು, ಹೆಚ್ಚಿನ ತನಿಖೆಗಾಗಿ ಬಿಹಾರಕ್ಕೆ ಕರೆದೊಯ್ಯುವ ಸಾಧ್ಯತೆ
ದಟ್ಟವಾಗಿದೆ ಎನ್ನಲಾಗಿದೆ.

Advertisement
