# ಮಂಗಳೂರು : ಮೈ ಜಿಯೋ ಆಪ್ ನಲ್ಲಿ 10ರೂ. ರೀಚಾರ್ಜ್ ಮಾಡಲು ಹೇಳಿ,  ಬಂಟ್ವಾಳದ ವೈದ್ಯರಿಂದ 1.65 ಲಕ್ಷ ದೋಚಿದ ಖದೀಮ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/online-app-fraud/
- Published: 2022-05-03T17:04:22+00:00
- Author: ಹೊಸಕನ್ನಡ ನ್ಯೂಸ್

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಕೂಡಾ ಇದ್ದಾರೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ
ನಡೆದಿದೆ. ಯಾರೋ ಅಪರಿಚಿತ ವ್ಯಕ್ತಿ ಆ್ಯಪ್ ಡೌನ್‌ಲೋಡ್ ಮಾಡುವಂತೆ ಹೇಳಿ, ಅನಂತರ ಮೊಬೈಲ್ ರೀಚಾರ್ಜ್
ಮಾಡಲು ತಿಳಿಸಿ  ಬಂಟ್ವಾಳದ ವೈದ್ಯರೋರ್ವರಿಗೆ 1,65,000 ರೂ. ಪಂಗನಾಮ ಹಾಕಿರುವ ಘಟನೆ ನಡೆದಿದೆ.

Sponsored

ಬಿ.ಸಿ. ರೋಡ್‌ನ ಕಿಡ್ಸ್ ಕೇರ್ ಸೆಂಟರ್‌ನ ವೈದ್ಯ ಡಾ. ಬಿ. ಅಶ್ವಿನ್ ಬಾಳಿಗಾ ಅವರ ಮೊಬೈಲ್ ಸಂಖ್ಯೆಗೆ
ಏಪ್ರಿಲ್ 29ರಂದು ಸಂಜೆ 5.30ಕ್ಕೆ [9348699702](https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/online-app-fraud/9348699702)
ಸಂಖ್ಯೆಯಿಂದ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಜಿಯೋ ನಂಬರ್‌ನ್ನು ಅಪ್ಡೇಟ್ ಮಾಡಲು ಹೇಳಿ, ಇದಕ್ಕಾಗಿ
ಗೂಗಲ್ ಪ್ಲೇ ಸ್ಟೋರ್‌ನಿಂದ ಕ್ವಿಕ್ ಈಝೀ ಪೇ ಆಪ್‌ನ್ನು ಡೌನೋಡ್ ಮಾಡಿಸಿ ನಂತರ ವೈದ್ಯರ ಮೊಬೈಲ್ ನಲ್ಲಿ
ಮೈ ಜಿಯೋ ಆಪ್‌ನಲ್ಲಿ 10 ರೂ. ರಿಚಾರ್ಜ್ ಮಾಡುವಂತೆ ಹೇಳಿದ್ದಾನೆ. ಆತನ ಮಾತನ್ನು ನಂಬಿದ ವೈದ್ಯರು
ಎಚ್‌ಡಿಎಫ್‌ಸಿ ಬ್ಯಾಂಕ್‌ ಖಾತಾ ಸಂಖ್ಯೆಯಿಂದ ಡೆಬಿಟ್ ಕಾರ್ಡ್ ವಿವರಗಳನ್ನು ಮೈ ಜಿಯೋ ಆಪ್‌ನಲ್ಲಿ
ಹಾಕಿ 10 ರೂ, ರೀಚಾರ್ಜ್ ಮಾಡಿದ್ದಾರೆ. ಕೂಡಲೇ ವೈದ್ಯರಿಗೆ ತಿಳಿಯದಂತೆ ಅವರ ಖಾತೆಯಿಂದ ಮೂರು ಬಾರಿ
ತಲಾ 10 ಸಾವಿರ ರೂ. ಮತ್ತು ಮೂರು ಬಾರಿ ತಲಾ 45 ಸಾವಿರ ರೂ.ಗಳಂತೆ ಒಟ್ಟು 1,65,000 ರೂ. ಅಪರಿಚಿತನ
ಖಾತೆಗೆ ವರ್ಗಾವಣೆಯಾಗಿದೆ.

Advertisement

Advertisement

ಇದೀಗ ಈ ವಂಚನೆ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement
