# ಮಂಗಳೂರು : 78 ವರ್ಷದ ವೃದ್ಧನಿಂದ ಹಸುವಿನ ಜೊತೆ ಲೈಂಗಿಕ ಕ್ರಿಯೆ, ದೂರು ನೀಡಿದ ನೆರೆಮನೆಯಾತ! ಸತ್ಯಾಸತ್ಯತೆ ಏನು ?

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/neighbour-man-files-wrong-fir/
- Published: 2022-05-08T21:15:39+00:00
- Author: ಹೊಸಕನ್ನಡ ನ್ಯೂಸ್

ಮೂಡುಬಿದ್ರೆ : ಪಕ್ಕದ್ಮನೆಯ ಮುದುಕನೊಬ್ಬ
ಹಸುವಿನ ಜೊತೆಗೆ ಲೈಂಗಿಕ ಸಂಪರ್ಕ ಮಾಡಿದ್ದಾನೆಂದು ಆತನ
ನೆರೆಮನೆಯ ನಿವಾಸಿಯೋರ್ವ ಆರೋಪಿಸಿ ಠಾಣೆಗೆ ದೂರು ನೀಡಿದ್ದಾರೆ.

Sponsored

ಬೆಳುವಾಯಿ ಗ್ರಾಮದ ಮುರ್ಕತ್ ಪಲ್ಕೆ ನಿವಾಸಿ
ರೊನಾಲ್ಡ್ ಲೋಬೊ ದೂರು ನೀಡಿದ ವ್ಯಕ್ತಿ ಹಾಗೂ ಆರೋಪಿ
ವಲೇರಿಯನ್ ಡಿಸೋಜಾ ಮೇಲೆ ಈ ಪ್ರಕರಣ ದಾಖಲಾಗಿದೆ.

Advertisement

Advertisement

ವಲೇರಿಯನ್ ಡಿಸೋಜ(78) ಮತ್ತು ರೊನಾಲ್ಡ್ ಲೋಬೋ(54) ಅಕ್ಕಪಕ್ಕದ ನಿವಾಸಿಗಳು. ಇವರಿಬ್ಬರ ಮಧ್ಯೆ ಹಲವು
ವರ್ಷಗಳಿಂದ ಜಾಗದ ತಕರಾರು ಇದ್ದು, ಇದು ಕೋರ್ಟಿನಲ್ಲಿದೆ.

ಇತ್ತೀಚೆಗೆ ಸಿಪ್ರಿಯನ್ ಡಿಸೋಜ ಎಂಬವರಿಗೆ ಸೇರಿದ ಜಮೀನಿನಲ್ಲಿ ಮೇಯುತ್ತಿದ್ದ ಹಸುವನ್ನು ಹಿಡಿದೊಯ್ದು
ವಲೇರಿಯನ್ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಆರೋಪಿಸಿ ರೊನಾಲ್ಡ್ 
ಲೋಬೊ ಪೊಲೀಸರಿಗೆ ದೂರು ನೀಡಿದ್ದಾರೆ. ವಲೇರಿಯನ್ 78 ವರ್ಷದ ಮುದುಕನಾಗಿದ್ದು, ಈ ವಯಸ್ಸಿನಲ್ಲಿ ಇಂಥ
ಕೃತ್ಯ ಮಾಡಲು ಸಾಧ್ಯವೇ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ದೂರುದಾರ ಉದ್ದೇಶಪೂರ್ವಕವಾಗಿ ಈ 
ರೀತಿ ದೂರು ಕೊಟ್ಟಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ನೈಜ ವಿಚಾರದ ಕುರಿತು ಪೊಲೀಸರು ತನಿಖೆ
ನಡೆಸುತ್ತಿದ್ದಾರೆ.

> [ಇವರೆಂಥಾ ಕ್ರೂರಿಗಳು- ಸಮಾಧಿ ಅಗೆದು ಅಪ್ರಾಪ್ತೆಯ ಶವದೊಂದಿಗೆ ಅತ್ಯಾಚಾರ, ಮರುದಿನ ಸ್ಮಶಾನ ತಲುಪಿದ ಮನೆಮಂದಿಗೆ ಶಾಕ್ !](https://hosakannada.com/news/sex-with-deadbody-shocking-news/)

Advertisement
