# ಮಂಗಳೂರು : ಮಟಮಟ ಮಧ್ಯಾಹ್ನ ನಡು ರಸ್ತೆಯಲ್ಲಿಯೇ ಹೊತ್ತಿ ಉರಿದ ಬಸ್ ಮತ್ತು ಬೈಕ್!!!

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/mangalore-bus-and-bike-accident/
- Published: 2022-04-08T15:27:17+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು : ಅಪಘಾತ ಸಂಭವಿಸಿ ಬೆಂಕಿ ತಗುಲಿದ ಪರಿಣಾಮ ಸಿಟಿ ಬಸ್ ಹಾಗೂ ಬೈಕ್ ಹತ್ತಿ ಉರಿದ ಘಟನೆ ನಗರದ
ಹಂಪನಕಟ್ಟೆ ಬಳಿಯ ವೆನ್ಲಾಕ್ ಆಸ್ಪತ್ರೆ ಬಳಿ ಎ.8ರ ಶುಕ್ರವಾರ ಮಧ್ಯಾಹ್ನ ನಡೆದಿದೆ.

Sponsored

![](https://hosakannada.com/wp-content/uploads/2022/04/IMG-20220408-WA0042.jpg)

Advertisement

Advertisement

ಪ್ರಾಥಮಿಕ ಮಾಹಿತಿ ಪ್ರಕಾರ ಬೈಕ್ ಬಂದು ಬಸ್‌ ಡಿಕ್ಕಿ ಹೊಡೆದ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು, ಬಸ್ಸು
ಹಾಗೂ ಬೈಕ್‌ ಎರಡು ವಾಹನಕ್ಕೂ ಬೆಂಕಿ ತಗುಲಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

![](https://hosakannada.com/wp-content/uploads/2022/04/IMG_20220408_152904.jpg)

ಇನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ವ್ಯಾಪಿಸುವುದನ್ನು ತಡೆದಿದ್ದು, ಖಾಸಗಿ
ಬಸ್ ಬಹುಪಾಲು ಸುಟ್ಟು ಹೋಗಿದೆ. ಬೈಕ್ ಸಂಪೂರ್ಣವಾಗಿ ಸುಟ್ಟು ಹೋಗಿರುವುದಾಗಿ ತಿಳಿದು ಬಂದಿದೆ.ಹೆಚ್ಚಿನ
ಮಾಹಿತಿ ನಿರೀಕ್ಷಿಸಲಾಗಿದೆ.

![](https://hosakannada.com/wp-content/uploads/2022/04/IMG_20220408_152917-796x1024.
jpg)

Advertisement
