# ಮಂಗಳೂರು: ಕಾರು ಹಾಗೂ ಕಂಟೈನರ್ ನಡುವೆ ರಸ್ತೆ ಅಪಘಾತ, ಓರ್ವ ಬಲಿ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/mangalore-accident-news/
- Published: 2022-05-05T12:07:39+00:00
- Author: ನಿಶ್ಮಿತಾ ಎನ್.

ಮಂಗಳೂರು: ನಗರ ಹೊರವಲಯದ ಅಡ್ಯಾರು ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು,
ಕಂಟೈನರ್ ನಡುವೆ ಅಪಘಾತ ನಡೆದಿದೆ.

Sponsored

ಕಾರು ಚಾಲಕ ಇಬ್ರಾಹಿಂ ಮಂಜೇಶ್ವರ ಸಮೀಪದ ಕುಂಜತ್ತೂರು ನಿವಾಸಿ ಎಂದು ತಿಳಿದು ಬಂದಿದೆ.

Advertisement

Advertisement

ಕಾರಿನಲ್ಲಿ 3 ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.ಕಾರು ಚಾಲಕ ನಿದ್ದೆಯ ಮಂಪರಿನಲ್ಲಿ ಇದ್ದು ಚಾಲಕನ
ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಎದುರಿನಿಂದ ಬರುತ್ತಿದ್ದ ಕಂಟೈನರ್ ಗೆ ಡಿಕ್ಕಿಯಾದ
ಹೊಡೆತಕ್ಕೆ ಕಾರು ಚಾಲಕ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಸಂಚಾರ ದಕ್ಷಿಣ ಠಾಣೆಯ
ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement
