# ಪ್ರಯಾಣಿಕನನ್ನು ಕಾಲಲ್ಲಿ ಒದ್ದು ರಸ್ತೆಗೆ ತಳ್ಳಿದ ಕೆಎಸ್​ಆರ್​ಟಿಸಿ ಬಸ್ ನಿರ್ವಾಹಕ ಅಮಾನತು

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/ksrtc-bus-conductor-suspnded/
- Published: 2022-09-08T16:26:03+00:00
- Author: Praveen Chennavara

ಪುತ್ತೂರು: ಪಾನಮತ್ತನಾಗಿದ್ದಂತ ಪ್ರಯಾಣಿಕನೊಬ್ಬ ಕೆ ಎಸ್ .ಆರ್ .ಟಿ ಸಿ ಬಸ್ ನಲ್ಲಿ ತನ್ನೂರಿಗೆ 
ತೆರಳೋದಕ್ಕೆ ಹೋದಂತ ಸಂದರ್ಭದಲ್ಲಿ, ಆತನ ಮೇಲೆ ಹಲ್ಲೆ ನಡೆಸಿ, ಹೊರಗೆ ಕಾಲಿನಿಂದ ಒದ್ದು ನಿರ್ವಾಹಕ
ತಳ್ಳಿದ್ದರು. ಇದರಿಂದಾಗಿ ಅಂಗಾತವಾಗಿ ಬಸ್ ಡೋರಿನಿಂದ ಹೊರಗೆ ಬಿದ್ದಂತ ಪ್ರಯಾಣಿಕ ಗಾಯಗೊಂಡಿದ್ದನು.

Sponsored

ಈ ಘಟನೆಯ ಹಿನ್ನಲೆಯಲ್ಲಿ ನಿರ್ವಾಹಕನನ್ನು ಅಮಾನತುಗೊಳಿಸಿ,ಸಾರಿಗೆ ನಿಗಮ ಆದೇಶಿಸಿದೆ.

Advertisement

Advertisement

ಕಂಡಕ್ಟರ್ ಮಾತಿಗೆ ಒಪ್ಪದಂತ ಪಾನಮತ್ತ ಪ್ರಯಾಣಿಕ ಮಾತ್ರ ಬಸ್ಸಿನಿಂದ ಇಳಿದಿಲ್ಲ. ಈ ವೇಳೆಗೆ ಸಿಟ್ಟುಗೊಂಡಂತ
ನಿರ್ವಾಹಕ ಆತನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಬಸ್ಸಿನ ಡೋರಿನಿಂದ ಕಾಲಿನಿಂದ ಒದ್ದಿದ್ದಾನೆ. ಆಗ ಪಾನಮತ್ತ
ಪ್ರಯಾಣಿಕ ರಸ್ತೆಗೆ ಅಂಗಾತ ಬಿದ್ದು ಪೆಟ್ಟುಗೊಂಡಿರೋ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ವಿಷಯ ತಿಳಿದಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ, ಸಾರಿಗೆ ಬಸ್ ನಿರ್ವಾಹಕನ ನಡೆಯನ್ನು 
ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಸಂಬಂಧ ಪಟ್ಟಂತ ಅಧಿಕಾರಿಗಳು ಈ ನಡೆ ತೋರಿದಂತ ನಿರ್ವಾಹಕನ ವಿರುದ್ಧ
ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

Advertisement
