# ಕಾವು ಬುಶ್ರಾ ವಿದ್ಯಾಸಂಸ್ಥೆ ಯಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/kavu-vidya-samsthe-varshika-kreedakoota/
- Published: 2022-12-13T21:17:14+00:00
- Author: Praveen Chennavara

ಪುತ್ತೂರು : ಬುಶ್ರಾ ವಿದ್ಯಾಸಂಸ್ಥೆ ಕಾವು ಇಲ್ಲಿನ 2022-23 ನೇ ಸಾಲಿನ ವಾರ್ಷಿಕ ಕ್ರೀಡಾಕೂಟಕ್ಕೆ
ಡಿಸೆಂಬರ್ 13 ರಂದು ಚಾಲನೆ ದೊರಕಿತು . ಸಂಸ್ಥೆಯ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಹೀರಾ ಅಬ್ದುಲ್
ಖಾದರ್ ಧ್ವಜಾರೋಹಣ ಗೈದು ಮಾತನಾಡಿ ,ಕ್ರೀಡೆಯೆಂಬುದುರಲ್ಲಿ ಸೋಲು ಗೆಲುವು ಇದ್ದದ್ದೆ . ನಾವು ಸೋತರೆಂದು
ಹಿಂಜರಿಯದೆ ಸೋಲನ್ನು ಸವಾಲಾಗಿರಿಸಿ ಮುಂದೆ ಪ್ರಯತ್ನ ಪಟ್ಟರೆ ಜಯಶಾಲಿಯಾಗಿ ಉತ್ತಮ ಕ್ರೀಡಾಪಟುವಾಗಿ
ಹೊರಬರಲು ಸಾಧ್ಯವಿದೆ ಎಂದರು.

Sponsored

![](https://hosakannada.com/wp-content/uploads/2022/12/IMG-20221213-WA0050-1024x1024.
jpg)

ಬುಶ್ರಾ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬುಶ್ರಾ ಕ್ರೀಡಾ ಪ್ರಜ್ವಲನೆ ಗೈದು ಕ್ರೀಡಾಕೂಟಕ್ಕೆ
ಶುಭಹಾರೈಸಿದರು .ಸಂಪ್ಯಪೋಲಿಸ್ ಠಾಣೆಯ ಎ ಎಸೈ ಚಂದ್ರಶೇಖರ , ಸಂಪ್ಯ ಠಾಣಾ ಪೋಲಿಸ್ ಹೆಡ್ ಕಾನ್ಸ್ಟೇಬಲ್
ಬಾಲಕೃಷ್ಣ ಕೆ ಎಂ , ಪೋಲಿಸ್ ಠಾಣೆ ಯ ಕಾನ್ಸ್ಟೇಬಲ್ ಗಳಾದ ಪ್ರಕಾಶ್ , ಲೋಕೇಶ್ , ಬುಶ್ರಾ ವಿದ್ಯಾಸಂಸ್ಥೆ
ಯ ಆಡಳಿತ ಮಂಡಳಿ ನಿರ್ದೇಶಕ ಬದ್ರುದ್ದೀನ್ , ಸಂಸ್ಥೆಯ ಶಿಕ್ಷಕ – ರಕ್ಷಕ ಸಂಘದ ಕೋಶಾಧಿಕಾರಿ ಬಶೀರ್
ಕೌಡಿಚ್ಚಾರ್ , ಬುಶ್ರಾ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರಾದ ಅಮರನಾಥ ಬಿ ಪಿ , ಸಂಸ್ಥೆಯ ಉಪಮುಖ್ಯೋಪಾಧ್ಯಾಯಿನಿ
ದೀಪಿಕಾ ಮುಖ್ಯ ಅತಿಥಿಗಳಾಗಿದ್ದರು.

Advertisement

Advertisement

![](https://hosakannada.com/wp-content/uploads/2022/12/IMG-20221213-WA0052-768x1024.
jpg)

ಡಿಸೆಂಬರ್ 13ರಂದು ಚಾಲನೆ ಗೊಂಡ ಕ್ರೀಡಾಕೂಟವು ಡಿಸೆಂಬರ್ 14 ರಂದು ಸಮಾಪನ ಗೊಳ್ಳಲಿದ್ದು ,ಆ ಬಳಿಕ
ಡಿಸೆಂಬರ್ 15 ರಂದು ಸಂಸ್ಥೆಯ ಹೆತ್ತವರಿಗೆ ಹಾಗೂ ಪೋಷಕರಿಗಾಗಿ ಕ್ರೀಡಾ ಕೂಟ ವಿವಿಧ ಸ್ಪರ್ಧೆ ಗಳು
ನಡೆಯಲಿದೆ.

![](https://hosakannada.com/wp-content/uploads/2022/12/IMG-20221213-WA0051-768x1024.
jpg)

ಸಂಸ್ಥೆಯ ಮುಖ್ಯ ಗುರು ಅಮರನಾಥ ಬಿ ಪಿ ಸ್ವಾಗತಿಸಿ , ಸಂಸ್ಥೆಯ ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ದಲ್ಲಿ ಸಂಸ್ಥೆಯ ಎಲ್ಲಾ ಭೋದಕ ಹಾಗೂ ಭೋದಕೇತರ ವೃಂದದವರು ಸಹಕರಿಸಿದರು.

![](https://hosakannada.com/wp-content/uploads/2022/12/IMG-20221213-WA0053-768x1024.
jpg)

Advertisement
