# ಕಡಬ ಪ್ರಖಂಡ ವಿ.ಹಿಂ.ಪ ವತಿಯಿಂದ 80 ಅಶಕ್ತ ಗೋವುಗಳನ್ನು ಮೈಸೂರು ಗೋ ಶಾಲೆಗೆ ರವಾನೆ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/kadaba-vhp-and-cow-news/
- Published: 2022-01-17T11:33:57+00:00
- Author: Praveen Chennavara

ಕಡಬ: ಕಡಬ ಪ್ರಖಂಡ ವಿ.ಹಿಂ.ಪ.ವತಿಯಿಂದ ಕಡಬ ಭಾಗದ ಸುಮಾರು 80 ಅಶಕ್ತ ಜಾನುವಾರುಗಳ ನ್ನು ಮೈಸೂರಿನ
ಪಿಂಜರಪೂಲೆ ಗೋ ಶಾಲೆಗೆ ಜ.16 ರಂದು ರವಾನಿಸಲಾಯಿತು.

Sponsored

![](https://hosakannada.com/wp-content/uploads/2022/01/IMG-20220117-WA0023-1024x771.
jpg)

ಕಡಬದ ಸರಸ್ವತಿ ವಿದ್ಯಾಸಂಸ್ಥೆ ಯ ಆವರಣದಿಂದ ಜಾನುವಾರುಗಳನ್ನು ಐದು ಲಾರಿಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ
ಕೊಂಡೊಯ್ಯಲಾಯಿತು. ಸರಸ್ವತಿ ವಿದ್ಯಾಸಂಸ್ಥೆ ಯ ಸಂಚಾಲಕ ಮಂಕುಡೆ ವೆಂಕಟ್ರಮಣ ರಾವ್ ಚಾಲನೆ ನೀಡಿದರು.
ಕಡಬ ಪಶುವೈದ್ಯಾಧಿಕಾರಿ ಡಾ.ಅಜಿತ್ ಅವರು ಜಾನುವಾರುಗಳನ್ನು ಪರೀಕ್ಷೆ ನಡೆಸಿದರು.

Advertisement

Advertisement

![](https://hosakannada.com/wp-content/uploads/2022/01/IMG-20220117-WA0017-1024x771.
jpg)

ಈ ಸಂದರ್ಭದಲ್ಲಿ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ,
ಬಜರಂಗದಳದ ಸಾಪ್ತಾಹಿಕ ಪ್ರಮುಖ್ ತಿಲಕ್ ರೈ ಕಡಬ , ರಘುರಾಮ ನಾಯ್ಕ್ ಕಡಬ , ಜಯಂತ ಕುತ್ಯಾಡಿ , ರಕ್ಷಿತ್
ದೋಳ , ತಿರ್ಥೇಶ್ ಮೀನಾಡಿ , ಸಂತೋಷ್ ದೋಳ, ಗುರುಮೂರ್ತಿ ವಿದ್ಯಾನಗರ , ಹರ್ಷಿತ್ ವಿದ್ಯಾನಗರ , ಸಂಕೇತ್
ಹೊಸಮಠ , ಹರ್ಷಿತ್ ಗಣಾದ ಕೊಟ್ಟಿಗೆ, ಪವಿತ್ ರಾಜ್ ಹೊಸಮಠ ,
ಮಾ| ಚಿರಾಗ್ ಮೊದಲಾದವರು ಉಪಸ್ಥಿತರಿದ್ದರು.

Advertisement
