# ಕಡಬ : ಸರಕಾರಿ ಶಾಲೆಯ ಪೈಪ್ ಲೈನ್, ನಳ್ಳಿ,ಗೇಟಿಗೆ ಹಾನಿ : ದೈವದ ಮೊರೆ ಹೋದ ಶಾಲಾಭಿವೃದ್ದಿ ಸಮಿತಿ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/government-school-kadaba/
- Published: 2022-04-20T22:00:05+00:00
- Author: Praveen Chennavara

ಕಡಬ: ಕೊಯಿಲ ಗ್ರಾಮದ ಕೊಯಿಲ ಕೆ ಸಿ ಫಾರ್ಮ್ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿನ
ಕೃಷಿ ತೋಟಕ್ಕೆ ಮತ್ತು ಕುಡಿಯುವ ನೀರಿಗಾಗಿ ಅಳವಡಿಸಿದ ಪೈಪುಗಳಿಗೆ , ನಳ್ಳಿಗಳಿಗೆ, ಗೇಟಿನ ಸರಳುಗಳಿಗೆ
ಕಿಡಿಗೇಡಿಗಳು ಹಾನಿ ಮಾಡಿದ್ದಾರೆ ಎಂದು ಶಾಲಾಭಿವೃದ್ದಿ ಸಮಿತಿಯಿಂದ ಕಡಬ ಠಾಣೆಗೆ ದೂರು ನೀಡಲಾಗಿದೆ.

Sponsored

ಎರಡು ಕುಡಿಯುವ ನೀರಿನ ನಳ್ಳಿಗಳನ್ನು , ಮೂರು ಕಡೆ ಕೃಷಿ ತೋಟದ ಪೈಪುಗಳನ್ನು ಮುರಿಯಲಾಗಿದೆ. ಆವರಣಕ್ಕೆ
ಪ್ರವೇಶಿಸುವ ಮುಖ್ಯ ದ್ವಾರದ ಗೇಟಿನ ಸರಳನ್ನು ಮುರಿದಿದ್ದಾರೆ. ಮಂಗಳವಾರ ರಾತ್ರಿ ಸಮಯದಲ್ಲಿ ಕಿಡಿಗೇಡಿಗಳಿಂದ
ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಕೃಷಿ ತೋಟದ ಕೆಲಸ ಸಂಬಂದ ಬುಧವಾರ ಎಸ್ ಡಿ ಎಂ ಸಿ ಪದಾಧಿಕಾರಿಗಳು
ಶಾಲಾ ಆವರಣಕ್ಕೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಎಸ್ ಡಿ ಎಂ ಸಿ ಅಧ್ಯಕ್ಷ ವಿಶ್ವನಾಥ 
ಯಾನೆ ಶಶಿ ಕುಮಾರ್ ನೀಡಿರುವ ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Advertisement

Advertisement

ದೈವಗಳಿಗೆ ಮೊರೆ

ಈ ಕೃತ್ಯದ ವಿರುದ್ದ ಶಾಲಾಭಿವೃದ್ದಿ ಸಮಿತಿ, ಪೋಷಕರಿಂದ ದೈವಗಳಿಗೆ ಮೊರೆಯಿಟ್ಟ ಬ್ಯಾನರ್ ಶಾಲಾ ಆವರಣದಲ್ಲಿ
ಆಳವಡಿಸಲಾಗಿದೆ. ಈ ಕೃತ್ಯ ಎಸೆದವರಿಗೆ ಆತೂರು ಶ್ರೀ ದುಗಾಲಯಿ ದೈವ , ಬರಮೇಲು ಶ್ರೀ ಶಿರಾಡಿ ದೈವ,
ನೆಹರುತೋಟ ಶ್ರೀ ಕೊರಗಜ್ಜ ದೈವಕ್ಕೆ ಹರಕೆ ಇಟ್ಟಿದ್ದೇವೆ ಎಂದು ಬ್ಯಾನರ್ ನಲ್ಲಿ ಉಲ್ಲೇಖಿಸಲಾಗಿದೆ.

(ಕೃತ್ಯದ ವಿರುದ್ದ ಶಾಲಾಭಿವೃದ್ದಿ ಸಮಿತಿ, ಪೋಷಕರಿಂದ ದೈವಗಳಿಗೆ ಮೊರೆಯಿಟ್ಟ ಬ್ಯಾನರ್ ಶಾಲಾ ಆವರಣದಲ್ಲಿ
ಆಳವಡಿಸಲಾಗಿದೆ.)

Advertisement
