# Udupi: ಹುಚ್ಚಾಟ ಮಾಡಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಬೈಕ್ ಸವಾರರು: ಸ್ಥಳೀಯರಿಂದ ರಕ್ಷಣೆ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/bikers-who-went-for-a-wild-ride-and-got-swept-away-in-the-water-rescued-by-locals/
- Published: 2025-06-16T18:42:27+00:00
- Author: ಹೊಸಕನ್ನಡ ನ್ಯೂಸ್

Udupi: ಕರಾವಳಿಯಾದ್ಯಂತ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ನದಿ ಹಳ್ಳ ಕೊಳ್ಳಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಬೈಕ್ ಸವಾರರಿಬ್ಬರು ತುಂಬಿ ಹರಿಯುತ್ತಿರುವ
ನೀರಿನಲ್ಲಿ ಹುಚ್ಚಾಟವಾಡಲು ಹೋಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.

Sponsored

ಇನ್ನು ಈ ಇಬ್ಬರು ಸವಾರರು ಸೇತುವೆ ದಾಟುವ ಸಾಹಸ ಮಾಡಲು ಹೋಗಿ, ಸೇತುವೆ ಮೇಲೆ ಜೋರಾಗಿ ಹರಿಯುತ್ತಿದ್ದ
ನೀರಿಗೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಈ ಸಮಯದಲ್ಲಿ ಸಮಯ ಪ್ರಜ್ಞೆಯಿಂದ ಸ್ಥಳೀಯರು ಈ ಯುವಕರನ್ನು
ರಕ್ಷಣೆ ಮಾಡಿದ್ದಾರೆ. ಈ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದ ಒಡಾಕೆರೆಯಲ್ಲಿ ನಡೆದಿದೆ.

Advertisement

Advertisement

Advertisement
