# ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/belthangady-news-6/
- Published: 2022-07-18T19:50:21+00:00
- Author: ನಿಶ್ಮಿತಾ ಎನ್.

ಭಾರಿ ಮಳೆಯ ಹಿನ್ನೆಲೆಯಿಂದ ಬಂಟ್ವಾಳ ಮತ್ತು ಬೆಳ್ತಂಗಡಿಯ ರಾಷ್ಟ್ರೀಯ ಹೆದ್ದಾರಿ 73ರ ಕೆಲವು ಕಡೆಗಳಲ್ಲಿ
ಗುಡ್ಡ ಮತ್ತು ಅಲ್ಲಲ್ಲಿ ಮಣ್ಣು ಕುಸಿದು ಸಂಚಾರಕ್ಕೆ ಸಮಸ್ಯೆ ಉಂಟಾದ ಘಟನೆ ವರದಿಯಾಗಿದೆ.

Sponsored

![](https://hosakannada.com/wp-content/uploads/2022/07/IMG_20220718_194728.jpg)

Advertisement

Advertisement

ಹಳೆಗೇಟು, ವಗ್ಗದ ಬಳಿ ಗುಡ್ಡವು ಕುಸಿತಗೊಂಡಿದ್ದು, ರಸ್ತೆಯಲ್ಲಿ ಬಂಡೆಗಳು ಮತ್ತು ಮರಗಳು ಬಿದ್ದು
ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಈ ಗುಡ್ಡ ಕುಸಿತದಿಂದ ಸ್ಥಳೀಯರಲ್ಲಿ, ವಾಹನ ಸವಾರರಲ್ಲಿ ಆತಂಕ ಎದುರಾಗಿದೆ.

ಇತ್ತ ಶಿರಾಡಿ ಘಾಟ್ನಲ್ಲಿ ರಸ್ತೆ ಸಂಚಾರ ಬಂದ್ ಆದ ಕಾರಣ, ಈಗ ಈ ರಸ್ತೆಗಳಲ್ಲಿ ಹೆಚ್ಚು ವಾಹನಗಳು 
ಸಂಚರಿಸುತ್ತಿವೆ. ಇಲ್ಲಿಯೂ ಸಂಚಾರ ಬಂದ್ ಆದರೆ ವಾಹನ ಸಂಚಾರಕ್ಕೆ ಮತ್ತು ಜನರಿಗೆ ತುಂಬಾನೇ ಕಷ್ಟಕರವಾಗಲಿದೆ.

Advertisement
