# ಬೆಳ್ತಂಗಡಿ | ಮುಂಡಾಜೆಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸರ ದಾಳಿ, ಎರಡು ಟಿಪ್ಪರ್ ಹಾಗೂ ದೋಣಿ ವಶಕ್ಕೆ

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/beltangady-mundaje-sand-and-police-ride/
- Published: 2021-11-03T14:47:09+00:00
- Author: ನಿಶ್ಮಿತಾ ಎನ್.

ಮರಳುಗಾರಿಗೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬಂಟ್ವಾಳ ಎಎಸ್ಪಿ ಮತ್ತು ತಂಡ ಇಂದು ಬೆಳಗ್ಗಿನ
ಜಾವ ಮಾರುವೇಷದಲ್ಲಿ ಏಕಾಏಕಿ ದಾಳಿ ನಡೆಸಿದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡಾಜೆ 
ಗ್ರಾಮದ ಹೊಸಕಾಪು ಎಂಬಲ್ಲಿ ನಡೆದಿದೆ.

Sponsored

![](https://hosakannada.com/wp-content/uploads/2021/11/IMG_20211103_144536.jpg)

ದಾಳಿ ವೇಳೆ ಮರಳುಗಾರಿಕೆಗೆ ಬಳಸುತ್ತಿದ್ದ ಎರಡು ದೋಣಿ ಹಾಗೂ ಎರಡು ಟಿಪ್ಪರ್ ವಾಹನವನ್ನು ವಶಪಡಿಸಿಕೊಂಡು
ಧರ್ಮಸ್ಥಳ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Advertisement

Advertisement

![](https://hosakannada.com/wp-content/uploads/2021/11/IMG_20211103_144552.jpg)

ಟಿಪ್ಪರ್ ವಾಹನ ಉಜಿರೆ ಮತ್ತು ಸೋಮಂತ್ತಡ್ಕದ ನಿವಾಸಿಗಳಿಗೆ ಸೇರಿದ್ದು ಎಂದು ತಿಳಿದುಬಂದಿದೆ.

![](https://hosakannada.com/wp-content/uploads/2021/11/IMG_20211103_144514.jpg)

ಎರಡು ಕಡೆ ದಾಳಿ ನಡೆದಿದ್ದು, ಈ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಧರ್ಮಸ್ಥಳ
ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.

Advertisement
