# ಬೆಳ್ಳಾರೆ:ಮಳೆಯಿಂದಾಗಿ ರಸ್ತೆಗೆ ಜರಿದ ಗುಡ್ಡ-ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟ ಎಸ್.ಡಿ.ಪಿ.ಐ!!

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/bellare-heavy-rain-and-road-block/
- Published: 2022-07-07T15:43:00+00:00
- Author: ಹೊಸಕನ್ನಡ ನ್ಯೂಸ್

ಬೆಳ್ಳಾರೆ:ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವರುಣನ ಆರ್ಭಟ ಹೆಚ್ಚಿದ್ದು ಅಲ್ಲಲ್ಲಿ ಗುಡ್ಡ ಕುಸಿತ,
ಪ್ರವಾಹದಂತಹ ಪ್ರಸಂಗಗಳು ಬೆಳಕಿಗೆ ಬರುತ್ತಲೇ ಇವೆ. ಈ ನಡುವೆ ಬೆಳ್ಳಾರೆಯಲ್ಲೂ ರಸ್ತೆಗೆ ಗುಡ್ಡ ಕುಸಿದಿದ್ದು,
ಕೂಡಲೇ ಕಾರ್ಯಪ್ರವೃತ್ತರಾದ ಎಸ್.ಡಿ.ಪಿ.ಐ ಕಾರ್ಯಕರ್ತರ ತಂಡ ಮಣ್ಣು ತೆರವುಗೊಳಿಸಿ ಸುಗಮ ಸಂಚಾರಕ್ಕೆ
ಅನುವು ಮಾಡಿಕೊಟ್ಟ ಘಟನೆಯೊಂದು ನಡೆದಿದೆ.

Sponsored

![](https://hosakannada.com/wp-content/uploads/2022/07/IMG-20220707-WA0037.jpg)

Advertisement

Advertisement

ಬೆಳ್ಳಾರೆಯ ವೆಂಕಟರಮಣ ದೇವಸ್ಥಾನದ ಸಮೀಪದ ಮುಖ್ಯ ರಸ್ತೆಗೆ ಮಳೆಯಿಂದಾಗಿ ಗುಡ್ಡವೊಂದು ಕುಸಿದು ಸಂಚಾರಕ್ಕೆ
ತೊಡಕಾಗಿತ್ತು. ಕೂಡಲೇ ವಿಷಯ ತಿಳಿದ ಎಸ್ ಡಿ ಪಿ ಐ ಕಾರ್ಯಕರ್ತರು ಮಣ್ಣು ತೆರವುಗೊಳಿಸಿ ಇತರರಿಗೆ 
ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಸಮಿತಿಯ ಅಧ್ಯಕ್ಷ ಶಾಹಿದ್ ಬೆಳ್ಳಾರೆ, ಉಪಾಧ್ಯಕ್ಷರಾದ
ಶಫಿಕ್ ಬೆಳ್ಳಾರೆ, ಕಾರ್ಯದರ್ಶಿ ಜಾಬಿರ್, ಬೂತ್ ಅಧ್ಯಕ್ಷರಾದ ಸದ್ದಾಂ, ಆಸಿರ್, ಸ್ಥಳೀಯರಾದ ಅತಾವುಲ್ಲ
ಹಾಗೂ ಇತರ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement
