# ಬಂಟ್ವಾಳ : ಮೊಬೈಲ್ ಫೋನಲ್ಲಿ ಮಾತನಾಡುತ್ತಾ ಸ್ಕೂಟಿಯಲ್ಲಿ ಹೊರ ಹೋದ ವ್ಯಕ್ತಿ ನಾಪತ್ತೆ!

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/bantwala-missing-case/
- Published: 2022-03-06T13:28:38+00:00
- Author: ಹೊಸಕನ್ನಡ ನ್ಯೂಸ್

ಬಂಟ್ವಾಳ : ಮೊಬೈಲ್ ನಲ್ಲಿ ಮಾತನಾಡುತ್ತಾ ಮನೆಯಲ್ಲಿದ್ದ ದ್ವಿಚಕ್ರ ವಾಹನದಲ್ಲಿ ತೆರಳಿದ ಯುವಕನೊಬ್ಬ
ಹಿಂತಿರುಗಿ ಮನೆಗೆ ಬಾರದೇ ನಾಪತ್ತೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

Sponsored

ತಸ್ಲೀಂ ಇಬ್ರಾಹಿಂ ( 30) ನಾಪತ್ತೆಯಾದ ಯುವಕ. ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಪಂಜಿಕಲ್ಲುವಿನ ಈ
ಯುವಕ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಕೊರೊನಾ ಕಾಲದಲ್ಲಿ ಊರಿಗೆ ಬಂದಿದ್ದನು.

Advertisement

Advertisement

ಕಳೆದ ಜನವರಿಯಲ್ಲಿ ಮತ್ತೆ ವಿಸಿಟಿಂಗ್ ವೀಸಾದಲ್ಲಿ ದುಬೈಗೆ ಹೋದವನು ಫೆ.18 ರಂದು ಮತ್ತೆ ಊರಿಗೆ ವಾಪಾಸಾಗಿದ್ದನು.

ಫೆ. 24 ರಂದು ಮನೆಯಲ್ಲಿ ಊಟ ಮಾಡಿ 2 ಗಂಟೆ ಸುಮಾರಿಗೆ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ಮನೆಯಲ್ಲಿದ್ದ
ಆಕ್ಟೀವಾದಲ್ಲಿ ತೆರಳಿದ್ದವನು ಮನೆಗೆ ಹಿಂತಿರುಗಿಲ್ಲ.

ಸಂಬಂಧಿಕರಲ್ಲಿ ವಿಚಾರಿಸಿದಾಗ ಆತ ಪತ್ತೆಯಾಗಿಲ್ಲ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

Advertisement
