# ವಿಟ್ಲ : ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಅಪಘಾತ| ಸವಾರರಿಗೆ ಗಾಯ!

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/autoriksaw-and-scooter-accident/
- Published: 2022-04-28T12:28:09+00:00
- Author: ಹೊಸಕನ್ನಡ ನ್ಯೂಸ್

ವಿಟ್ಲ : ಇಂದು ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿ ಸವಾರರಿಬ್ಬರು ಗಾಯಗೊಂಡ
ಘಟನೆಯೊಂದು ವಿಟ್ಲ ಸಮೀಪ ಕಂಬಳಬೆಟ್ಟು ಎಂಬಲ್ಲಿ ನಡೆದಿದೆ.

Sponsored

ಮಹಮ್ಮದ್ ಯಾಸಿನ್ (21) ಹಾಗೂ ಅಬ್ದುಲ್ ರಹಿಮಾನ್ ಗಾಯಗೊಂಡ ಸವಾರರಾಗಿದ್ದು, ಯಾಸಿನ್ ಕಾಲಿಗೆ ಗಂಭೀರ
ಗಾಯವಾಗಿದ್ದು, ರಹಿಮಾನ್ ನ ಕೈಗೆ ಗಾಯವಾಗಿದೆ. ಅವರಿಬ್ಬರು ತಾವೇ ಬಿದ್ದು ಗಾಯ ಗೊಂಡಿರುವುದಾಗಿ ಆಸ್ಪತ್ರೆಯಲ್ಲಿ
ತಿಳಿಸಿದ್ದಾರೆ ಎನ್ನಲಾಗುತ್ತಿದೆ.

Advertisement

Advertisement

ಅಪಘಾತ ಇಂದು ಬೆಳಿಗ್ಗೆ ಸಂಭವಿಸಿದ್ದು ರಿಕ್ಷಾ ಚಾಲಕ ಕನ್ಯಾನ ಮೂಲದವ ಎಂದು ತಿಳಿದು ಬಂದಿದೆ. ಅಪಘಾತ
ನಡೆಯುತ್ತಲೇ ರಿಕ್ಷಾ ಚಾಲಕ ತಪ್ಪಿಸಿ ಓಡಲು ಯತ್ನಿಸಿದ್ದಾನೆ. ಈ ವೇಳೆ ಆತನನ್ನು ಸ್ಥಳೀಯರು ಹಿಡಿದು
ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement
