# ಆಗುಂಬೆ ಘಾಟಿಯಲ್ಲಿ 10 ದಿನ ವಾಹನ ಸಂಚಾರ ನಿಷೇಧ | ಪರ್ಯಾಯ ಮಾರ್ಗ ಯಾವುದು?

- Link: https://hosakannada.com/%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%95%e0%b2%a8%e0%b3%8d%e0%b2%a8%e0%b2%a1/aghumbe-ghati/
- Published: 2022-03-03T21:44:44+00:00
- Author: ಹೊಸಕನ್ನಡ ನ್ಯೂಸ್

ಆಗುಂಬೆ ಘಾಟಿಯಲ್ಲಿ ರಸ್ತೆ ದುರಸ್ಥಿ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಘಾಟಿಯಲ್ಲಿ
ವಾಹನ ಸಂಚಾರ ನಿಷೇಧಗೊಳಿಸಿರುವುದಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

Sponsored

ಮಾರ್ಚ್ 5 ರಿಂದ ಮಾರ್ಚ್ 15 ರವರೆಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಈ ಕುರಿತು ಆದೇಶದಲ್ಲಿ ತಿಳಿಸಲಾಗಿದೆ. ಲಘು ವಾಹನಗಳು ಮತ್ತು ಭಾರೀ ವಾಹನಗಳಿಗೆ ಪ್ರತ್ಯೇಕ ಮಾರ್ಗ 
ಸೂಚಿಸಲಾಗಿದೆ.

Advertisement

Advertisement

ಯಾವುದು ಪರ್ಯಾಯ ಮಾರ್ಗ ?

ಪ್ರಸ್ತುತ ಮಾರ್ಗ : ಶಿವಮೊಗ್ಗ, ತೀರ್ಥಹಳ್ಳಿ, ಆಗುಂಬೆ, ಉಡುಪಿ, ಮಂಗಳೂರು.

ಪರ್ಯಾಯ ಮಾರ್ಗ : ಲಘು ವಾಹನಗಳಿಗೆ – ಶಿವಮೊಗ್ಗ, ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಮಾಳಾ ಘಾಟ್, 
ಕಾರ್ಕಳ, ಉಡುಪಿ

ಭಾರೀ ವಾಹನಗಳು : ಶಿವಮೊಗ್ಗ, ಆಯನೂರು, ಆನಂದಪುರ, ಸಾಗರ, ಹೊನ್ನಾವರ ಮೂಲಕ ಚಲಿಸಬೇಕು ಎಂದು ಜಿಲ್ಲಾಧಿಕಾರಿಗಳು
ಆದೇಶದಲ್ಲಿ ತಿಳಿಸಿದ್ದಾರೆ.

Advertisement
