# ಹೆತ್ತವರನ್ನೇ ನಡುರಸ್ತೆಯಲ್ಲಿ ಕೊಂದ ಮಗ!! ಘಟನೆಯ ಬಳಿಕ ಪೊಲೀಸರಿಗೆ ಕರೆ ಮಾಡಿ ಪರಾರಿ -ಆರೋಪಿಯ ಪತ್ತೆಗಾಗಿ ಮುಂದುವರಿದ ಶೋಧ

- Link: https://hosakannada.com/%e0%b2%95%e0%b2%be%e0%b2%b8%e0%b2%b0%e0%b2%97%e0%b3%8b%e0%b2%a1%e0%b3%81/son-killed-his-own-parent/
- Published: 2022-04-10T19:21:00+00:00
- Author: ಹೊಸಕನ್ನಡ ನ್ಯೂಸ್

ಹೆತ್ತ ತಂದೆ ತಾಯಿಯನ್ನು ಪಾಪಿ ಮಗನೊಬ್ಬ ನಡುರಸ್ತೆಯಲ್ಲಿಯೇ ಕೊಲೆ ಮಾಡಿರುವ ಘಟನೆಯೊಂದು ಕೇರಳದ ತ್ರಿಶೂರ್
ನಲ್ಲಿ ನಡೆದಿದೆ.

Sponsored

ಆರೋಪಿ ಅನೀಶ್ ( 30 ) ಎಂಬಾತನೇ ಈ ಕೃತ್ಯ ಮಾಡಿ, ತಲೆಮರೆಸಿಕೊಂಡಿದ್ದಾನೆ.

Advertisement

Advertisement

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ತ್ರಿಶೂರ್ ಇಂಚಕುಂಡ್ ಮೂಲದ ಕುಟ್ಟನ್ ( 60)
ಮತ್ತು ಪತ್ನಿ ಚಂದ್ರಿಕಾ ( 55) ಕೊಲೆಯಾದ ವ್ಯಕ್ತಿಗಳು.

ಕೌಟುಂಬಿಕ ಕಲಹ ಹಿನ್ನೆಲೆ ಹೆತ್ತವರನ್ನು ಮಗ ಅನೀಶ್ ಕೊಲೆಗೈದಿದ್ದಾನೆ.

ಇಂದು ಮನೆಮುಂದೆಯ ಹುಲ್ಲು ಕಟಾವು ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಅನೀಶ್ ಚಾಕುವಿನಿಂದ
ಕೊಲೆ ಮಾಡಿದ್ದಾನೆ. ನಂತರ ಸ್ವತಃ ಪೊಲೀಸರಿಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದ್ದಾನೆ. ಹಾಗೂ ಕೂಡಲೇ
ಪರಾರಿಯಾಗಿದ್ದಾನೆ.

Advertisement
