# ರೈಲ್ವೇ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ, ರೈಲು ಬಡಿದು 16 ರ ಬಾಲಕಿ ದಾರುಣ ಸಾವು!!!

- Link: https://hosakannada.com/%e0%b2%95%e0%b2%be%e0%b2%b8%e0%b2%b0%e0%b2%97%e0%b3%8b%e0%b2%a1%e0%b3%81/rail-accident/
- Published: 2022-05-15T08:28:27+00:00
- Author: ಹೊಸಕನ್ನಡ ನ್ಯೂಸ್

ರೈಲ್ವೇ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ರೈಲು ಡಿಕ್ಕಿ ಹೊಡೆದು
16 ವರ್ಷದ ಬಾಲಕಿಯೋರ್ವಳು ಮೃತಪಟ್ಟ ದಾರುಣ ಘಟನೆಯೊಂದು ಕೇರಳದಲ್ಲಿ ಸಂಭವಿಸಿದೆ. ನಿನ್ನೆ ಮಧ್ಯಾಹ್ನ
1 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.

Sponsored

ಕರುವಂತುರುತಿ ಮೂಲದ ನಫತ್ ಫತಾಹ್ (16) ಮೃತ ಬಾಲಕಿ.

Advertisement

Advertisement

ನಿನ್ನೆ ತನ್ನ ಸ್ನೇಹಿತೆ ಜೊತೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕಿ
ನಫತ್ ಫತಾಹ್ ಚಲಿಸುತ್ತಿದ್ದ ಕೊಯಮತ್ತೂರು-ಮಂಗಳೂರು ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದಿದ್ದಾಳೆ.

ಪರಿಣಾಮ ಪಕ್ಕದ ನದಿಗೆ ಎಸೆಲ್ಪಟ್ಟಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ನದಿಯ ಪ್ರವಾಹದಿಂದ
ಕೊಚ್ಚಿ ಹೋಗಿದ್ದ ಆಕೆಯ ಶವವನ್ನು ಪೊಲೀಸರು ಮೇಲೆತ್ತಿದ್ದಾರೆ. ಘಟನೆಯಲ್ಲಿ ನಫತ್ ಫತಾಹ್ ಜೊತೆಗಿದ್ದ
ಆಕೆಯ ಸ್ನೇಹಿತೆಯೂ ಗಾಯಗೊಂಡಿದ್ದಾಳೆ. ಇದೀಗ ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದಾರೆ.

Advertisement
